ನವದೆಹಲಿ:ಕೇಂದ್ರ ಸರ್ಕಾರ ವಲಯದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ಕಾರ್ವಿುಕರ ಕನಿಷ್ಠ ಕೂಲಿಯ ವೇರಿಯೇಬಲ್ ತುಟ್ಟಿ ಭತ್ಯೆಯನ್ನು (ವಿಡಿಎ) ಪರಿಷ್ಕರಿಸಲಾಗಿದೆ. ಪರಿಷ್ಕೃತ ವಿಡಿಎ ಅಕ್ಟೋಬರ್ 1ರಿಂದಲೇ ಅನ್ವಯವಾಗಲಿದೆ. ಕೈಗಾರಿಕಾ ಕಾರ್ವಿುಕರ ಸರಾಸರಿ ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ-ಐಡಬ್ಲ್ಯು) ಆಧಾರದ ಮೇಲೆ ವಿಡಿಎ ಪರಿಷ್ಕರಿಸಲಾಗುತ್ತದೆ. ಕಾರ್ವಿುಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಹೊಂದಿಕೊಂಡಿರುವ ಕಾರ್ವಿುಕ ಬ್ಯೂರೊ, ಸಿಪಿಐ ಸಿದ್ಧಪಡಿಸುತ್ತದೆ.
ಪರಿಷ್ಕರಣೆಯಿಂದ ಸುಮಾರು 1.5 ಕೋಟಿ ಕಾರ್ವಿುಕರಿಗೆ ಅನುಕೂಲ ಆಗಲಿದೆ ಎಂದು ಕಾರ್ವಿುಕ ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ. ದೇಶದಾದ್ಯಂತ ರಸ್ತೆ, ರನ್​ವೇ ಕಟ್ಟಡ ನಿರ್ಮಾಣ ನಿರ್ವಹಣೆ, ಕಸಗುಡಿಸುವುದು ಹಾಗೂ ಸ್ವಚ್ಛಗೊಳಿಸುವುದು, ಲೋಡಿಂಗ್ ಮತ್ತು ಅನ್​ಲೋಡಿಂಗ್, ಗಣಿ ಮತ್ತು ಕೃಷಿ ಮುಂತಾದ ವಲಯಗಳಲ್ಲಿ ನಿರತರಾಗಿರುವ ಕೇಂದ್ರ ಸರ್ಕಾರದ ದಿನಗೂಲಿ ಕಾರ್ವಿುಕರ ಕೂಲಿ ಏರಿಕೆಯಾಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − four =
Remember me
