ನವದೆಹಲಿ:ಬಾಲಿವುಡ್​ ನಟರಾಗಿದ್ದ ಸುಶಾಂತ್​ ಸಿಂಗ್​ ರಜಪೂತ್​ ಅವರ ಆತ್ಮಹತ್ಯೆ ಪ್ರಕರಣವನ್ನು ಬಳಸಿಕೊಂಡು ಬಿಹಾರ ಸರ್ಕಾರದ ನೆರವಿನಿಂದ ಕೇಂದ್ರ ಸರ್ಕಾರ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ. ಅಲ್ಲದೆ, ಆ ಕಳಂಕವನ್ನು ಉದ್ಧವ್​ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರಕ್ಕೆ ಅಂಟಿಸಲು ಹುನ್ನಾರ ನಡೆಸಿದೆ ಎಂದು ಶಿವಸೇನೆಯ ಮುಖಂಡ ಸಂಜಯ್​ ರಾವತ್​ ಆರೋಪಿಸಿದ್ದಾರೆ.
ಭಾನುವಾರ ಸುದ್ದಿಗಾರರ ಜತೆ ಮಾತನಾಡಿರುವ ಅವರು ಸುಶಾಂತ್​ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸುವ ಸಾಮರ್ಥ್ಯ ಮುಂಬೈ ಪೊಲೀಸರಿಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಅಳಿಯನ ಕಿರುಕುಳ ತಾಳದ ತಂದೆ ನೇಣಿಗೆ ಕೊರಳೊಡ್ಡಿದ… ತಂದೆಯ ಸಾವನ್ನು ಅರಗಿಸಿಕೊಳ್ಳದ ಮಕ್ಕಳು ರೈಲಿಗೆ ತಲೆಯೊಡ್ಡಿದರು.
ಸುಶಾಂತ್​ ಪ್ರಕರಣದ ಕುರಿತು ಬಿಹಾರ ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದಾರೆ. ಇದಕ್ಕೂ ಮೊದಲೇ ಮುಂಬೈ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದರು. ಒಂದೇ ಪ್ರಕರಣದ ತನಿಖೆಯನ್ನು ಎರಡು ಪೊಲೀಸ್​ ಪಡೆಯವರು ಮಾಡಿದರೆ ಗೊಂದಲ ಉಂಟಾಗಿ ಆಯೋಮಯ ಸ್ಥಿತಿ ನಿರ್ಮಾಣವಾಗಬಹುದು ಎಂದು ಮುಂಬೈ ಪೊಲೀಸರು ಸುಪ್ರೀಂಕೋರ್ಟ್​ಗೆ ಪ್ರಮಾಣಪತ್ರ ಸಲ್ಲಿಸಿದ ಬೆನ್ನಲ್ಲೇ ಸಂಜಯ್​ ರಾವತ್​ ಈ ಹೇಳಿಕೆ ನೀಡಿರುವುದು ಗಮನಾರ್ಹ.
ಬಿಹಾರ ಸರ್ಕಾರ ಮನವಿ ಮಾಡಿಕೊಂಡಿತು ಎಂಬ ಒಂದೇ ಕಾರಣಕ್ಕಾಗಿ ಸಿಬಿಐ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣದಲ್ಲಿ ಎಫ್​ಐಆರ್​ ದಾಖಲಿಸಿಕೊಳ್ಳಬಾರದಿತ್ತು ಎಂದು ಮುಂಬೈ ಪೊಲೀಸರು ಸುಪ್ರೀಂಕೋರ್ಟ್​ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದರು ಎನ್ನಲಾಗಿದೆ.
ಮರ್ಯಾದೆಗೇಡು ಹತ್ಯೆ ಮಾಡಿ ತರಾತುರಿಯಲ್ಲಿ ಅಂತ್ಯಸಂಸ್ಕಾರಕ್ಕೆ ಯತ್ನ; ಪೊಲೀಸರಿಗೆ ಸಿಕ್ಕಿದ್ದಾದರೂ ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 4 =
Remember me
