ನವದೆಹಲಿ: ಆರ್ಥಿಕ ಚಟುವಟಿಕೆಗೆ ವೇಗ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ವರ್ಷಾಂತ್ಯಕ್ಕೆ ಇನ್ನೊಂದು ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ. ಕರೊನಾ ಹೊಡೆತಕ್ಕೆ ತತ್ತರಿಸಿರುವ ಆಹಾರ, ಪ್ರವಾಸೋದ್ಯಮ ವಲಯಗಳಿಗೆ ಹೊಸ ಪ್ಯಾಕೇಜ್​ನಲ್ಲಿ ಆದ್ಯತೆ ದೊರೆಯುವ ನಿರೀಕ್ಷೆ ಇದೆ. ಜತೆಗೆ ಕಿರು, ಸಣ್ಣ, ಮಧ್ಯಮ ಗಾತ್ರದ ಉದ್ದಿಮೆ (ಎಂಎಸ್​ಎಂಇ) ವಲಯವನ್ನೂ ಕೇಂದ್ರೀಕರಿಸುವ ಸಂಭವ ಇದೆ ಎಂದು ಮೂಲಗಳು ಹೇಳಿವೆ.
ಪ್ರವಾಸೋದ್ಯಮ ಮತ್ತು ಆಹಾರ ವಲಯಗಳಲ್ಲಿ ಚಟುವಟಿಕೆ ಗರಿಗೆದರಿದರೆ ಉದ್ಯೋಗಾವಕಾಶಕ್ಕೂ ಅನುಕೂಲವಾಗುತ್ತದೆ ಎಂಬುದು ಕೇಂದ್ರದ ಅಭಿಪ್ರಾಯವಾಗಿದೆ. ಹೀಗಾಗಿ ಹೊಸ ವರ್ಷದ ಉಡುಗೊರೆಗೆ ಪ್ರವಾಸೋದ್ಯಮ ವಲಯ ಕಾತರದ ನಿರೀಕ್ಷೆಯಲ್ಲಿದೆ. ಕೇಂದ್ರ ಸರ್ಕಾರ ಈಗಾಗಲೇ ರೈಲ್ವೆ, ರಕ್ಷಣೆ, ವಿಮಾನಯಾನ ವಲಯದಲ್ಲಿ ಖಾಸಗಿ ಹೂಡಿಕೆ ಆಕರ್ಷಿಸುವ ಯೋಜನೆಗಳನ್ನು ಘೋಷಿಸಿದೆ. ಈಗ ಇನ್ನಿತರ ಕ್ಷೇತ್ರಗಳತ್ತ ದೃಷ್ಟಿ ಹರಿಸುವ ಸಮಯ ಬಂದಿದೆ ಎಂದು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಹೇಳಿದ್ದಾರೆ.
ಮಿತ ಪ್ರಗತಿ ಎಂದ ಮೂಡೀಸ್:ಈ ವಾರದ ಆರಂಭದಲ್ಲಿ ಕೇಂದ್ರದ ನೌಕರರು, ಸಾರ್ವಜನಿಕ ವಲಯದ ಬ್ಯಾಂಕ್ ಹಾಗೂ ಸಂಸ್ಥೆಗಳ ಉದ್ಯೋಗಗಳಿಗೆ ಕೇಂದ್ರ ಸರ್ಕಾರ ಘೋಷಿಸಿರುವ ಎರಡು ವಿಶೇಷ ಯೋಜನೆಯಿಂದ ಆರ್ಥಿಕತೆಯಲ್ಲಿ ಸಣ್ಣ ಪ್ರಮಾಣದ ಪ್ರಗತಿ ಕಾಣಬಹುದಾಗಿದೆ ಎಂದು ಅಂತಾರಾಷ್ಟ್ರೀಯ ಆರ್ಥಿಕ ರೇಟಿಂಗ್ ಸಂಸ್ಥೆ ಮೂಡೀಸ್ ಇನ್ವೆಸ್ಟರ್ ಸರ್ವೀಸ್ ಹೇಳಿದೆ. ಈ ಎರಡು ಉತ್ತೇಜಕ ಕ್ರಮ ಹಾಗೂ ಇನ್ನೆರಡು ಯೋಜನೆಗಳಿಂದ ಒಟ್ಟು ದೇಶೀಯ ಉತ್ಪನ್ನ ದರದಲ್ಲಿ (ಜಿಡಿಪಿ) -ಠಿ; 46,700 ಕೋಟಿ (ಶೇ. 0.2) ಬೆಳವಣಿಗೆ ಸಾಧ್ಯವಾಗಬಹುದು ಎಂದು ಮೂಡೀಸ್ ತಿಳಿಸಿದೆ. ಎಲ್​ಟಿಸಿ ಸಂಬಂಧಿತ ವೋಚರ್ ಮತ್ತು ಹಬ್ಬ ಮುಂಗಡ ನೀಡಿಕೆ ಯೋಜನೆಯಿಂದ -ಠಿ; 36 ಸಾವಿರ ಕೋಟಿ, ರಾಜ್ಯಗಳಿಗೆ ಬಡ್ಡಿ ರಹಿತವಾಗಿ 50 ವರ್ಷಕ್ಕೆ -ಠಿ; 12 ಸಾವಿರ ಕೋಟಿ ಸಾಲ ಮತ್ತು ಮೂಲಸೌಕರ್ಯ ಯೋಜನೆಗಳಿಗೆ -ಠಿ; 25 ಸಾವಿರ ಕೋಟಿ ಹೆಚ್ಚುವರಿ ಅನುದಾನವನ್ನು ನೀಡಿರುವ ಸರ್ಕಾರ ಒಟ್ಟಾರೆ -ಠಿ; 73 ಸಾವಿರ ಕೋಟಿಯಷ್ಟು ಗ್ರಾಹಕ ಬೇಡಿಕೆಯನ್ನು (ಖರೀದಿ ಸಾಮರ್ಥ್ಯ) ನಿರೀಕ್ಷಿಸಿದೆ.
ಕಳೆದ ಆರೇಳು ತಿಂಗಳಿಂದ ಮಧ್ಯಮ ವರ್ಗದ ಕುಟುಂಬದವರು ಅತ್ಯವಶ್ಯಕ ಖರ್ಚನ್ನು ಬಿಟ್ಟರೆ ಉಳಿದಂತೆ ಮಾರುಕಟ್ಟೆ ಕಡೆ ತಲೆಹಾಕಿಲ್ಲ. ಆದರೆ, ಸೆಪ್ಟೆಂಬರ್​ನ ಖರೀದಿ ನಿರ್ವಹಣಾ ಸೂಚ್ಯಂಕದ (ಶೇ. 56.8) ಏರಿಕೆ ನೋಡಿದರೆ ಈ ವರ್ಗದವರು ಈಗ ಖರೀದಿಯಲ್ಲಿ ತೊಡಗಿದ್ದಾರೆ. ಹೀಗಾಗಿ ಈ ಸಾರಿ ದೀಪಾವಳಿ ಭರ್ಜರಿ ವ್ಯಾಪಾರದ ಭರವಸೆ ನೀಡಿದೆ.
|ಅಮಿತಾಭ್ ಕಾಂತ್ನೀತಿ ಆಯೋಗದ ಸಿಇಒ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
