ನವದೆಹಲಿ:ಪ್ರಸ್ತುತ ಕೋವಿಡ್ ಎರಡನೇ ಅಲೆಯಿಂದ ದೇಶದಲ್ಲಿ ಮತ್ತೆ ಬಿಕ್ಕಟ್ಟು ಉಂಟಾಗಿದೆ. ಇದರಿಂದ ಬಡವರು, ನಿರ್ಗತಿಕರು, ಕಾರ್ಮಿಕರು, ದಿನಗೂಲಿಗಳು ತೊಂದರೆಗೆ ಸಿಕ್ಕಂತಾಗಿದೆ. ಈ ನಿಟ್ಟಿನಲ್ಲಿ ಇವರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ.
ಮೇ ಮತ್ತು ಜೂನ್​ ಎರಡು ತಿಂಗಳು ದೇಶದಲ್ಲಿ ಬಡವರಿಗೆ 5 ಕೆಜಿ ಉಚಿತ ಪಡೀತರ ನೀಡುವ ನಿರ್ಧಾರವನ್ನು (ಪ್ರತಿ ತಿಂಗಳು ಪ್ರತಿ ಒಂದು ಬಿಪಿಎಲ್​ ಕಾರ್ಡ್​​ಗೆ ಐದು ಕೆಜಿ ಅಕ್ಕಿ ಅಥವಾ ಗೋದಿ) ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪ್ರಕಟಿಸಿದ್ದಾರೆ. ಇದು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ (PMGKAY) ಭಾಗವಾಗಿ ಜಾರಿಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇಂದು ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ ನಂತರ ಮೋದಿ ಅವರು ಈ ಘೋಷಣೆ ಮಾಡಿದರು.
ಈ ನಿರ್ಧಾರದಿಂದ ಸುಮಾರು 80 ಕೋಟಿ ಜನಕ್ಕೆ ಅನುಕೂಲ ಆಗಲಿದ್ದು, 20 ಸಾವಿರ ಕೋಟಿ ರೂ ಕೇಂದ್ರಕ್ಕೆ ಹೊರೆಯಾಗಲಿದೆ. ಕಳೆದ ವರ್ಷ ಲಾಕ್​ಡೌನ್​ ಘೋಷಿಸಿದ ಮೇಲೆ ಅನೇಕ ಬಡವರು, ಕಾರ್ಮಿಕರು ತೊಂದರೆಗೆ ಸಿಲುಕಿದ್ದರಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಮೇ ಜೂನ್​​ನಲ್ಲಿ ಪ್ರತಿ ತಿಂಗಳು 5 ಕೆಜಿ ಪಡೀತರ ನೀಡಲಾಗಿತ್ತು. ನಂತರ ನವೆಂಬರ್​ವರೆಗೆ ಮುಂದುವರೆಸಲಾಗಿತ್ತು.
ಕಳೆದ ವರ್ಷ 7 ತಿಂಗಳು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಂಗವಾಗಿ ದೇಶದಲ್ಲಿ 200 ಲಕ್ಷ ಟನ್ ದವಸ ಧಾನ್ಯಗಳನ್ನು ವಿತರಿಸಲಾಗಿತ್ತು.
ವೈದ್ಯರ ಸೇವಾ ಅವಧಿ ವಿಸ್ತರಣೆ ; ಆಕ್ಸಿಜನ್ ಪ್ಲ್ಯಾಂಟ್ ಆಮದು

ಆಗಾಗ ಮುಖ್ಯಮಂತ್ರಿಗಳಿಗೆ ಪಾಠ ಮಾಡಲು ನೀವೇನು ಹೆಡ್​ಮಾಸ್ಟರ್​ ಅಲ್ಲ: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಟಾಂಗ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 16 =
Remember me
