ದೆಹಲಿ:ಸರ್ಕಾರಿ ಉದ್ಯೋಗಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದ್ದು, ಕೇಂದ್ರ ಸರ್ಕಾರದ ಅಧಿಕಾರಿಗಳು 1.3 ಲಕ್ಷ ರೂ.ಮೌಲ್ಯದವರೆಗಿನ ಮೊಬೈಲ್‌, ಲ್ಯಾಪ್‌ಟಾಪ್‌ ಅಥವಾ ಇತರ ರೀತಿಯ ಸಾಧನವನ್ನು ಪಡೆಯಬಹುದಾಗಿದೆ.ಇದನ್ನೂ ಓದಿ:ಮಲಗಿದ್ದಲ್ಲೆ ಪ್ರಾಣ ಬಿಟ್ಟ ಮೂವರು ವಿದ್ಯಾರ್ಥಿಗಳು, ಮತ್ತೊಬ್ಬನ ಸ್ಥಿತಿ ಚಿಂತಾಜನಕಅಷ್ಟೇ ಅಲ್ಲದೇ, ನಾಲ್ಕು ವರ್ಷಗಳ ನಂತರ ವೈಯಕ್ತಿಕ ಬಳಕೆಗಾಗಿ ಈ ಸಾಧನಗಳನ್ನು ತಮ್ಮ ಬಳಿ ಇಟ್ಟುಕೊಳ್ಳಲು ಅನುಮತಿಯನ್ನು ಸಹ ನೀಡಲಾಗಿದ್ದು, ಹಣಕಾಸು ಸಚಿವಾಲಯವು ಈ ನಿಟ್ಟಿನಲ್ಲಿ ಹಲವಾರು ಮಾರ್ಗಸೂಚಿಗಳನ್ನು ನೀಡಿದೆ,ಇದರ ಪ್ರಕಾರ, ಅರ್ಹ ಅಧಿಕಾರಿಗಳು ಅಧಿಕೃತ ಕೆಲಸಕ್ಕಾಗಿ ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಫ್ಯಾಬ್ಲೆಟ್, ನೋಟ್‌ಬುಕ್, ನೋಟ್‌ಪ್ಯಾಡ್, ಅಲ್ಟ್ರಾ-ಬುಕ್, ನೆಟ್-ಬುಕ್ ಅಥವಾ ಅಂತಹ ಮೌಲ್ಯದ ಇತರ ಉಪಕರಣಗಳನ್ನು ತೆಗೆದುಕೊಳ್ಳಬಹುದಾಗಿದೆ.ಮಾರ್ಗಸೂಚಿಗಳ ಪ್ರಕಾರ, ಕೇಂದ್ರ ಸರ್ಕಾರದ ಉಪ ಕಾರ್ಯದರ್ಶಿ ಮತ್ತು ಮೇಲಿನ ಹಂತದ ಎಲ್ಲಾ ಅಧಿಕಾರಿಗಳು ಅಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ಪಡೆಯಲು ಅರ್ಹರಾಗಿದ್ದು, ಸಚಿವಾಲಯ/ಇಲಾಖೆಯಲ್ಲಿನ ಅಧಿಕಾರಿಗೆ ಈಗಾಗಲೇ ಇಂತಹ ಸಾಧನವನ್ನು ನೀಡಿದ್ದರೆ, ಅವರಿಗೆ ನಾಲ್ಕು ವರ್ಷಗಳವರೆಗೆ ಹೊಸ ಸಾಧನವನ್ನು ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.(ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − four =
Remember me
