ನವದೆಹಲಿ:ವಿದ್ಯುತ್ ಉತ್ಪಾದಕರ ಕಲ್ಲಿದ್ದಲು ಬೇಡಿಕೆ ಈಡೇರಿಸಲು ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದ ಪ್ರಯತ್ನ ನಡೆಸಿದೆ. ದೈನಿಕ ಪೂರೈಕೆ ಪ್ರಮಾಣವನ್ನು ಈಗಿರುವ 1.95 ದಶಲಕ್ಷ ಟನ್​ನಿಂದ 2 ದಶಲಕ್ಷ ಟನ್​ಗೆ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಮಂಗಳವಾರ ಹೇಳಿದರು.
ಸದ್ಯ ಪೂರೈಸಲಾಗುತ್ತಿರುವ 1.95 ದಶಲಕ್ಷ ಟನ್​ಗಳ ಪೈಕಿ1.60 ದಶಲಕ್ಷ ಟನ್ ಅನ್ನು ಕೋಲ್ ಇಂಡಿಯಾ ಲಿಮಿಟೆಡ್ ಪೂರೈಸುತ್ತಿದೆ. ಉಳಿದ ಕಲ್ಲಿದ್ದಲನ್ನು ಸಿಂಗರೇಣಿ ಕೊಲಿಯರೀಸ್ ಕಂಪನಿ ಪೂರೈಸುತ್ತದೆ ಎಂದು ಸಚಿವರು ವಿವರಿಸಿದರು. ಸಚಿವರ ಈ ಹೇಳಿಕೆಯು ದೇಶದ ವಿದ್ಯುತ್ ಉತ್ಪಾದಕ ಘಟಕಗಳು ಕಲ್ಲಿದ್ದಲು ಕೊರತೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಮಹತ್ವ ಪಡೆದುಕೊಂಡಿದೆ.
ಇನ್ನೂ 4 ದಶಕ ಕಲ್ಲಿದ್ದಲು ಬಳಕೆ:ಈಗ ಮೂರನೇ ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆ ಬ್ಲಾಕ್ಸ್​ನ ಹರಾಜು ಸಮಯವಾಗಿದ್ದು, ಭಾರತದ ಕೆಲವೆಡೆ ಮತ್ತು ಜಗತ್ತಿನಾದ್ಯಂತ ಕಲ್ಲಿದ್ದಲಿನ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿದೆ. ಕಲ್ಲಿದ್ದಲಿಗೆ ಇನ್ನೂ ಭವಿಷ್ಯ ಇದೆ. ಅದು ಮಸುಕಾಗಿಲ್ಲ. ಬಹುಶಃ ಇನ್ನೂ 30ರಿಂದ 40 ವರ್ಷ ಕಾಲ ಕಲ್ಲಿದ್ದಲು ಭವಿಷ್ಯ ಮುಂದುವರಿಯಲಿದೆ. ಸದ್ಯದ ಮಟ್ಟಿಗೆ ಕೋಲ್ ಇಂಡಿಯಾದಲ್ಲಿ 22 ದಿನಕ್ಕೆ ಬೇಕಾದಷ್ಟು ಕಲ್ಲಿದ್ದಲು ದಾಸ್ತಾನು ಇದೆ. ಮುಂಗಾರು ಈಗ ಕಡಿಮೆಯಾಗುತ್ತಿದ್ದು, ವಿದ್ಯುತ್ ಉತ್ಪಾದನೆ ಹೆಚ್ಚಳವಾಗಲಿದೆ ಎಂದು ಜೋಶಿ ಹೇಳಿದರು.
ಪಿಎಂಒ ಪರಾಮರ್ಶೆ:ದೇಶದ ಕಲ್ಲಿದ್ದಲು ಪೂರೈಕೆ ಕೊರತೆ ವಿಚಾರವನ್ನು ಪ್ರಧಾನಮಂತ್ರಿ ಕಚೇರಿ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೆ, ಪರಿಸ್ಥಿತಿಯ ಪರಾಮರ್ಶೆ ಮಾಡಿ ವಿವರವನ್ನು ದಾಖಲಿಸಿದೆ. ಇನ್ನೊಂದೆಡೆ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಸಂಪುಟ ಸಹೋದ್ಯೋಗಿಗಳಾದ ಪ್ರಲ್ಹಾದ್ ಜೋಶಿ ಮತ್ತು ಆರ್.ಕೆ. ಸಿಂಗ್ ಅವರನ್ನು ಭೇಟಿ ಮಾಡಿ ಪರಿಸ್ಥಿತಿ ಅವಲೋಕನ ನಡೆಸಿದ್ದರು.
ಕಲ್ಲಿದ್ದಲು ರಾಜಕೀಯಕ್ಕೆ ರಾಜ್ಯಗಳಲ್ಲಿ ಕತ್ತಲು?:ಉತ್ತರ ಪ್ರದೇಶದಿಂದ ರಾಜಸ್ಥಾನ ಮತ್ತು ಕೇರಳದ ತನಕ ರಾಜ್ಯಗಳಲ್ಲಿ ಈ ವಾರಾಂತ್ಯಕ್ಕೆ ಕತ್ತಲು ಆವರಿಸಬಹುದು ಎನ್ನಲಾಗುತ್ತಿದೆ. ಕೋಲ್ ಇಂಡಿಯಾ ಕಂಪನಿ ಜತೆಗೆ ಮಾಡಿಕೊಂಡ ಒಪ್ಪಂದ ಅರ್ಧದಷ್ಟು ಕಲ್ಲಿದ್ದಲು ಮಾತ್ರ ಪೂರೈಕೆ ಆಗುತ್ತಿರುವುದು ಇದಕ್ಕೆ ಕಾರಣ ಎನ್ನುತ್ತಿವೆ ರಾಜ್ಯಗಳು. ಕೋಲ್ ಇಂಡಿಯಾ ಲಿಮಿಟೆಡ್ ಕಳೆದ 5 ದಿನಗಳಿಂದ ದೈನಿಕ ಕಲ್ಲಿದ್ದಲು ಉತ್ಪಾದನೆ ಪ್ರಮಾಣವನ್ನು 1.5 ದಶಲಕ್ಷ ಟನ್​ಗೆ ಏರಿಸಿದೆ.
ವಾಣಿಜ್ಯ ಬಳಕೆಗೆ ಹರಾಜು:ಜಗತ್ತಿನಾದ್ಯಂತ ಕಲ್ಲಿದ್ದಲಿಗೆ ಬೇಡಿಕೆ ಇದೆ. ಇದರ ಪೂರೈಕೆ ಸಂಬಂಧ ಚರ್ಚೆಗಳು ನಡೆಯತ್ತಿವೆ. ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯ ಮೂರನೇ ಹರಾಜು ನಡೆಸುವುದಕ್ಕೆ ಇದು ಸಕಾಲ. ಆಮದು ಮಾಡಿಕೊಂಡ ಕಲ್ಲಿದ್ದಲಿನ ಬೆಲೆ ಮೂರ್ನಾಲ್ಕು ಬಾರಿ ಹೆಚ್ಚಳವಾಗಿದೆ. ಈ ದರದಲ್ಲಿ ಕಲ್ಲಿದ್ದಲನ್ನು ಭಾರತ ಆಮದುಮಾಡಿಕೊಂಡರೆ ಖಚಿತವಾಗಿ ವಿದ್ಯುತ್ ಬೆಲೆ ಕೂಡ ಅದೇ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಕಲ್ಲಿದ್ದಲು ಕಾರ್ಯದರ್ಶಿ ಎ.ಕೆ.ಜೈನ್ ಎಚ್ಚರಿಸಿದ್ದಾರೆ.
ಹಂಚಿಕೆ ಆಗದ ವಿದ್ಯುತ್ ಬಳಸಲು ರಾಜ್ಯಗಳಿಗೆ ಕೇಂದ್ರ ಸೂಚನೆ:ಸೆಂಟ್ರಲ್ ಜನರೇಟಿಂಗ್ ಸ್ಟೇಷನ್ಸ್​ಗಳಲ್ಲಿ ಹಂಚಿಕೆ ಮಾಡದೇ ಉಳಿಸಿಕೊಂಡ ಶೇಕಡ 15 ವಿದ್ಯುತ್ ಅನ್ನು ಬಳಸುವುದಕ್ಕೆ ಕೇಂದ್ರ ಇಂಧನ ಸಚಿವಾಲಯ ಸೂಚನೆ ನೀಡಿದೆ. ರಾಜ್ಯಗಳು ಹಂಚಿಕೆ ಮಾಡದೆ ಉಳಿಸಿಕೊಂಡಿರುವ ವಿದ್ಯುತ್ ಬಳಸಬೇಕು. ವಿದ್ಯುತ್ ಪೂರೈಸುವುದು ಆಯಾ ರಾಜ್ಯಗಳದ್ದೇ ಹೊಣೆಗಾರಿಕೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಮಂಗಳವಾರದ ಕಲ್ಲಿದ್ದಲು ದರ:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಲ್ಲಿದ್ದಲು ದರ ಟನ್​ಗೆ 243 ಡಾಲರ್. ಭಾರತೀಯ ಮಾರುಕಟ್ಟೆಯಲ್ಲಿ ಟನ್​ಗೆ 160 ಡಾಲರ್
ಸ್ಪಾಟ್ ದರ 12 ವರ್ಷದ ಗರಿಷ್ಠಕ್ಕೆ:ಇಂಡಿಯನ್ ಎನರ್ಜಿ ಎಕ್ಸ್​ಚೇಂಜ್ ಲಿಮಿಟೆಡ್​ನಲ್ಲಿ ಇಂಧನದ ಸ್ಪಾಟ್ ದರ ಕಳೆದ ಎರಡು ವಾರದ ಅವಧಿಯಲ್ಲಿ ಮೂರು ಪಟ್ಟುಹೆಚ್ಚಾಗಿದೆ. ಸೋಮವಾರ ಇದು ಕಿಲೋವಾಟ್ ಹವರ್​ಗೆ 16.42 ರೂಪಾಯಿ ಆಗಿದೆ. ಈ ದರವು ಕಳೆದ 12 ವರ್ಷಗಳ ಅವಧಿಯಲ್ಲೇ ಗರಿಷ್ಠ ಎಂದು ಎಕ್ಸ್​ಚೇಂಜ್ ಮೂಲಗಳು ಹೇಳಿವೆ.
ದೇಶದ ಇತಿಹಾಸದಲ್ಲೇ ಇದೇ ಮೊದಲ ಸಲ ಗರಿಷ್ಠ ಮಟ್ಟದಲ್ಲಿ ಕಲ್ಲಿದ್ದಲು ಪೂರೈಸಲಾಗುತ್ತಿದೆ. ವಿದ್ಯುತ್ ಉತ್ಪಾದನೆಗೆ ಯಾವುದೇ ತೊಂದರೆ ಆಗುವುದಿಲ್ಲ. ಈಗ ನೀಡಿರುವ ಭರವಸೆಯ ಪ್ರಕಾರ ಕಲ್ಲಿದ್ದಲು ಪೂರೈಸಲಾಗುತ್ತದೆ. ಅಕ್ಟೋಬರ್ 20-21ರ ವೇಳೆಗೆ ದೈನಿಕ 20 ಲಕ್ಷ ಟನ್ ಕಲ್ಲಿದ್ದಲು ಪೂರೈಕೆ ಸಾಧ್ಯವಾಗಲಿದ್ದು, ಅದು ಕೂಡ ಒಂದು ದಾಖಲೆಯಾಗಲಿದೆ.
|ಪ್ರಲ್ಹಾದ್ ಜೋಶಿಕೇಂದ್ರ ಕಲ್ಲಿದ್ದಲು ಸಚಿವ
ಕಲ್ಲಿದ್ದಲು ಕೊರತೆ ನಿಜ:ಸರ್ಕಾರಿ ದಾಖಲೆಗಳ ಪ್ರಕಾರವೇ ಉಷ್ಣ ಸ್ಥಾವರ ಘಟಕಗಳಲ್ಲಿ ಕಲ್ಲಿದ್ದಲು ದಾಸ್ತಾನು ಪ್ರಮಾಣದಲ್ಲಿ ಕೊರತೆ ಉಂಟಾಗಿರುವುದು ದಾಖಲಾಗಿದೆ. ಕೇಂದ್ರ ಸರ್ಕಾರದ ನಿಗಾದಲ್ಲಿರುವ 135 ವಿದ್ಯುತ್ ಉತ್ಪಾದನಾ ಘಟಕಗಳ ಪೈಕಿ 115ರಲ್ಲಿ ಕಲ್ಲಿದ್ದಲು ಕೊರತೆ ಕಾಡಿದೆ.
ರಾಜ್ಯದಲ್ಲಿ ಇನ್ನೆರಡು ದಿನ ಮಳೆ ಮತ್ತಷ್ಟು ಬಿರುಸು; ನಾಳೆ ಆರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
