ಬೆಂಗಳೂರು:ಕಾರ್ವಿುಕರ ರಾಜ್ಯ ವಿಮಾ ನಿಗಮ(ಇಎಸ್​ಐ)ದ ಖಾಲಿ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡವನ್ನು ನಿರ್ಲಕ್ಷಿಸಿರುವ ಧೋರಣೆ ವಿರುದ್ಧ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗುತಿದ್ದಂತೆಯೇ, ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಲೋಪ ಸರಿಪಡಿಸುವತ್ತ ಗಮನ ಹರಿಸಿದೆ. ರಾಜ್ಯದಲ್ಲೇ ಕಾರ್ಯನಿರ್ವಹಿಸುವ ಕೆಳಹಂತದ ಹುದ್ದೆಗಳಿಗೂ ಕನ್ನಡವನ್ನು ಪರಿಗಣಿಸದಿರುವ ಕುರಿತು ಗುರುವಾರ ವಿಜಯವಾಣಿಯಲ್ಲಿ ವರದಿ ಪ್ರಕಟವಾಗುತ್ತಲೇ ಕೆಲವು ಮುಖಂಡರು ಈ ವಿಚಾರ ಪ್ರಸ್ತಾಪಿಸಿ ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಕನ್ನಡದಲ್ಲೂ ಪರೀಕ್ಷೆ ನಡೆಸಿ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಒತ್ತಡ ಹೇರಿದ್ದಾರೆ. ವಿಜಯವಾಣಿ ವರದಿಯನ್ನು ಗಮನಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕೇಂದ್ರ ಕಾರ್ವಿುಕ ಸಚಿವ ಭೂಪೇಂದ್ರ ಯಾದವ್ ಅವರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಯಾದವ್ ಅವರು ಅನ್ಯಾಯ ಸರಿಪಡಿಸುವ ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ. ಸರೋಜಿನಿ ಮಹಿಷಿ ವರದಿ ಪ್ರಕಾರ ಕೇಂದ್ರ ಸರ್ಕಾರದ ಉದ್ದಿಮೆಗಳಲ್ಲಿಯೂ ಕನ್ನಡಿಗರಿಗೆ ಮೀಸಲಾತಿ ಇರಬೇಕೆಂದು ಶಿಫಾರಸು ಇದೆ. ಅದರ ಆಧಾರದಲ್ಲಿಯೇ ಆಗಾಗ ಕೇಂದ್ರದ ಮೇಲೆ ಒತ್ತಡ ತರುವ ಪ್ರಯತ್ನ ಇನ್ನೂ ನಡೆದಿದೆ. ಬ್ಯಾಂಕ್ ಪರೀಕ್ಷೆಗಳಲ್ಲಿ ಸಹ ಮೊದಲು ಪ್ರಾದೇಶಿಕ ಭಾಷೆಗಳಿಗೆ ಅವಕಾಶ ಇರಲಿಲ್ಲ. ವಿವಿಧ ರಾಜ್ಯಗಳಿಂದ ಆಕ್ಷೇಪ ಬಂದ ನಂತರ ಅವಕಾಶ ನೀಡಲಾಗಿತ್ತು. ನೀಟ್ ವಿಚಾರದಲ್ಲಿಯೂ ಆಕ್ರೋಶ ವ್ಯಕ್ತವಾಗಿತ್ತು. ತಮಿಳುನಾಡು ಅದರ ವಿರುದ್ಧ ನಿರ್ಣಯವನ್ನೇ ತೆಗೆದುಕೊಂಡಿತ್ತು.
ದನಿ ಎತ್ತಿದ ಪ್ರಮುಖರು:ವಿಜಯವಾಣಿ ವರದಿ ಗಮನಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಪತ್ರ ಬರೆದು ಅನ್ಯಾಯ ಸರಿಪಡಿಸುವಂತೆ ಮನವಿ ಮಾಡಿದ್ದಾರೆ. ರಾಜ್ಯಸಭಾ ಸದಸ್ಯ ಜೆ.ಸಿ. ಚಂದ್ರಶೇಖರ್ ಟ್ವೀಟ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಅನ್ಯಾಯ ಸರಿಪಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿಜಯವಾಣಿ ಕೇಂದ್ರ ಸರ್ಕಾರದ ಕಣ್ಣನ್ನು ತೆರೆಸಿದೆ. ವರದಿ ಗಮನಿಸಿದ ಕೂಡಲೇ ಕೇಂದ್ರ ಕಾರ್ವಿುಕ ಸಚಿವ ಭೂಪೇಂದ್ರ ಯಾದವ್ ಜತೆ ರ್ಚಚಿಸಿ ಪ್ರದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸಬೇಕು ಎಂದು ಹೇಳಿದ್ದೇನೆ. ಅವರು ‘ನನ್ನ ಗಮನಕ್ಕೆ ಬಾರದೆ ಈ ರೀತಿಯಾಗಿದೆ. ಕೂಡಲೇ ಸರಿಪಡಿಸುತ್ತೇನೆ’ ಎಂಬ ಭರವಸೆ ನೀಡಿದ್ದಾರೆ. ಅನ್ಯಾಯವಾಗಲು ಬಿಡುವುದಿಲ್ಲ. ಇಂತಹ ವರದಿಯ ಮೂಲಕ ಒಳ್ಳೆಯ ಕೆಲಸ ಮಾಡಿದ್ದಕ್ಕೆ ವಿಜಯವಾಣಿಯನ್ನು ಅಭಿನಂದಿಸುತ್ತೇನೆ.
|ಪ್ರಲ್ಹಾದ ಜೋಶಿಕೇಂದ್ರ ಸಚಿವ
ವಿಜಯವಾಣಿ ವರದಿ ಓದಿದ ತಕ್ಷಣವೇ ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ಕರೆ ಮಾಡಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದೇನೆ. ಕೇಂದ್ರ ಕಾರ್ವಿುಕ ಸಚಿವರು ತಪು್ಪ ಸರಿಪಡಿಸುವ ಭರವಸೆ ನೀಡಿದ್ದಾಗಿ ಹೇಳಿದ್ದಾರೆ.
|ಬಸವರಾಜ ಬೊಮ್ಮಾಯಿಸಿಎಂ
ಕೇಂದ್ರ ಸರ್ಕಾರ ನಿರಂತರ ವಾಗಿ ಪ್ರಾದೇಶಿಕ ಭಾಷೆಗಳ ಮೇಲೆ ದಬ್ಬಾಳಿಕೆ ಮಾಡುತ್ತಿರುವುದಕ್ಕೆ ಇಎಸ್​ಐನಲ್ಲಿ ಪ್ರಾದೇಶಿಕ ಭಾಷೆಗಳ ಕಡೆಗಣನೆ ಮತ್ತೊಂದು ಉದಾಹರಣೆ. ಕೂಡಲೇ ಅನ್ಯಾಯ ಸರಿಪಡಿಸಬೇಕು. ಸಿಎಂ ಸಹ ಕೇಂದ್ರದ ಮೇಲೆ ಒತ್ತಡ ತರಬೇಕು.
|ಸಿದ್ದರಾಮಯ್ಯಪ್ರತಿಪಕ್ಷದ ನಾಯಕ
ಕನ್ನಡಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ಅನ್ಯಾಯ ವನ್ನು ಸರಿಪಡಿಸುವಂತೆ ಕೇಂದ್ರ ಕಾರ್ವಿುಕ ಸಚಿವ ಭೂಪೇಂದ್ರ ಯಾದವ್ ಜತೆ ರ್ಚಚಿಸುವೆ.
|ಶೋಭಾ ಕರಂದ್ಲಾಜೆಕೇಂದ್ರ ಸಚಿವೆ
ಕೇಂದ್ರ ಸರ್ಕಾರ ಕನ್ನಡದ ಬಗ್ಗೆ ಮಲತಾಯಿ ಧೋರಣೆ ತೋರುವುದನ್ನು ಕೈಬಿಡಬೇಕು. ಕೇಂದ್ರದ ಕ್ರಮವನ್ನು ನೋಡಿದಾಗ ಒಕ್ಕೂಟ ವ್ಯವಸ್ಥೆ ಎಲ್ಲಿಗೆ ಬಂದಿದೆ ಎಂಬ ಆತಂಕವಾಗುತ್ತದೆ. ಸಿಎಂ ಇತ್ತ ಗಮನ ಹರಿಸಬೇಕು.
|ಜೆ.ಸಿ. ಚಂದ್ರಶೇಖರ್ರಾಜ್ಯಸಭಾ ಸದಸ್ಯ
ವಿಜಯವಾಣಿ ವರದಿ ಗಮನಿಸಿದ ಕೂಡಲೇ ಸಂಬಂಧಿಸಿದವರಿಗೆ ಪತ್ರ ಬರೆದು ಕನ್ನಡಿಗರಿಗೆ ಅನ್ಯಾಯ ಮಾಡದಿರುವಂತೆ ಒತ್ತಾಯಿಸಿದ್ದೇನೆ.
|ಟಿ.ಎಸ್. ನಾಗಾಭರಣಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಕಾರ್ವಿುಕರ ರಾಜ್ಯ ವಿಮಾ ನಿಗಮ ಎಂಥಾ ಕನ್ನಡದ್ವೇಷಿ ಎಂದರೆ, ಬೇರೆಲ್ಲ ಪ್ರಾದೇಶಿಕ ಭಾಷೆಗಳಲ್ಲಿ ವೆಬ್​ಸೈಟ್ ವಿವರ ಪ್ರಕಟಿಸಿದರೂ, ಕನ್ನಡಕ್ಕೆ ಮಾತ್ರ ಸ್ಥಾನ ನೀಡಿಲ್ಲ.https://www.esic.in/ಎಂದು ಟೈಪಿಸುತ್ತಿದ್ದಂತೆ ತೆರೆದುಕೊಳ್ಳುವ ವೆಬ್​ಸೈಟ್ ಮೂಲೆಯಲ್ಲಿ ಇಂಗ್ಲಿಷ್/ಭಾಷಾ ಎಂದು ತೋರಿಸುತ್ತದೆ. ಇಂಗ್ಲಿಷ್ ಡಿಫಾಲ್ಟಾಗಿ ಆಯ್ಕೆಯಾಗಿ ಎಲ್ಲ ಸೂಚಕಗಳನ್ನು ತೋರಿಸುತ್ತದೆ. ಇಲ್ಲಿ ಕ್ಲಿಕ್ಕಿಸಿದರೆ ಇಂಗ್ಲಿಷ್ ನಂತರ ಹಿಂದಿ ಆಯ್ಕೆ ಇದ್ದು, ಪ್ರಾಧಾನ್ಯತೆ ನೀಡಲಾಗಿದೆ. ಇದರ ನಂತರದ ಆದ್ಯತೆ ಇರುವುದು ಗುಜರಾತಿ ಭಾಷೆಗೆ. ಬಳಿಕ ದಕ್ಷಿಣದ ಭಾಷೆಗಳಾದ ತಮಿಳು, ಮಲಯಾಳಂ ಆಯ್ಕೆಗಳಿವೆ. ಕೊನೆಯಲ್ಲಾದರೂ ಕನ್ನಡವಿರಬಹುದಾ? ಎಂದು ಹುಡುಕಿದರೆ ನಿರಾಸೆ ನಿಶ್ಚಿತ. ಏಕೆಂದರೆ ಕೊನೆಯ ಸ್ಥಾನ ಪಂಜಾಬಿಗೆ ದಕ್ಕಿದೆ. ಇನ್ನು ಉಳಿದ ಭಾಷೆಯವರು ಭಾರಿ ಹೆಮ್ಮೆಪಡುವಂತಹ ಸಂಗತಿಗಳೇನು ಇಲ್ಲಿಲ್ಲ. ಮುಖಪುಟ ಹೊರತುಪಡಿಸಿ ಉಳಿದೆಲ್ಲ ವಿವರಗಳು ಇಂಗ್ಲಿಷ್​ನಲ್ಲೇ ತೆರೆದುಕೊಳ್ಳುತ್ತವೆ. ಪ್ರಾದೇಶಿಕ ಭಾಷಾ ಬಳಕೆ ಸೂಚಕಗಳಿಗಷ್ಟೇ ಎನ್ನುವಂತಾಗಿದೆ. ಆದರೆ, ಹಿಂದಿಯಲ್ಲಿ ಸಂಪೂರ್ಣ ವಿವರ ಓದಬಹುದು.
ಉದ್ಯೋಗದ ಮಾಹಿತಿ:ಸಂಸ್ಥೆಯಲ್ಲಿನ ಉದ್ಯೋಗಾವಕಾಶ, ನೇಮಕಾತಿ ಪ್ರಕ್ರಿಯೆಗೆ ಪ್ರತ್ಯೇಕವಾಗಿರುವ ಪೋರ್ಟಲ್​ನ ಸ್ಥಿತಿ ಇದಕ್ಕಿಂತಲೂ ಅಧ್ವಾನವಾಗಿದೆ. ಅರ್ಜಿ ಸಲ್ಲಿಸಲು ಬಳಸಬೇಕಿರುವhttps://www.esic.nic.in/recruitmentsಲಿಂಕ್​ನ ವೆಬ್​ಸೈಟ್​ನಲ್ಲಿರೋದು ಇಂಗ್ಲಿಷ್ ಮತ್ತು ಹಿಂದಿ ಮಾತ್ರ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
