ನವದೆಹಲಿ:ಮಾಹಿತಿ ತಂತ್ರಜ್ಞಾನ (ಐಟಿ)- 2000 ಇಸ್ವಿ ಕಾಯ್ದೆಯ 66ಎ ಸೆಕ್ಷನ್ ಅನ್ನು ಸುಪ್ರೀಂಕೋರ್ಟ್ ರದ್ದು ಮಾಡಿರುವ ಹಿನ್ನೆಲೆಯಲ್ಲಿ ಈ ಸೆಕ್ಷನ್ ಅಡಿ ಪ್ರಕರಣ ದಾಖಲಿಸದಂತೆ ಎಚ್ಚರ ವಹಿಸಿ ಎಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬುಧವಾರ ಸೂಚಿಸಿದೆ. ಐಟಿ ಕಾಯ್ದೆಯ 66ಎ ಸೆಕ್ಷನ್​ನಡಿ ಎಫ್​ಐಆರ್ ದಾಖಲಿಸಿರುವುದನ್ನು ಪ್ರಶ್ನಿಸಿದ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರವನ್ನು ಕಳೆದ ವಾರ ತರಾಟೆಗೆ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದು ಈ ಸೆಕ್ಷನ್ ರದ್ದುಗೊಂಡಿರುವುದನ್ನು ನೆನಪಿಸಿದ್ದಾರೆ.
‘ಎಲ್ಲ ಪೊಲೀಸ್ ಠಾಣೆಗಳಿಗೆ ಈ ಸೆಕ್ಷನ್ ಬಗ್ಗೆ ಮಾಹಿತಿ ನೀಡಿ. ಇದರ ಅಡಿಯಲ್ಲಿ ಪ್ರಕರಣ ದಾಖಲಿಸದಂತೆ ತಿಳಿಸಿ ಮತ್ತು ಈಗಾಗಲೇ ಎಫ್​ಐಆರ್ ದಾಖಲಾಗಿದ್ದರೆ ಅದನ್ನು ಕೂಡಲೇ ಹಿಂಪಡೆಯಿರಿ’ ಎಂದು ಭಲ್ಲಾ ಸೂಚಿಸಿದ್ದಾರೆ.
ಸುಪ್ರೀಂ ಅಸಮಾಧಾನ: ಐಟಿ ಕಾಯ್ದೆ 66ಎ ಸೆಕ್ಷನ್ ರದ್ದುಗೊಂಡಿದ್ದರೂ ಎಫ್​ಐಆರ್ ದಾಖಲಾಗುತ್ತಿದೆ ಎಂದು ‘ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್’ ಸಂಸ್ಥೆ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಜುಲೈ 5ರಂದು ಈ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತು. ರದ್ದುಗೊಂಡ ಸೆಕ್ಷನ್ ಅನ್ವಯ 11 ರಾಜ್ಯಗಳಲ್ಲಿ 745 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಪೊಲೀಸರು 1,400 ಹೊಸ ಎಫ್​ಐಆರ್​ಗಳನ್ನು ದಾಖಲಿಸಿದ್ದಾರೆ ಎಂಬುದು ಭಯಾನಕ ಎಂದು ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ನೇತೃತ್ವದ ಪೀಠ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿತ್ತು.
ಏನಿದು 66ಎ ಸೆಕ್ಷನ್?:ಅಪಾಯ, ಅಡಚಣೆ, ಅವಮಾನ ಉಂಟುಮಾಡುವ, ಅನನುಕೂಲತೆಗೆ ಆಸ್ಪದವಾಗುವ, ಗಾಯ, ಕ್ರಿಮಿನಲ್ ಸ್ವರೂಪದ ಬೆದರಿಕೆ, ಹಗೆತನ ಅಥವಾ ದ್ವೇಷಕ್ಕೆ ಪ್ರಚೋದನೆ ನೀಡುವ, ದುರುದ್ದೇಶದ ಇಚ್ಛಾಶಕ್ತಿಯನ್ನು ಪ್ರದರ್ಶಿಸುವ ಸುಳ್ಳು ಸುದ್ದಿ ಅಥವಾ ಮಾಹಿತಿಯನ್ನು ಸಂವಹನ ಮಾಡಿದರೆ ಈ ಬಗ್ಗೆ ಮಾಹಿತಿ ತಂತ್ರಜ್ಞಾನ (ಐಟಿ)- 2000 ಇಸ್ವಿ ಕಾಯ್ದೆಯ 66ಎ ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಬಹುದಾಗಿತ್ತು. ಈ ಸೆಕ್ಷನ್ ಅನ್ನು ಸಾಮಾಜಿಕ ಜಾಲತಾಣದ ಪೋಸ್ಟ್​ಗಳ ವಿರುದ್ಧ ಅತಿ ಹೆಚ್ಚು ಬಳಕೆ ಮಾಡಲಾಗುತ್ತಿತ್ತು. ಆರೋಪಿಯನ್ನು ಪೊಲೀಸರು ಬಂಧಿಸಬಹುದಿತ್ತು. ಹೀಗಾಗಿ ಇದು ಆಕ್ರಮಣ ಕಾರಿ ಮತ್ತು ಭೀತಿ ಹುಟ್ಟಿಸುವ ಕಲಂ ಎಂದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಶ್ರೇಯಾ ಸಿಂಘಾಲ್ ಮತ್ತು ಭಾರತ ಸರ್ಕಾರದ ವಿರುದ್ಧ ಪ್ರಕರಣದಲ್ಲಿ, ಐಟಿ ಕಾಯ್ದೆಯ 66ಎ ಸೆಕ್ಷನ್ ಅಸಂವಿಧಾನಿಕ ಮತ್ತು ಇದು ದುರುದ್ದೇಶಕ್ಕೆ ಹೆಚ್ಚು ಬಳಕೆಯಾಗುವ ಅಪಾಯ ಇದೆ ಎಂದು 2015ರ ಮಾರ್ಚ್ 24ರಂದು ಅಭಿ ಪ್ರಾಯಪಟ್ಟ ಸುಪ್ರೀಂಕೋರ್ಟ್ ಸೆಕ್ಷನ್ ಅನ್ನು ರದ್ದು ಪಡಿಸಿ ತೀರ್ಪು ನೀಡಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
