ನವದೆಹಲಿ :ರಸಗೊಬ್ಬರಗಳ ಬೆಲೆಯನ್ನು ಹೆಚ್ಚಿಸಬಾರದು ಎಂದು ಭಾರತ ಸರ್ಕಾರ ರಸಗೊಬ್ಬರ ಉತ್ಪದಾಕ ಕಂಪೆನಿಗಳಿಗೆ ಹೇಳಿರುವುದಾಗಿ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಮನಸುಖ್​ ಮಾಂಡವೀಯ ಹೇಳಿದ್ದಾರೆ.
ಡೈ ಅಮೋನಿಯಂ ಫಾಸ್ಫೇಟ್ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಕೆಲವು ಕಂಪನಿಗಳು ಮಾರುಕಟ್ಟೆಯಲ್ಲಿ ರಸಗೊಬ್ಬರದ ಬೆಲೆಯನ್ನು ಹೆಚ್ಚಿಸಿವೆ ಎಂಬ ವರದಿಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಉತ್ಪಾದಕರೊಂದಿಗೆ ಇಂದು ಸಭೆ ನಡೆಸಿದ ಸಚಿವರು, “ಪ್ರಸ್ತುತ ಸಂದರ್ಭಗಳಲ್ಲಿ ರಸಗೊಬ್ಬರಗಳ ಬೆಲೆಯಲ್ಲಿ ತಕ್ಷಣದ ಹೆಚ್ಚಳ ಮಾಡದಿರುವಂತೆ ನಿರ್ಧರಿಸಲಾಗಿದೆ” ಎಂದು ಹೇಳಿದರು.
ಇದನ್ನೂ ಓದಿ:ಇಲ್ಲಿನ 66 ಕರೊನಾ ಲಸಿಕಾ ಕೇಂದ್ರಗಳಲ್ಲಿ 41ರಲ್ಲಿ ಸ್ಟಾಕ್ ಇಲ್ಲ !
ಜಾಗತಿಕ ಮಾರುಕಟ್ಟೆಯಲ್ಲಿ ಪೊಟ್ಯಾಶ್ ಮತ್ತು ಫಾಸ್ಫೇಟ್ ಬೆಲೆಗಳು ಮೇಲಕ್ಕೇರಿದ ನಂತರ ರಸಗೊಬ್ಬರ ಕಂಪೆನಿಗಳು ಈ ವಾರ ಮೂರನೇ ಒಂದು ಭಾಗಕ್ಕಿಂತ ಹೆಚ್ಚಾಗಿ ಬೆಲೆ ಏರಿಸಿದ್ದವು ಎಂದು ವರದಿಗಳು ಸೂಚಿಸಿದ್ದವು.
ಇಂದು ಷೇರು ಮಾರುಕಟ್ಟೆಯಲ್ಲಿ ದೀಪಕ್ ಫರ್ಟಿಲೈಸರ್ಸ್​​ನ ಷೇರುಗಳ ಬೆಲೆ ಶೇ 3.63 ರಷ್ಟು, ರಾಮ ಫಾಸ್ಫೇಟ್ಸ್​​​ನ ಷೇರುಗಳು ಶೇ .2.73 ರಷ್ಟು, ರಾಷ್ಟ್ರೀಯ ಕೆಮಿಕಲ್ಸ್​ ಅಂಡ್​ ಫರ್ಟಿಲೈಸರ್ಸ್​ ಕಂಪೆನಿಯ ಷೇರುಗಳು ಶೇ. 3 ರಷ್ಟು ಮತ್ತು ಎಸ್‌ಪಿಐಸಿಯ ಷೇರುಗಳು ಶೇ 3.3 ರಷ್ಟು ಕುಸಿದಿವೆ ಎನ್ನಲಾಗಿದೆ.(ಏಜೆನ್ಸೀಸ್)
“ಕರೊನಾ ಲಸಿಕೆ ರಫ್ತು ಕೂಡಲೇ ನಿಲ್ಲಿಸಿ” : ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಪತ್ರ

ಕುರ್ಚಿಗಳನ್ನು ಆಕ್ರಮಿಸಿಕೊಂಡ ಪುರುಷರು, ನೋಡುತ್ತಾ ನಿಂತ ಅಧ್ಯಕ್ಷೆ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 5 =
Remember me
