ನವದೆಹಲಿ:ಮೂರು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳಿಗೆ ಚರ್ಚೆ ನಡೆಸಲು ಸಭೆಗೆ ಬರುವಂತೆ ಕೇಂದ್ರ ಸರ್ಕಾರ ಗುರುವಾರ ಮತ್ತೊಮ್ಮೆ ಆಹ್ವಾನ ನೀಡಿದೆ. ಈ ಕುರಿತು ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರ್ವಾಲ್ ರೈತರ 40 ಸಂಘಟನೆಗಳಿಗೆ ಪತ್ರ ಬರೆದಿದ್ದು, ದಿನಾಂಕ ಮತ್ತು ವೇಳೆಯನ್ನು ನೀವೇ (ರೈತರು) ನಿಗದಿ ಮಾಡಿ ಎಂದಿದ್ದಾರೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ರದ್ದತಿ ಮಾಡುವುದಿಲ್ಲವೆಂದು ಸರ್ಕಾರ ಲಿಖಿತವಾಗಿ ತಿಳಿಸಿರುವುದರಿಂದ ಇದನ್ನು ಮತ್ತೆ ಮಾತುಕತೆ ಅಜೆಂಡಾದಲ್ಲಿ ಸೇರಿಸುವುದು ರ್ತಾಕವಲ್ಲ. ಉಳಿದಂತೆ ರೈತರು ಕಾಯ್ದೆ ಬಗ್ಗೆ ಹೊಂದಿರುವ ಎಲ್ಲ ಕಳವಳದ ಕುರಿತು ಮುಕ್ತವಾಗಿ ಚರ್ಚೆ ನಡೆಸಲಾಗುವುದು ಎಂದು ಮೂರು ಪುಟಗಳ ಪತ್ರದಲ್ಲಿ ಅವರು ಹೇಳಿದ್ದಾರೆ.
ಡಿಸೆಂಬರ್ 9ರಂದು ನಡೆಯಬೇಕಿದ್ದ 6ನೇ ಸುತ್ತಿನ ಸಭೆ ರದ್ದಾಗಿನಿಂದಲೂ ಕೇಂದ್ರ ಸರ್ಕಾರ ಪ್ರತಿಭಟನಾಕಾರರ ಜತೆಗೆ ಮಾತುಕತೆ ನಡೆಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಕಳೆದ ಭಾನುವಾರ ಸರ್ಕಾರದಿಂದ ಬಂದಿರುವ ಪತ್ರಕ್ಕೆ ಪ್ರತಿಕ್ರಿಯಿಸಿಲು ರೈತ ಸಂಘಟನೆಗಳು ಸಮಿತಿ ರಚಿಸಿವೆ. ಸಮಿತಿ ಇನ್ನು ವರದಿ ನೀಡಿಲ್ಲ. ಇದರ ಬೆನ್ನಿಗೆ ಸರ್ಕಾರ ಮತ್ತೊಂದು ಪತ್ರ ರವಾನಿಸಿದೆ. ಹೊಸ ಕಾಯ್ದೆಗಳಲ್ಲಿ ರೈತರಿಗೆ ಸಮಸ್ಯೆ ಇರುವ ಅಂಶಗಳನ್ನು ಪಟ್ಟಿ ಮಾಡಿ ಕೊಡಿ ಎಂದೂ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಈ ಹಿಂದೆಯೇ ಕೋರಿಕೊಂಡಿದ್ದಾರೆ. ಆದರೆ ರೈತ ಪರ ಸಂಘಟನೆಗಳು ಕೃಷಿ ಕಾಯ್ದೆಗಳ ತಿದ್ದುಪಡಿ ಪ್ರಸ್ತಾವನೆಯನ್ನು ತಮ್ಮ ಬಳಿ ತರಲೇ ಬೇಡಿ, ಅವುಗಳನ್ನು ರದ್ದು ಮಾಡಿದರೆ ಮಾತ್ರ ಮಾತುಕತೆ ಸಾಧ್ಯ ಎಂದು ಪಟ್ಟು ಹಿಡಿದಿವೆ.
ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯ ಮಂಡಿಸಲು ಹಾಗೂ ರ್ಚಚಿಸಲು ವಿಶೇಷ ಅಧಿವೇಶನ ಕರೆಯಲು ಅನುಮತಿ ಕೋರಿ ಕೇರಳ ಸರ್ಕಾರ ರಾಜ್ಯಪಾಲರಿಗೆ ಎರಡನೇ ಬಾರಿ ಮನವಿ ಸಲ್ಲಿಸಿದೆ. ಮೊದಲ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಕೃಷಿ ಕಾಯ್ದೆಗಳನ್ನು ಸಿಂಧುತ್ವ ಪ್ರಶ್ನಿಸಿ ಭಾರತೀಯ ಕಿಸಾನ್ ಯುನಿಯನ್ (ಲೋಕಶಕ್ತಿ) ಕೂಡ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದೆ.
ಪ್ರಧಾನಿ ಮೋದಿಯವರು ಬಂಡವಾಳ ಶಾಹಿಗಳಿಗಾಗಿ ಹಣ ಸಂಪಾದಿಸುತ್ತಿದ್ದಾರೆ. ಅವರ ವಿರುದ್ಧ ನಿಲ್ಲುವವರು ರೈತರು, ಕಾರ್ವಿುಕರು ಅಥವಾ ಆರ್​ಎಸ್​ಎಸ್ ಮುಖಂಡ ಮೋಹನ್ ಭಾಗವತ್ ಅವರೇ ಆಗಿರಲಿ ಅವರನ್ನು ಭಯೋತ್ಪಾದಕರು ಎಂದು ಕರೆಯಲಾಗುತ್ತದೆ.
|ರಾಹುಲ್ ಗಾಂಧಿಕಾಂಗ್ರೆಸ್ ನಾಯಕ
ನೂತನ ಕೃಷಿ ಕಾಯ್ದೆಗಳಲ್ಲಿ ಹಲವು ಅಂಶಗಳಿಗೆ ತಿದ್ದುಪಡಿ ಆಗಬೇಕಿದೆ. ಈ ಕುರಿತಂತೆ ರೈತರು ಸ್ಪಷ್ಟ ಸಲಹೆಯನ್ನು ನೀಡಬೇಕು. ಎಂಎಸ್​ಪಿಯನ್ನು ರೈತರಿಗೆ ಒದಗಿಸಿಕೊಡಲು ಆಗದ ದಿನ ರಾಜೀನಾಮೆ ನೀಡುವೆ.
|ದುಷ್ಯಂತ ಚೌತಾಲಾಹರಿಯಣ ಡಿಸಿಎಂ, ಜೆಜೆಪಿ ಮುಖ್ಯಸ್ಥ
ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಸರ್ಕಾರಕ್ಕೆ ಸೂಚಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಗುಲಾಮ್ ನಬಿ ಆಜಾದ್ ಹಾಗೂ ಅಧೀರ್ ರಂಜನ್ ಚೌಧರಿ ನೇತೃತ್ವದ ನಿಯೋಗ ರಾಷ್ಟ್ರಪತಿ ರಾಮನಾಥ ಕೋವಿಂದ ಅವರನ್ನು ಗುರುವಾರ ಭೇಟಿಯಾಗಿ ಮನವಿ ಸಲ್ಲಿಸಿದೆ. ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತದ ಜನರಿಂದ ಸಂಗ್ರಹಿಸಲಾದ 2 ಕೋಟಿ ಸಹಿ ಸಂಗ್ರಹದ ಪ್ರತಿಯನ್ನೂ ರಾಷ್ಟ್ರಪತಿಗೆ ನೀಡಿದೆ. ಬಳಿಕ ಮಾತನಾಡಿದ ರಾಹುಲ್ ಗಾಂಧಿ, ಸರ್ಕಾರ ತಕ್ಷಣ ಸಂಸತ್ತಿನ ಜಂಟಿ ಅಧಿವೇಶನ ಕರೆದು ಹೊಸ ಕಾಯ್ದೆಗಳನ್ನು ಹಿಂಪಡೆಯಬೇಕು. ರೈತರ ವಿರುದ್ಧ ಯಾರೂ ನಿಲ್ಲಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ರಾಷ್ಟ್ರಪತಿ ಕೋವಿಂದ ಅವರನ್ನು ಭೇಟಿಯಾಗಲು ರಾಷ್ಟ್ರಪತಿ ಭವನದೆಡೆಗೆ ಹೊರಟಿದ್ದ ಕಾಂಗ್ರೆಸ್ ನಿಯೋಗವನ್ನು ಪೊಲೀಸರು ತಡೆದಿದ್ದರು. ಬಳಿಕ ರಾಹುಲ್ ಸೇರಿ ಕೆಲವೇ ನಾಯಕರನ್ನು ಒಳಬಿಡಲಾಯಿತು. ಆದರೆ ಇತರ ನಾಯಕರು ಒಳಹೋಗಲು ಯತ್ನಿಸಿದಾಗ ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪದಡಿ ಪ್ರಿಯಾಂಕಾ ಗಾಂಧಿ ವಾದ್ರಾ, ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ಪಕ್ಷದ ಹಲವು ನಾಯಕರನ್ನು ಪೊಲೀಸರು ಕೆಲಕಾಲ ವಶಕ್ಕೆ ಪಡೆದಿದ್ದರು. ಬಳಿಕ ಕೇಂದ್ರದ ವಿರುದ್ಧ ಹರಿಹಾಯ್ದ ಪ್ರಿಯಾಂಕಾ ಗಾಂಧಿ, ಭಾರತ ಅಪಾಯಕಾರಿ ಹಾದಿಯಲ್ಲಿ ಸಾಗುತ್ತಿದೆ. ಜನರನ್ನು ಬಂಧಿಸುವುದು, ಹೊಡೆಯುವುದು ಈ ಸರ್ಕಾರಕ್ಕೆ ರೂಢಿಯಾಗಿದೆ ಎಂದು ದೂರಿದರು.
ಇವರಿಬ್ಬರು ಸಿಕ್ಕಿ ಬೀಳದಿದ್ದರೆ ವರ್ಷಾಂತ್ಯದ ಮಧ್ಯರಾತ್ರಿ ಅದೇನಾಗಿರುತ್ತಿತ್ತೋ!?

ಮದುವೆಯ ದಿನವೇ ಮುಟ್ಟಾಗಿದ್ದಳಾಕೆ…

3 ತಿಂಗಳ ಹಿಂದೆ ಹೂತಿಟ್ಟ ಶವ ಇಂದು ಹೊರಕ್ಕೆ, ಶವದ ಮೇಲಿತ್ತು 4 ಉಂಗುರ: ಈ ‘ದೃಶ್ಯ’ಕ್ಕೆ ಕೊನೆಗೂ ಕ್ಲೈಮ್ಯಾಕ್ಸ್​..

ಅಂಬೆಗಾಲಿಡುವಾಗ್ಲೇ ಸಪ್ತಪದಿ ತುಳಿದಿದ್ಲು; ಈಗ ಮದ್ವೆ ಆಗೋ ವಯಸ್ಸಲ್ಲೀಕೆ ವೈವಾಹಿಕ ಬಂಧನದಿಂದ ಮುಕ್ತಮುಕ್ತ..

ದಪ್ಪ ಇದ್ದರೆ ಮಕ್ಕಳಾಗದ ಸಮಸ್ಯೆ ಉಂಟಾದೀತು ಎಚ್ಚರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 11 =
Remember me
