ನವದೆಹಲಿ:ಕ್ರಿಪ್ಟೊ ಕರೆನ್ಸಿ ವಹಿವಾಟನ್ನು ನಿಷೇಧಿಸಲು ಕೇಂದ್ರ ಸರ್ಕಾರ ಬಯಸಿದೆ. ಆದರೆ, ಇದನ್ನು ಸಂಪತ್ತಿನ ಮಾದರಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಲು ಅವಕಾಶ ನೀಡಲಿದೆ. ಅಂದರೆ ಕ್ರಿಪ್ಟೊ ಕರೆನ್ಸಿ ಮೂಲಕ ಮಾಡುವ ಪಾವತಿಗಳಿಗೆ ಕಾನೂನಿನ ನಿರ್ಬಂಧ ಇರಲಿದೆ. ಆದರೆ, ಚಿನ್ನ, ಷೇರು, ಬಾಂಡ್ ಮಾದರಿಯಲ್ಲಿ ಇದನ್ನು ಶೇಖರಿಸಬಹುದು ಎಂದು ಮೂಲಗಳು ತಿಳಿಸಿವೆ.
ಬಹುರ್ಚಚಿತ ವಿಷಯವಾಗಿರುವ ಕ್ರಿಪ್ಟೊ ಕರೆನ್ಸಿಯನ್ನು ಸಂಪೂರ್ಣವಾಗಿ ನಿಷೇಧಿಸುವ ಇರಾದೆಯನ್ನು ಸರ್ಕಾರ ಹೊಂದಿಲ್ಲ. ಆದರೆ, ಈ ಮಾದರಿಯ ವಹಿವಾಟು ನಡೆಸಲು ಹೂಡಿಕೆದಾರರನ್ನು ಆಕರ್ಷಿಸುತ್ತಿರುವ ವಿನಿಮಯ ಕೇಂದ್ರ ಅಥವಾ ವೇದಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. ಈ ಸಂಬಂಧದ ಮಸೂದೆಯನ್ನು ಸರ್ಕಾರ ಅಂತಿಮಗೊಳಿಸುತ್ತಿದ್ದು, ಎರಡು-ಮೂರು ವಾರದಲ್ಲಿ ಇದು ಸಂಪುಟದ ಪರಿಶೀಲನೆಗೆ ಬರಲಿದೆ. ಈ ತಿಂಗಳ ಅಂತ್ಯಕ್ಕೆ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲೇ ಮಂಡನೆಯಾಗು ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ)ಗೆ ಕ್ರಿಪ್ಟೊ ಕರೆನ್ಸಿಯ ನಿಯಂತ್ರಿಸುವ ಅಧಿಕಾರ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ. ಆದರೆ, ಅಂತಿಮ ಆಗಿಲ್ಲ ಎಂದು ಮೂಲಗಳು ತಿಳಿಸಿವೆ. ಡಿಜಿಟಲ್ ಮಾದರಿಯ ಕ್ರಿಪ್ಟೊವನ್ನು ಕರೆನ್ಸಿ ಎಂದು ವರ್ಗೀಕರಿಸುವುದಕ್ಕಿಂತ ಸಂಪತ್ತೆಂದು ಗುರುತಿಸಬೇಕು ಎಂದು ಈ ಮಾದರಿಯ ವಹಿವಾಟಿನಲ್ಲಿ ತೊಡಗಿರುವವರು ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಹ್ಯಾಕರ್ ಶ್ರೀಕಿ ಬಂಧನವಾದ ನಂತರ ಕ್ರಿಪ್ಟೊ ಕರೆನ್ಸಿ ಹಗರಣವು ದೇಶದಲ್ಲಿ ಭಾರಿ ಸದ್ದು ಮಾಡಿದೆ. ಈ ಹಿನ್ನೆಲೆಯಲ್ಲಿ ಡಿಜಿಟಲ್ ಕರೆನ್ಸಿ ಎಲ್ಲ ಮಾದರಿಗಳ ಭವಿಷ್ಯ ಕುರಿತು ರ್ಚಚಿಸಲು ಪ್ರಧಾನಿ ನರೇಂದ್ರ ಮೋದಿ ಕಳೆದ ಶನಿವಾರ ಸಭೆ ನಡೆಸಿದ್ದರು. ಅನಿಯಂತ್ರಿತ ಕ್ರಿಪ್ಟೊ ಕರೆನ್ಸಿ ಮಾರುಕಟ್ಟೆಯು ಅಕ್ರಮ ಹಣ ವರ್ಗಾವಣೆ, ಭಯೋತ್ಪಾದನೆಗೆ ಹಣಕಾಸು ನೆರವಿನ ಮೂಲವಾಗುವ ಆತಂಕವನ್ನು ಈ ಸಭೆ ವ್ಯಕ್ತಪಡಿಸಿತ್ತು. ಇದಾದ ನಂತರ ಜಯಂತ್ ಸಿನ್ಹಾ ನೇತೃತ್ವದ ಸಂಸದೀಯ ಹಣಕಾಸು ಸ್ಥಾಯಿ ಸಮಿತಿ ಕೂಡ ಕ್ರಿಪ್ಟೊ ಕರೆನ್ಸಿ ಸಂಪೂರ್ಣ ನಿಷೇಧಕ್ಕೆ ಒಲವು ತೋರಲಿಲ್ಲ. ಆದರೆ, ನಿಯಂತ್ರಣಕ್ಕೆ ಕಾನೂನಿನ ಅಗತ್ಯತೆ ಬಗ್ಗೆ ಚರ್ಚೆ ನಡೆಸಿತ್ತು. ಈ ರೀತಿಯ ಕರೆನ್ಸಿ ಜಾರಿಗೆ ಬಂದರೆ ಅದರ ಮೇಲಿನ ತೆರಿಗೆ ಯಾವ ರೀತಿ ಇರಬೇಕು ಎಂಬುದರ ಬಗ್ಗೆಯೂ ರ್ಚಚಿಸಿತು. ಕ್ರಿಪ್ಟೊ ಕರೆನ್ಸಿಯಿಂದ ದೇಶದ ಆರ್ಥಿಕ ಸ್ಥಿರತೆಗೆ ಧಕ್ಕೆಯಾಗತ್ತದೆ ಮತ್ತು ಕಿರು ಹಣಕಾಸು ಸೇವಾವಲಯ ಅಪಾಯಕ್ಕೆ ಸಿಲುಕುತ್ತದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮಂಗಳವಾರವಷ್ಟೆ ಕಳವಳ ವ್ಯಕ್ತಪಡಿಸಿದ್ದಾರೆ.
49 ಸಾವಿರ ಕೋಟಿ ಸಂಪತ್ತು:ಮೇ ತಿಂಗಳ ಮಾಹಿತಿಯ ಪ್ರಕಾರ, ಭಾರತದಲ್ಲಿ ಡಿಜಿಟಲ್ ಕರೆನ್ಸಿ ಮಾರುಕಟ್ಟೆಯು ಒಟ್ಟಾರೆ ಸಂಪತ್ತು 49,000 ಕೋಟಿ ರೂ. (6.60 ಬಿಲಿಯನ್ ಡಾಲರ್) ಇದೆ. 2020ರ ಏಪ್ರಿಲ್​ನಲ್ಲಿ ಇದು 6,854 ಕೋಟಿ ರೂ. (923 ಮಿಲಿಯನ್ ಡಾಲರ್) ಇತ್ತು ಎಂದು ಬ್ಲಾ್ಯಕ್​ಚೈನ್ ಡೇಟಾ ವೇದಿಕೆ ಚೈನಾಲಿಸಿಸ್ ಹೇಳಿದೆ.
ಐಪಿಒ ನಿಯಮ ಕಠಿಣಗೊಳಿಸಿದ ಸೆಬಿ:ಬಂಡವಾಳ ಕ್ರೋಡೀಕರಣಕ್ಕೆ ಆರಂಭಿಕ ಷೇರು ವಿತರಣೆ (ಐಪಿಒ)ಯ ಮೂಲಕ ಸಂಗ್ರಹಿಸಿದ ಮೊತ್ತದ ಖರ್ಚಿನ ಬಗೆ ಮತ್ತು ದೊಡ್ಡ ಹೂಡಿಕೆದಾರರ ನಿರ್ಗಮನ ಮತ್ತು ಸಣ್ಣ ಹೂಡಿಕೆದಾರರನ್ನು ರಕ್ಷಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಸಂಸ್ಥೆ (ಐಪಿಒ) ನಿಯಮ ಕಠಿಣಗೊಳಿಸಲು ಮುಂದಾಗಿದೆ. ನಿರ್ದಿಷ್ಟವಲ್ಲದ ಹೂಡಿಕೆಯಲ್ಲಿ ಐಪಿಒದಲ್ಲಿ ಸಂಗ್ರಹವಾದ ಮೊತ್ತದಲ್ಲಿ ಶೇ. 35ರಷ್ಟನ್ನು ಹೂಡಿಕೆ ಮಾಡಬಹುದು. ಕಳೆದ ವಾರ ಐಪಿಒ ಮಾರಾಟ ಆರಂಭಿಸಿದ ಡಿಜಿಟಲ್ ಪಾವತಿ ವೇದಿಕೆ ಪೇಟಿಮ್ 17,835 ಕೋಟಿ ರೂ. ಷೇರುಗಳ ಬುಕಿಂಗ್ ನಡೆದಿದೆ. ಸೌಂದರ್ಯ ವರ್ಧಕದ ಸ್ಟಾರ್ಟಪ್ ನೈಕಾ ಐಪಿಒ, ಪೇಟಿಮ್ಂತ ದುಪ್ಪಟ್ಟು ಬುಕಿಂಗ್ ಆಗಿದೆ.
ಸೆನ್ಸೆಕ್ಸ್​ನಲ್ಲಿ 314 ಅಂಕ ಇಳಿಕೆ:ಷೇರುಪೇಟೆ ಬುಧವಾರ ಇಳಿಕೆ ದಾಖಲಿಸಿದೆ. ಸೆನ್ಸೆಕ್ಸ್​ನಲ್ಲಿ 314.04 ಪಾಯಿಂಟ್ ಕುಸಿದಿದ್ದು, ದಿನದ ವಹಿವಾಟು 60,008.33ಕ್ಕೆ ಕೊನೆಗೊಂಡಿದೆ. ನಿಫ್ಟಿಯಲ್ಲಿ 100.55 ಅಂಶ ಇಳಿಕೆಯಾಗಿ 17,898.65ಕ್ಕೆ ಅಂತ್ಯವಾಗಿದೆ. ಆಕ್ಸಿಸ್ ಬ್ಯಾಂಕ್, ರಿಲಯನ್ಸ್ ಇಂಡಸ್ಟೀಸ್, ಕೊಟಾಕ್ ಬ್ಯಾಂಕ್, ಭಾರ್ತಿ ಏರ್​ಟೇಲ್, ಟೈಟಾನ್, ಎಚ್​ಡಿಎಫ್​ಸಿ ಬ್ಯಾಂಕ್, ಎಚ್​ಡಿಎಫ್​ಸಿ, ಡಾ.ರೆಡ್ಡೀಸ್ ಲ್ಯಾಬ್, ಸನ್ ಫಾರ್ವ ಷೇರುಗಳ ಮೌಲ್ಯ ಕುಸಿದಿದೆ. ಇನ್ನೊಂದೆಡೆ ಮಾರುತಿ, ಏಷ್ಯನ್ ಪೇಂಟ್ಸ್, ಪವರ್ ಗ್ರಿಡ್, ಎನ್​ಟಿಪಿಸಿ, ಐಟಿಸಿ, ಇಂಡಸ್​ಇಂಡ್ ಬ್ಯಾಂಕ್, ಟೆಕ್ ಮಹೀಂದ್ರಾ ಕಂಪನಿಗಳು ಲಾಭ ದಾಖಲಿಸಿವೆ. ಐಪಿಒ ಕುರಿತ ನಿಯಮವನ್ನು ಸೆಬಿ ಕಠಿಣಗೊಳಿಸಿರುವುದೂ ಕೂಡ ಷೇರು ಮೌಲ್ಯ ಪತನಕ್ಕೆ ಕಾರಣ ಎನ್ನಲಾಗಿದೆ.
ತಲೆಮರೆಸಿಕೊಂಡಿದ್ದ ‘ಕುರಾನ್ ಸರ್ಕಲ್‌’ನ ಶಂಕಿತ ಉಗ್ರ ಎನ್‌ಐಎ ಬಲೆಗೆ, ‘ಭವಿಷ್ಯದ ಐಸಿಸ್’ ಕುರಿತು ಬೆಂಗಳೂರಿನಲ್ಲಿ ಪ್ಲ್ಯಾನ್!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + nine =
Remember me
