ನವದೆಹಲಿ:ಕರೊನಾ ವಿರುದ್ಧದ ಹೋರಾಟದಲ್ಲಿ ಹೆಚ್ಚು ಕ್ರಿಯಾಶೀಲವಾಗಿ ಹಾಗೂ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಎಂಬಿಬಿಎಸ್ ಪದವೀಧರ ಐಬಿಎಸ್/ ಐಪಿಎಸ್/ ಐಆರ್​ಎಸ್ ಅಧಿಕಾರಿಗಳ ಪಟ್ಟಿಯನ್ನು ತಯಾರಿಸಲು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಯೋಜಿಸುತ್ತಿದೆ.ಕಳೆದ ವಾರ ಇಲಾಖೆಯ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ರಾಜ್ಯ ಸಿಬ್ಬಂದಿ ಸಚಿವ ಜಿತೇಂದ್ರ ಸಿಂಗ್ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಂತಹ ಅಧಿಕಾರಿಗಳ ಸೇವೆಯನ್ನು ಅಗತ್ಯವಿದ್ದರೆ ಬಳಸಿಕೊಳ್ಳಲು ಇಂತಹ ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಸೂಚಿಸಿದ್ದಾರೆ ಎಂದು ಅಭಿವೃದ್ಧಿಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ನದಿಗೆ ಬಿದ್ದು ಹುತಾತ್ಮರಾದ ಭಾರತದ ಕರ್ನಲ್​, ಇಬ್ಬರು ಯೋಧರು; ಐವರು ಚೀನಿಯರ ಸಾವು
ಎಂಬಿಬಿಎಸ್ ಪದವಿ ಹೊಂದಿದ ನಾಗರಿಕ ಸೇವಾ ಅಧಿಕಾರಿಗಳ ಪರಿಣತಿ ಮತ್ತು ಆಡಳಿತಾತ್ಮಕ ಕೆಲಸಗಳಲ್ಲಿ ಹೊಂದಾಣಿಕೆಯಾಗುವುದರಿಂದ ಆರೋಗ್ಯ ಸಂಬಂಧಿ ಸಚಿವಾಲಯಗಳಲ್ಲಿ ಇಂತಹ ಅಧಿಕಾರಿಗಳ ನೇಮಕಾತಿ ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕಿದೆ ಎಂಬುದು ಸರ್ಕಾರದ ಆಲೋಚನೆಯಾಗಿದೆ. ಇದು ಹೆಚ್ಚಿನ ಕ್ಷೇತ್ರಗಳಲ್ಲಿ ಪರಿಣತರನ್ನು ತರಲು ಸರ್ಕಾರದ ಪ್ರಯತ್ನಗಳಿಗೆ ಅನುಗುಣವಾಗಿದೆ” ಎಂದು ಅವರು ಹೇಳಿದರು.ಇಲಾಖೆಯ ವಕ್ತಾರ ಶಂಭು ಚೌಧರಿ ಮಾತನಾಡಿ ‘ಇಂಥ ಪಟ್ಟಿಯನ್ನು ತಯಾರಿಸುವ ನಿರ್ಧಾರವನ್ನು ಒಂದೂವರೆ ತಿಂಗಳ ಹಿಂದೆಯೇ ತೆಗೆದುಕೊಳ್ಳಲಾಗಿದೆ. ಆದರೆ ಈ ನಿಟ್ಟಿನಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ :ನಕಲಿ ಪ್ರಮಾಣಪತ್ರ ಬಳಸಿ ನೇಮಕಾತಿ ಪಡೆದುಕೊಂಡಿದ್ದ ಸಂಚುಕೋರ
ಇನ್ನೊಬ್ಬ ಅಧಿಕಾರಿ ಮುಂಬೈನಲ್ಲಿ ಕೋವಿಡ್-ಸಂಬಂಧಿಸಿದಂತೆ ಪರಿಣಾಮಕಾರಿ ಕಾರ್ಯನಿರ್ವಹಣೆಗಾಗಿ ನಾಲ್ವರು ಪ್ರಮುಖ ಐಎಎಸ್ ಅಧಿಕಾರಿಗಳಿಗೆ ನಗರದ ಪ್ರಮುಖ ಸರ್ಕಾರಿ ಆಸ್ಪತ್ರೆಗಳ ಮೇಲ್ವಿಚಾರಣೆಯ ಉಸ್ತುವಾರಿ ನೀಡಿದ ಉದಾಹರಣೆ ನೀಡಿದರು.“ಸಾಂಕ್ರಾಮಿಕ ರೋಗದ ನಿರ್ವಹಣೆಗೆ ಈ ರೀತಿಯ ಕೆಲಸಕ್ಕೆ ಸಾಕಷ್ಟು ಐಎಎಸ್ ಅಧಿಕಾರಿಗಳು ಬೇಕಾಗುತ್ತಾರೆ. ಆದ್ದರಿಂದ ಅವರು ವೈದ್ಯಕೀಯ ವಲಯದಲ್ಲಿ ಪರಿಣತರಾಗಿದ್ದರೆ ಅದು ತುಂಬಾ ಸಹಾಯಕವಾಗುತ್ತದೆ” ಎಂದು ಅಧಿಕಾರಿ ಹೇಳಿದರು.
ಇದನ್ನೂ ಓದಿ:ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಮೋದಿ ಮಾಸ್ಕ್​: ಭರ್ಜರಿ ಮಾರಾಟ
ವೈದ್ಯಕೀಯ ಪದವಿ ಮಾಡಿದ ಐಪಿಎಸ್ ಅಧಿಕಾರಿಯೊಬ್ಬರು ಮಾತನಾಡಿ ಈ ನಡೆ ಸ್ವಾಗತಾರ್ಹವೇ, ಆದರೆ ವೈದ್ಯಕೀಯ ಪದವಿ ಪೂರೈಸಿದ ಎಲ್ಲ ಅಧಿಕಾರಿಗಳೂ ಮುಂಚೂಣಿಯಲ್ಲಿ ಕೆಲಸ ಮಾಡಲು ಆಗುವುದಿಲ್ಲ. ಒಂದು ರೀತಿಯಲ್ಲಿ ಹೇಳುವುದಾದರೆ, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಈಗಾಗಲೇ ಮುಂಚೂಣಿ ಸಿಬ್ಬಂದಿಯೇ ಆಗಿದ್ದಾರೆ… ಆಸ್ಪತ್ರೆಗಳಲ್ಲಿ ಅದಕ್ಕಿಂತ ಹೆಚ್ಚಿನ ಸಮಯವನ್ನು ಕಳೆಯಲು ಅವರಿಗೆ ಸಾಧ್ಯವಾಗುವುದಿಲ್ಲ. ಆ ಸಂದರ್ಭದಲ್ಲಿ ಆಡಳಿತ ಮತ್ತು ಕಾನೂನು, ಸುವ್ಯವಸ್ಥೆಯನ್ನು ಯಾರು ನೋಡಿಕೊಳ್ಳುತ್ತಾರೆ? ” ಎಂದು ಅವರು ಪ್ರಶ್ನಿಸಿದರು.“ಹೆಚ್ಚಿನ ಅಧಿಕಾರಿಗಳನ್ನು ವೈದ್ಯಕೀಯ-ಸಂಬಂಧಿತ ಹುದ್ದೆಗಳಿಗೆ ನಿಯೋಜಿಸಲು ಸರ್ಕಾರ ಬಯಸಿದರೆ, ಅದು ಐಎಎಸ್‌ ಮಟ್ಟದ ಅಧಿಕಾರಿಗಳನ್ನು ನೇಮಿಸಬಹುದು. ಆದರೆ ಐಪಿಎಸ್, ಐಆರ್​ಎಸ್ ಅಥವಾ ಅರಣ್ಯ ಸೇವಾ ಅಧಿಕಾರಿಗಳನ್ನು ಹೇಗೆ ನಿಯೋಜಿಸುತ್ತೀರಿ? ಎಂದು ಅವರು ಪ್ರಶ್ನಿಸಿದರು.
ಕತ್ತಲಲ್ಲಿ ಕಲ್ಲು ತೂರಾಟ ಮಾಡಿದ ವಂಚಕ ಚೀನಿ ಯೋಧರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + twenty =
Remember me
