ನವದೆಹಲಿ:ತಮಿಳುನಾಡು ಮೂಲದ ಲಕ್ಷ್ಮಿ ವಿಲಾಸ್ ಬ್ಯಾಂಕ್ (ಎಲ್​ವಿಬಿ) ಅನ್ನು ಸಿಂಗಾಪುರ ಮೂಲದ ಬ್ಯಾಂಕ್​ನ ಭಾರತೀಯ ಸಂಸ್ಥೆ ಡಿಬಿಎಸ್ ಬ್ಯಾಂಕ್ ಇಂಡಿಯಾದಲ್ಲಿ (ಡಿಬಿಐಎಲ್) ವಿಲೀನಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ. ವಿತ್​ಡ್ರಾವಲ್ ಮೇಲೆ ಹೇರಿದ್ದ ಮಿತಿಯನ್ನು ತೆಗೆದು ಹಾಕಲಾಗಿದೆ ಎಂದು ಸಂಪುಟ ಸಭೆಯ ನಂತರ ಸಚಿವ ಪ್ರಕಾಶ್ ಜಾವಡೇಕರ್ ಸುದ್ದಿಗಾರರಿಗೆ ತಿಳಿಸಿದರು.
ಈ ನಿರ್ಧಾರದಿಂದ ಸುಮಾರು 20 ಲಕ್ಷ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಬ್ಯಾಂಕ್​ನ 4,000 ನೌಕರರ ಉದ್ಯೋಗದ ರಕ್ಷಣೆಯೂ ಆಗಲಿದೆ. ಠೇವಣಿದಾರರ 20,000 ಕೋಟಿ ರೂಪಾಯಿ ಸುರಕ್ಷಿತವಾಗಿದ್ದು ಯಾರೂ ಚಿಂತಿಸುವ ಅಗತ್ಯವಿಲ್ಲ ಎಂದು ಸಚಿವರು ತಿಳಿಸಿದರು. ಗ್ರಾಹಕರು 25,000 ರೂಪಾಯಿಗಿಂತ ಹೆಚ್ಚು ಹಣವನ್ನು ಖಾತೆಗಳಿಂದ ಹಿಂದೆ ಪಡೆಯಬಾರದು ಎಂದು ಆರ್​ಬಿಐ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ನವೆಂಬರ್ 17ರಂದು ನಿರ್ಬಂಧ ಹೇರಿತ್ತು. ಬ್ಯಾಂಕ್ ಆಡಳಿತ ಮಂಡಳಿಯನ್ನು ಸೂಪರ್​ಸೀಡ್ ಮಾಡಿದ್ದ ಆರ್​ಬಿಐ, ಕೆನರಾ ಬ್ಯಾಂಕ್​ನ ಮಾಜಿ ಕಾರ್ಯನಿರ್ವಾಹಕೇತರ ಅಧ್ಯಕ್ಷ ಟಿ.ಎನ್. ಮನೋಹರನ್ ಅವರನ್ನು 30 ದಿನ ಅವಧಿಗೆ ಆಡಳಿತಗಾರರನ್ನಾಗಿ ನೇಮಿಸಿತ್ತು.
20 ರಾಜ್ಯಗಳಲ್ಲಿ ಶಾಖೆ:1926ರಲ್ಲಿ ತಮಿಳುನಾಡಿನ ಕರೂರಿನ ಏಳು ವರ್ತಕರು ಸೇರಿ ಆರಂಭಿಸಿದ ಎಲ್​ವಿಬಿ, 20 ರಾಜ್ಯಗಳಲ್ಲಿ 566 ಶಾಖೆ, 918 ಎಟಿಎಂ ಹೊಂದಿದೆ. ಈ ವರ್ಷ ಮಾರ್ಚ್ ವೇಳೆಗೆ 836.04 ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು. ಡಿಬಿಐಎಲ್ ಬ್ಯಾಂಕಿಂಗ್ ಕಂಪನಿಯಾಗಿದ್ದು 2013ರಲ್ಲಿ ಕಂಪನಿಗಳ ಕಾನೂನಿನನ್ವಯ ಅದನ್ನು ಭಾರತದಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿದೆ. ನವದೆಹಲಿಯಲ್ಲಿ ಅದರ ನೋಂದಾಯಿತ ಕಚೇರಿಯಿದೆ.
2480 ಕೋಟಿ ರೂಪಾಯಿ ಎಫ್​ಡಿಐ:ಎಟಿಸಿ ಟೆಲಿಕಾಂನ ಶೇ. 12 ಷೇರು ಖರೀದಿಗೆ ಎಟಿಸಿ ಏಷ್ಯಾ ಪೆಸಿಫಿಕ್ ಕಂಪನಿ 2,480 ಕೋಟಿ ರೂಪಾಯಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್​ಡಿಐ) ಸಂಪುಟ ಸಭೆ ಸಮ್ಮತಿಸಿದೆ.
ಎನ್​ಐಐಎಫ್​ಗೆ -ಠಿ; 6,000 ಕೋಟಿ
ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (ಎನ್​ಐಐಎಫ್) ಪ್ರಾಯೋಜಿತ ಎನ್​ಐಐಎಫ್ ಸಾಲ ವೇದಿಕೆಯಲ್ಲಿ (ಡೆಟ್ ಪ್ಲಾಟ್​ಫಾರಂ) -ಠಿ; 6,000 ಕೋಟಿ ಬಂಡವಾಳ ಹೂಡುವ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ. ಈ ಹೂಡಿಕೆ ಈ ತಿಂಗಳ ಆರಂಭದಲ್ಲಿ ಘೋಷಿಸಲಾದ ಆತ್ಮನಿರ್ಭರ ಭಾರತ್ 3.0 ಪ್ಯಾಕೇಜ್​ನ ಭಾಗವಾಗಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × four =
Remember me
