ನವದೆಹಲಿ:ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಏಪ್ರಿಲ್​ 1 ರಿಂದ ಆರಂಭವಾಗುವ ಪ್ರಸಕ್ತ ಹಣಕಾಸು ವರ್ಷದ ಬಜೆಟ್​ ಅನ್ನು ಸಂಸತ್ತಿನಲ್ಲಿಂದು (ಫೆ.1) ಪ್ರಸ್ತುತ ಪಡಿಸಿದರು. ಹಣಕಾಸು ಸಚಿವೆಯಾಗಿ ಇದು ಅವರ ಐದನೇ ಬಜೆಟ್​ ಮಂಡನೆಯಾಗಿದೆ. ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ, ಅಂಚಿನಲ್ಲಿರುವವರಿಗೆ ಸವಲತ್ತು, ಮೂಲಸೌಕರ್ಯ, ಸಾಮರ್ಥ್ಯದ ಸದ್ಬಳಕೆ, ಪರಿಸರ ಸ್ನೇಹಿ ಅಭಿವೃದ್ಧಿ, ಯುವಶಕ್ತಿಗೆ ಉತ್ತೇಜನ, ಆರ್ಥಿಕ ಸುಧಾರಣೆ ಎಂಬ ಏಳು ಆದ್ಯತೆಗಳ ಮೇಲೆ ಬಜೆಟ್​ ಮಂಡನೆ ಮಾಡಲಾಗಿದೆ.
ಬಜೆಟ್​ನಲ್ಲಿ ಕೆಲವು ಸುಂಕಗಳು ಮತ್ತು ತೆರಿಗೆಗಳಲ್ಲಿ ಬದಲಾವಣೆ ಮಾಡಿರುವುದರಿಂದ ಕೆಲವು ವಸ್ತುಗಳು ಅಗ್ಗವಾಗುತ್ತವೆ ಮತ್ತು ಕೆಲವು ದುಬಾರಿಯಾಗುತ್ತವೆ. ಹೀಗಾಗಿ ಏಪ್ರಿಲ್​ 1 ರಿಂದ ಯಾವುದು ಅಗ್ಗ ಮತ್ತು ಯಾವುದು ದುಬಾರಿಯಾಗಲಿದೆ ಎಂಬ ಪಟ್ಟಿ ಈ ಕೆಳಕಂಡಂತಿದೆ.
ಯಾವುದು ಅಗ್ಗ?1. ಟಿವಿ ಪ್ಯಾನೆಲ್ಸ್​ ಬಿಡಿ ಭಾಗಗಳ ಮೇಲಿನ ಕಸ್ಟಮ್ಸ್​ ಸುಂಕವನ್ನು 2.5 ರಷ್ಟು ಕಡಿತ2. ಫೋನ್‌, ಲ್ಯಾಪ್‌ಟಾಪ್‌ ಹಾಗೂ DSLR ಕ್ಯಾಮೆರಾಗಳ ಲೆನ್ಸ್​3. ಲೀಥಿಯಂ ಐಯಾನ್ ಬ್ಯಾಟರಿಗಳು4. ಡಿನ್ಯಾಚರ್ಡ್ ಈಥೈಲ್ ಆಲ್ಕೋಹಾಲ್5. ಮೊಬೈಲ್​ ಫೋನ್​ ತಯಾರಿಕೆಗೆ ಬೇಕಾಗುವ ಕೆಲವು ಬಿಡಿಭಾಗಗಳ ಆಮದು ಮೇಲಿನ ಕಸ್ಟಮ್​ ಸುಂಕ ಕಡಿತ6. ಲ್ಯಾಬ್ ಗ್ರೌನ್​ ವಜ್ರಗಳ ತಯಾರಿಕೆಯಲ್ಲಿ ಬಳಸುವ ಬೀಜಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕ ಕಡಿತ7. ರಫ್ತು ಉತ್ತೇಜಿಸಲು ಸೀಗಡಿ ಆಹಾರದ ಮೇಲಿನ ಕಸ್ಟಮ್ಸ್ ಸುಂಕ ಕಡಿತ8. ಆಸಿಡ್-ಗ್ರೇಡ್ ಫ್ಲೋರ್ಸ್ಪಾರ್
ಯಾವುದು ತುಟ್ಟಿ?1. ಸಿಗರೇಟ್​ ಮೇಲೆ ತೆರಿಗೆ ಶೇ. 16ರಷ್ಟು ಏರಿಕೆ2. ಚಿನ್ನ ಮತ್ತು ಪ್ಲಾಟಿನಂನಿಂದ ತಯಾರಿಸಿದ ವಸ್ತುಗಳು3. ಬೆಳ್ಳಿಯಿಂದ ತಯಾರಿಸಿದ ವಸ್ತುಗಳು4. ತಾಮ್ರದ ಚೂರು5. ಸಂಯೋಜಿತ ರಬ್ಬರ್ ಮೇಲಿನ ಮೂಲ ಆಮದು ಸುಂಕ ಶೇ. 10 ರಿಂದ 25 ಕ್ಕೆ ಏರಿಕೆ4. ಅಡುಗೆ ವಿದ್ಯುತ್​ ಚಿಮಣಿ ಮೇಲಿನ ಕಸ್ಟಮ್ಸ್​ ಸುಂಕ ಶೇ. 7.5 ರಿಂದ ಶೇ. 15ಕ್ಕೆ ಏರಿಕೆ
ಅಂದಹಾಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 10ನೇ ಪೂರ್ಣ ಪ್ರಮಾಣದ ಬಜೆಟ್​ ಇದಾಗಿದ್ದು, ವಿತ್ತ ಸಚಿವೆಯಾಗಿ ನಿರ್ಮಲಾ ಸೀತಾರಾಮನ್​ ಅವರು ಮಂಡಿಸುತ್ತಿರುವ 5ನೇ ಬಜೆಟ್​ ಆಗಿದೆ. ಈ ಬಾರಿಯು ಸೂಟ್​ಕೇಸ್ ಸಂಪ್ರದಾಯವಿಲ್ಲ ಮತ್ತು ಮುದ್ರಣದ ಪ್ರತಿಗಳು ಇರುವುದಿಲ್ಲ. ಕಳೆದ ಬಾರಿಯಂತೆ ಇ ಬಜೆಟ್ ಮಂಡನೆ ಮಾಡಿದ್ದಾರೆ.(ಏಜೆನ್ಸೀಸ್​)
ಇನ್ಮುಂದೆ ನಗದು ರೂಪದಲ್ಲಿ ಕೃಷಿ ಸಾಲ ಲಭ್ಯ!

ಆದಾಯ ತೆರಿಗೆ ವಿನಾಯಿತಿ ಮಿತಿ 7 ಲಕ್ಷ ರೂ.ಗೆ ಏರಿಕೆ

ಸಾಮಾನ್ಯ ಗುರುತಿನ ಚೀಟಿಯಾಗಿ ಇನ್ನು ಮುಂದೆ ‘ಪ್ಯಾನ್ ಕಾರ್ಡ್’ ಪರಿಗಣನೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve − 4 =
Remember me
