ನವದೆಹಲಿ:ಸಂಸತ್​ನ ಬಜೆಟ್ ಅಧಿವೇಶನ ಸೋಮವಾರ ಆರಂಭವಾಗಿದ್ದು, ವಾಡಿಕೆಯಂತೆ ಮೊದಲ ದಿನ ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ ಭಾಷಣ ಮಾಡಿ ದರು. ಕರೊನಾ ಕಾಲದಲ್ಲೂ ಸರ್ಕಾರ ಮಾಡಿದ ಸಾಧನೆಗಳ ಪಟ್ಟಿಯನ್ನು ಅವರು ಮುಂದಿಟ್ಟರು. ಕೋವಿಡ್ ಸಾಂಕ್ರಾಮಿಕ 3ನೇ ವರ್ಷಕ್ಕೆ ಕಾಲಿಟ್ಟಿದ್ದರೂ ದೇಶದ ಜನತೆ ಅದರ ವಿರುದ್ಧ ಸಂಘಟಿತ ಹೋರಾಟ ಮಾಡುತ್ತಿದೆ. ಲಸಿಕೆ ಅಭಿಯಾನ ಶುರುವಾದ ಒಂದು ವರ್ಷದೊಳಗೆ 150 ಕೋಟಿಗೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದ್ದು, ವಿಶ್ವ ದಲ್ಲಿ ಅತ್ಯಧಿಕ ಚುಚ್ಚುಮದ್ದು ನೀಡಿದ ದೇಶ ಭಾರತವಾಗಿದೆ ಎಂದರು.
ಸದ್ಯ ಆರೋಗ್ಯ ಮೂಲಸೌಕರ್ಯದ ಅಗತ್ಯವನ್ನು ಪೂರೈಸಲು ಸರ್ಕಾರ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಮಿಷನ್ ಅಡಿ 64 ಸಾವಿರ ಕೋಟಿ ರೂ. ಹಣವನ್ನು ತೆಗೆದಿರಿಸಿದೆ. ಇದು ಪ್ರಸಕ್ತ ಅಗತ್ಯವನ್ನು ಮಾತ್ರ ಗಮನದಲ್ಲಿ ಇರಿಸಿಕೊಂಡು ರೂಪಿಸಿದ ಯೋಜನೆಯಲ್ಲ. ಭವಿಷ್ಯದ ಬಿಕ್ಕಟ್ಟುಗಳನ್ನು ಹೋಗಲಾಡಿಸುವಂತಹ ಉದ್ದೇಶ ಹೊಂದಿದೆ ಎಂದರು. ಸರ್ಕಾರದ ನೀತಿಯ ಫಲವಾಗಿ ಆರೋಗ್ಯ ಸೇವೆ, ಸೌಕರ್ಯಗಳು ಶ್ರೀಸಾಮಾನ್ಯನಿಗೆ ಸುಲಭವಾಗಿ ದೊರಕುವಂತಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ 80 ಸಾವಿರಕ್ಕೂ ಹೆಚ್ಚು ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು ನಿರ್ಮಾಣ ಆಗಿದೆ. ಕೈಗೆಟಕುವ ದರದಲ್ಲಿ ಔಷಧ ದೊರೆಯಬೇಕೆಂಬ ಉದ್ದೇಶದಿಂದ ದೇಶಾದ್ಯಂತ 8 ಸಾವಿರ ಜನ ಔಷಧ ಮಳಿಗೆಗಳನ್ನು ತೆರೆಯಲಾಗಿದೆ ಎಂದು ವಿವರಿಸಿದರು.
ಚುನಾವಣೆಗಳು ನಡೆಯುತ್ತಿರುತ್ತವೆ. ಆದರೆ, ಬಜೆಟ್ ಅಧಿವೇಶನ ಮಹತ್ವದ್ದು, ದೇಶದ ಇಡೀ ವರ್ಷದ ಆರ್ಥಿಕ ನೀಲಿನಕ್ಷೆ ಇದಾಗಿದೆ. ಹೀಗಾಗಿ ಸಂಸದರು ಸಕ್ರಿಯವಾಗಿ ಚರ್ಚೆಯಲ್ಲಿ ಪಾಲ್ಗೊಂಡು ಅಧಿವೇಶನವನ್ನು ಫಲಪ್ರದ ಮಾಡಬೇಕು.
|ನರೇಂದ್ರ ಮೋದಿಪ್ರಧಾನಿ
ಈಶಾನ್ಯ ರಾಜ್ಯಗಳಲ್ಲಿ ಸ್ವರ್ಗ ಧರೆಗೆ ಇಳಿದಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ ಎಂದ ರಾಷ್ಟ್ರಪತಿಯವರು ನಾಗಾಲ್ಯಾಂಡ್​ನಲ್ಲಿ ಗಣಿ ಕಾರ್ವಿುಕರ ನರಮೇಧವನ್ನು ಬಿಟ್ಟಿದ್ದೇಕೆ? ಜಮ್ಮು- ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಕುರಿತು ಅವರದ್ದು ದಿವ್ಯ ಮೌನ.
|ಮನೀಷ್ ತಿವಾರಿಕಾಂಗ್ರೆಸ್ ಸಂಸದ
ಕೋವಿಡ್ ನಿಯಮ ಉಲ್ಲಂಘನೆ:ಜಂಟಿ ಅದಿವೇಶನದಲ್ಲಿ ರಾಷ್ಟ್ರಪತಿ ಭಾಷಣ ಮಾಡುತ್ತಿದ್ದರೆ, ಹಲವು ಸಂಸದರು ಕೋವಿಡ್ ನಿಯಮ ಉಲ್ಲಂಘಿಸುತ್ತಿದ್ದದ್ದು ಸಾಮಾನ್ಯವಾಗಿತ್ತು. ಮೊದಲ ಎರಡು ಸಾಲಿನಲ್ಲಿ ಕುಳಿತದ್ದವರು ದೈಹಿಕ ಅಂತರ ಕಾಪಾಡಿಕೊಂಡಿದ್ದರೆ, ನಂತರ ಸಾಲುಗಳಲ್ಲಿ ಈ ಶಿಸ್ತು ಕಂಡುಬರಲಿಲ್ಲ. ಅನೇಕರು ಮಾಸ್ಕ್ ಧರಿಸಿರಲಿಲ್ಲ.
‘ಜೇಮ್ಸ್’ಗೆ ದಾರಿ ಮಾಡಿಕೊಟ್ಟ ರಾಜಮೌಳಿ: ‘ಅದೂ ಅಲ್ಲ, ಇದೂ ಅಲ್ಲ’ ಎಂದು ‘ಆರ್​ಆರ್​ಆರ್’​​ ಬಿಡುಗಡೆಗೆ ಹೊಸ ದಿನಾಂಕ ನಿಗದಿ..

ಉಡುಪಿಯಲ್ಲಿ ಸದ್ದಡಗಿಸಿದ ಪೊಲೀಸರು: ಸಾಲಾಗಿಟ್ಟ ಸೈಲೆನ್ಸರ್​ಗಳು ರಸ್ತೆಯಲ್ಲೇ ಧ್ವಂಸ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 6 =
Remember me
