ನವದೆಹಲಿ:ಸ್ಮಾರ್ಟ್ ಫೋನ್​ಗಳಲ್ಲಿನ ಪೂರ್ವ ಸಂಸ್ಥಾಪಿತ (ಪ್ರಿ-ಇನ್​ಸ್ಟಾಲ್ಡ್) ಆಪ್​ಗಳು ಭದ್ರತೆ ದೃಷ್ಟಿಯಿಂದ ಅಪಾಯಕಾರಿಯಾಗುವ ಸಾಧ್ಯತೆಯಿರುವುದರಿಂದ ಅವುಗಳ ವಿರುದ್ಧ ಗದಾಪ್ರಹಾರಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಆಪ್​ಗಳನ್ನು ತೆಗೆದುಹಾಕುವ ಹಾಗೂ ಪ್ರಮುಖ ಆಪರೇಟಿಂಗ್ ಸಿಸ್ಟಂ (ಒಎಸ್) ಅಪ್​ಡೇಟ್​ಗಳನ್ನು ಪರಿಶೀಲನೆಗೆ ಒಳಪಡಿಸಲು ಅವಕಾಶ ಇರುವಂತೆ ರೂಪಿಸಬೇಕೆಂದು ಎಲ್ಲ ಸ್ಮಾರ್ಟ್​ಫೋನ್ ತಯಾರಕರಿಗೆ ತಾಕೀತು ಮಾಡಲು ಕೇಂದ್ರ ಯೋಜನೆ ರೂಪಿಸಿದೆ.
ಬೇಹುಗಾರಿಕೆ ಮತ್ತು ಬಳಕೆದಾರರ ಡೇಟಾ ದುರುಪಯೋಗ ಕಳವಳದ ಹಿನ್ನೆಲೆಯಲ್ಲಿ ಈ ಹೊಸ ನಿಯಮಗಳ ಜಾರಿಗೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ (ಐಟಿ) ಚಿಂತನೆ ನಡೆಸುತ್ತಿದೆ. ‘ಚೀನಾ ಸಹಿತ ಯಾವುದೇ ವಿದೇಶಗಳು ಪೂರ್ವ ಸಂಸ್ಥಾಪಿತ ಆಪ್​ಗಳನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ ಎನ್ನುವುದನ್ನು ನಾವು ಖಾತರಿಪಡಿಸಿ ಕೊಳ್ಳಬೇಕಿದೆ. ಇದೊಂದು ರಾಷ್ಟ್ರೀಯ ಭದ್ರತೆಯ ಪ್ರಶ್ನೆಯಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೊಸ ನಿಯಮವು ಭಾರತದಲ್ಲಿ ನೂತನ ಸ್ಮಾರ್ಟ್ ಫೋನ್ ಮಾಡೆಲ್​ಗಳ ಬಿಡುಗಡೆ ವೇಳಾಪಟ್ಟಿಯನ್ನು ವಿಳಂಬಗೊಳಿಸುವ ಸಾಧ್ಯತೆಯಿದೆ.
ಅಲ್ಲದೆ ಭಾರಿ ಆದಾಯ ತರುವ ಪ್ರಿ-ಇನ್​ಸ್ಟಾಲ್ಡ್ ಆಪ್​ಗಳನ್ನು ತೆಗೆಯುವುದರಿಂದ ಸ್ಯಾಮ್ಂಗ್, ಷಿಒಮಿ, ವಿವೊ ಮತ್ತು ಆಪಲ್​ಗಳಂಥ ಫೋನ್ ಉತ್ಪಾದಕರಿಗೆ ನಷ್ಟ ಉಂಟಾಗಬಹುದು ಎಂದು ವಿಶ್ಲೇಷಿಸಲಾಗಿದೆ.
ಡಿಲೀಟ್ ಆಗದ ಆ್ಯಪ್​:ಪ್ರಸ್ತುತ ಬಹುತೇಕ ಸ್ಮಾರ್ಟ್​ಫೋನ್​ಗಳು ಡಿಲೀಟ್ ಮಾಡಲಾಗದ ಪ್ರಿ-ಇನ್​ಸ್ಟಾಲ್ಡ್ ಆಪ್​ಗಳೊಂದಿಗೆ ಬರುತ್ತಿವೆ. ಷಿಒಮಿಯ ಆಪ್ ಸ್ಟೋರ್ ಗೆಟ್​ಆಪ್ಸ್, ಸ್ಯಾಮ್ಂಗ್​ನ ಪೇಮೆಂಟ್ ಆಪ್, ಸ್ಯಾಮ್ಂಗ್ ಪೇ ಮಿನಿ, ಐಫೋನ್ ತಯಾರಕ ಆಪಲ್​ನ ಬ್ರೌಸರ್ ಸಫಾರಿ ಮೊದಲಾದವು ಅದಕ್ಕೆ ಕೆಲವು ಉದಾಹರಣೆ. ಇ-ಮಾರುಕಟ್ಟೆಯ ಆಪ್​ಗಳು ಇದರಲ್ಲಿ ಸೇರಿವೆ. ಹೊಸ ನಿಯಮಗಳ ಪ್ರಕಾರ ಸ್ಮಾರ್ಟ್​ಫೋನ್ ತಯಾರಕರು ಇಂಥ ಆಪ್​ಗಳಿಗೆ ಅನ್-ಇನ್​ಸ್ಟಾಲ್ ಆಯ್ಕೆಯನ್ನು ಕೊಡಬೇಕಾಗುತ್ತದೆ. ಈ ನಿಯಮ ಪಾಲನೆಯ ಖಾತರಿಗಾಗಿ ಆ ಹೊಸ ಮಾದರಿಗಳನ್ನು ಭಾರತೀಯ ಮಾನಕ ಸಂಸ್ಥೆ (ಬಿಐಎಸ್) ನೇಮಿಸಿದ ಪ್ರಯೋಗಾಲಯವೊಂದು ಪರಿಶೀಲಿಸುತ್ತದೆ. ಪ್ರತಿ ಪ್ರಮುಖ ಆಪರೇಟಿಂಗ್ ಸಿಸ್ಟಂ ಅಪ್​ಡೇಟ್ ಅನ್ನು ಪರಿಶೀಲನೆಗೆ ಒಳಪಡಿಸುವುದನ್ನು ಕೂಡ ಸರ್ಕಾರ ಕಡ್ಡಾಯಗೊಳಿಸಲು ಬಯಸಿದೆ.
ಚೀನಾದ ಪಾರುಪತ್ಯ:ಭಾರತದ ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳ ಕಾರುಬಾರು ಹೆಚ್ಚಿದೆ. ಇಲ್ಲಿ ಮಾರಾಟವಾಗುವ ಸ್ಮಾರ್ಟ್​ಫೋನ್​ಗಳಲ್ಲಿ ಅರ್ಧದಷ್ಟು ಷಿಒಮಿ, ಒಪ್ಪೊ ಮತ್ತು ವಿವೋ ಕಂಪನಿಗಳದ್ದಾಗಿದೆ ಎಂದು ಕೌಂಟರ್​ಪಾಯಿಂಟ್ ದತ್ತಾಂಶ ತಿಳಿಸಿದೆ. ದಕ್ಷಿಣ ಕೊರಿಯಾದ ಸ್ಯಾಮ್ಂಗ್ ಪಾಲು ಶೇ.20 ಹಾಗೂ ಆಪಲ್ ಪಾಲು ಶೇ.3 ಆಗಿದೆ.
ಗಂಭೀರ ಅಪಾಯ:ಭಾರತದಲ್ಲಿ ಬಳಸಲಾಗುತ್ತಿರುವ ಪ್ರಮುಖ ಸ್ಮಾರ್ಟ್​ಫೋನ್​ಗಳಲ್ಲಿ ಪ್ರಿ-ಇನ್​ಸ್ಟಾಲ್ಡ್ ಆಪ್/ಬ್ಲೋಟ್​ವೇರ್​ಗಳಿದ್ದು ಗೌಪ್ಯತೆ/ಮಾಹಿತಿ ಭದ್ರತೆ ಕುರಿತ ಗಂಭೀರ ಸಮಸ್ಯೆಗಳನ್ನು ಒಡ್ಡುತ್ತವೆ ಎಂದು ಫೆ.8ರ ಐಟಿ ಸಚಿವಾಲಯದ ಸಭೆಯೊಂದರಲ್ಲಿ ಮಂಡಿಸಲಾದ ಗೌಪ್ಯ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ಷಿಒಮಿ, ಸ್ಯಾಮ್ಂಗ್, ಆಪಲ್ ಮತ್ತು ವಿವೋ ಕಂಪ ನಿಯ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.
ಒಂದು ವರ್ಷ ಗಡುವು:ಹೊಸ ನಿಯಮ ಜಾರಿಯಾದ ಒಂದು ವರ್ಷದೊಳಗೆ ಪೂರ್ವ-ಸಂಸ್ಥಾಪಿತ ಆಪ್​ಗಳನ್ನು ಡಿಲೀಟ್ ಅವಕಾಶ ಗ್ರಾಹಕರಿಗೆ ದೊರೆಯುವಂತೆ ಮಾಡಬೇಕು. ಜತೆಗೆ ಹೊಸ ನಿಯಂತ್ರಣ ಅಂಶಗಳನ್ನು ಪಾಲಿಸುವಂತೆ ಸ್ಮಾರ್ಟ್​ಫೋನ್ ತಯಾರಕರಿಗೆ ತಾಕೀತು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ, ಈ ನಿಯಮ ಅನುಷ್ಠಾನಕ್ಕೆ ಇನ್ನೂ ದಿನಾಂಕ ನಿಗದಿ ಪಡಿಸಲಾಗಿಲ್ಲ.
ಚೀನಿ ಆ್ಯಪ್​ಗಳ ಮೇಲೆ ಪ್ರಹಾರ:ಕೇಂದ್ರವು ಚೀನಾದ ಡಿಜಿಟಲ್ ವ್ಯವಹಾರದ ಮೇಲೆ ಕೆಂಗಣ್ಣು ಬೀರಿದ್ದು, ಟಿಕ್​ಟಾಕ್​ಸಹಿತ 300ಕ್ಕೂ ಹೆಚ್ಚು ಆಪ್ ನಿಷೇಧಿಸಿದೆ. ಚೀನಿ ಸಂಸ್ಥೆಗಳ ಹೂಡಿಕೆ ಮೇಲೆ ನಿಗಾ ಹೆಚ್ಚಿಸಿದೆ. ಹುವೇ ಮತ್ತು ಹೈಕ್​ವಿಷನ್​ನಂಥ ಚೀನಿ ಸಂಸ್ಥೆಗಳ ತಂತ್ರಜ್ಞಾನಕ್ಕೆ ಹಲವೆಡೆ ನಿಷೇಧವಿದೆ. ಬೇಹುಗಾರಿಕೆಗೆ ಬಳಸಬಹುದೆಂಬ ಆತಂಕವೇ ಇದಕ್ಕೆ ಕಾರಣವಾಗಿದೆ.
ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

ಹತ್ತನೇ ತರಗತಿ ವಿದ್ಯಾರ್ಥಿನಿಗೆ ಹೃದಯಾಘಾತ; ಫ್ರೆಂಡ್ ಜತೆ ಮಾತನಾಡುತ್ತಲೇ ಕುಸಿದು ಬಿದ್ದು ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + nineteen =
Remember me
