ನವದೆಹಲಿ:ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಅವರಿಂದು ತಮ್ಮ ನಾಲ್ಕನೇ ಬಜೆಟ್​ ಮಂಡಿಸಲಿದ್ದು, ಆಯವ್ಯಯ ಮಂಡನೆಗೂ ಮುನ್ನ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ ಪಡೆದುಕೊಂಡರು.
ಪ್ರಧಾನಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ನಿರ್ಮಲಾ ಸೀತಾರಾಮನ್​ ಅವರು ಬಜೆಟ್​ ಮಂಡನೆಗೆ ಅನುಮೋದನೆ ಪಡೆದುಕೊಂಡರು.
ಇದಕ್ಕೂ ಮುನ್ನ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರಿಂದ ಬಜೆಟ್​ ಮಂಡನೆಗೆ ಔಪಚಾರಿಕ ಒಪ್ಪಿಗೆ ಪಡೆದರು.
ಬೆಳಗ್ಗೆ 11 ಗಂಟೆಗೆ ಬಜೆಟ್​ ಮಂಡನೆ ಆರಂಭವಾಗಲಿದ್ದು, ಕರೊನಾ ಅಲೆಗಳಿಂದ ಕಂಗೆಟ್ಟಿರುವ ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಇಂದಿನ ಬಜೆಟ್ ಮಹತ್ವದ್ದಾಗಿದ್ದು, ಯಾವ ಕ್ಷೇತ್ರಕ್ಕೆ ಏನೆಲ್ಲ ಕೊಡುಗೆ ಸಿಗಲಿದೆ? ರಾಜ್ಯದ ಪಾಲಿಗೆ ಏನೇನು ಬರಲಿದೆ? ಜನರಿಗೆ ಸಿಗುತ್ತಾ ತೆರಿಗೆ ವಿನಾಯಿತಿ? ಕರೋನದಿಂದ ಆದಾಯ ಕಳೆದುಕೊಂಡಿರುವ ವಲಯಕ್ಕೆ ಕೊಡುತ್ತಾ ಕೇಂದ್ರ ಗುಡ್ ನ್ಯೂಸ್? ಪೆಟ್ರೋಲ್, ಡಿಸೇಲ್ ಮೇಲಿನ ಸುಂಕ ಇಳಿಕೆ ಆಗುತ್ತಾ ಏರಿಕೆ ಆಗುತ್ತಾ? ಆರೋಗ್ಯ ಉಪಕರಣಗಳು ಮತ್ತು ಔಷಧಿಗಳ ಮೇಲೆ ಹಾಕ್ತಿರುವ ತೆರಿಗೆ ಕಡಿಮೆ ಆಗುತ್ತಾ? ಯಾವುದು ಇಳಿಕೆ ಯಾವುದು ಏರಿಕೆ? ಜನರಿಗೆ ಪ್ರಧಾನಿ ಮೋದಿ ಕೊಡ್ತಾರಾ ಗುಡ್ ನ್ಯೂಸ್? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಂದಿನ ಬಜೆಟ್​ನಲ್ಲಿ ಸಿಗಲಿದೆ.
ಬಿಜೆಟ್​ ಮಂಡನೆಗೂ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ: ವಿವಿಧ ನಗರಗಳ ಇಂದಿನ ದರ ಹೀಗಿದೆ….

ಕೇಂದ್ರ ಬಜೆಟ್​ನಲ್ಲಿ ರಾಜ್ಯಕ್ಕೆ ಹೆಚ್ಚಿನ ನಿರೀಕ್ಷೆ ಇದೆ: ಸಿಎಂ ಬೊಮ್ಮಾಯಿ

ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಭೇಟಿ ಮಾಡಿ ಬಜೆಟ್​ ಮಂಡನೆಗೆ ಒಪ್ಪಿಗೆ ಪಡೆದ ವಿತ್ತಸಚಿವೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + seven =
Remember me
