ನವದೆಹಲಿ:ಇತ್ತೀಚೆಗಷ್ಟೇ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಮಹಾರಾಷ್ಟ್ರದ ಟ್ರೈನಿ ಐಎಎಸ್​ ಅಧಿಕಾರಿಯಾಗಿರುವ ಪೂಜಾ ಖೇಡ್ಕರ್, ಒಬ್ಬ ಅಧಿಕಾರಿಗೆ ಸರ್ಕಾರ ಕೊಡುವ ಸವಲತ್ತುಗಳನ್ನು ಮೀರಿ ತನಗೆ ಹೇಗೆ ಬೇಕೋ ಹಾಗೆ ಅಧಿಕಾರ ದುರ್ಬಳಕೆ ಮಾಡಿಕೊಂಡ ರೀತಿಗೆ ರಾಜ್ಯ ಸರ್ಕಾರ ಛೀಮಾರಿ ಹಾಕಿದೆ. ಪುಣೆಯಲ್ಲಿ ಟ್ರೈನಿ ಕಲೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಪೂಜಾ ಅಧಿಕಾರ ದುರ್ಬಳಕೆ ಅತಿಯಾದ ಹಿನ್ನೆಲೆ ಸರ್ಕಾರವೇ ಕ್ರಮ ಕೈಗೊಂಡಿದ್ದು, ವಾಶಿಮ್‌ನಲ್ಲಿ ಸೂಪರ್‌ನ್ಯೂಮರರಿ ಸಹಾಯಕ ಕಲೆಕ್ಟರ್ ಆಗಿ ಕೆಲಸ ಮಾಡಲು ನಿರ್ದೇಶಿಸಿತು.
ಇದನ್ನೂ ಓದಿ:ಜಾಮೀನು ದೊರೆತರು ಸಿಎಂ ಕೇಜ್ರಿವಾಲ್​ಗಿಲ್ಲ ಬಿಡುಗಡೆ ಭಾಗ್ಯ; ನ್ಯಾಯಾಂಗ ಬಂಧನ ವಿಸ್ತರಿಸಿದ ಕೋರ್ಟ್​
ಮಹಾರಾಷ್ಟ್ರದ ಪುಣೆಯಲ್ಲಿ ಟ್ರೈನಿ ಐಎಎಸ್​ ಆಗಿ ಕೆಲಸ ಮಾಡುತ್ತಿದ್ದ ಪೂಜಾಗೆ ಅದು ತರಬೇತಿ ಅವಧಿಯಾಗಿತ್ತು. ಈ ಹಂತದಲ್ಲೇ ತನಗೆ ವಿಶೇಷ ಅಧಿಕಾರ ನೀಡುವಂತೆ ಜಿಲ್ಲಾಧಿಕಾರಿ ಕಚೇರಿಗೆ ಆಕೆ ಪತ್ರ ಬರೆದಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಅದಲ್ಲದೆ, ತನ್ನ ಖಾಸಗಿ ಕಾರಿನ ಮೇಲೆ ಕೆಂಪು ಮತ್ತು ನೀಲಿ ದೀಪವನ್ನು ಬಳಸುವುದರ ಜತೆಗೆ, ವಿಐಪಿ ನಂಬರ್ ಪ್ಲೇಟ್ ಸಹ ಅಳವಡಿಸಿಕೊಂಡಿದ್ದರು ಮತ್ತು ಅದರ ಮೇಲೆ ಮಹಾರಾಷ್ಟ್ರ ಸರ್ಕಾರ ಎಂದು ಬೋರ್ಡ್ ಹಾಕಿಸಿದ್ದರು. ಇದೆಲ್ಲವೂ ಸದ್ಯ ಆಕೆಯ ವರ್ಗಾವಣೆಗೆ ಕಾರಣವಾಗಿದೆ.
ಸರ್ಕಾರ ಕೊಡುವ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡ ಆರೋಪದಡಿ ಸಿಲುಕಿರುವ ಪೂಜಾ ವಿರುದ್ಧ ಪ್ರಸ್ತುತ ತನಿಖೆ ಆರಂಭಗೊಂಡಿದೆ. ಟ್ರೈನಿ ಐಎಎಸ್​ ಅಧಿಕಾರಿಯಾಗಿದ್ದ ಖೇಡ್ಕರ್ ವಿರುದ್ಧ ಕೇಳಿಬಂದಿರುವ ಆರೋಪಗಳ ಸರಮಾಲೆಯನ್ನು ಗಂಭೀರವಾಗಿ ಸ್ವೀಕರಿಸುವ ಮಹಾರಾಷ್ಟ್ರ ಸರ್ಕಾರ, ಹೆಚ್ಚುವರಿ ತನಿಖೆ ನಡೆಸಲು ಮುಂದಾಗಿದೆ. ಈ ಬೆನ್ನಲ್ಲೇ ಇದೀಗ ತನಿಖೆಯನ್ನು ಕೇಂದ್ರ ಸರ್ಕಾರ ವಹಿಸಿಕೊಂಡಿದ್ದು, ವಿಚಾರಣೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.
ಇದನ್ನೂ ಓದಿ:ಶಂಭು ಗಡಿ ಸಂಚಾರಮುಕ್ತಗೊಳಿಸಿ; ಸರ್ಕಾರಕ್ಕೆ ಸುಪ್ರೀಂ ಸೂಚನೆ
ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಹೆಚ್ಚುವರಿ ಕಾರ್ಯದರ್ಶಿಯಾಗಿರುವ ಮನೋಜ್ ದ್ವಿವೇದಿ ಈ ತನಿಖೆಯನ್ನು ಕೈಗೊಂಡಿದ್ದಾರೆ. ಇನ್ನೆರೆಡು ವಾರಗಳಲ್ಲಿ ತನಿಖೆ ಪೂರ್ಣಗೊಳ್ಳಲಿದೆ ಎಂಬ ಸುಳಿವು ಸಿಕ್ಕಿದೆ. ಪೂಜಾ ಖೇಡ್ಕರ್ ತಪ್ಪಿತಸ್ಥರು ಎಂಬುದು ಸಾಬೀತಾದರೆ ಆಕೆಯನ್ನು ಕೆಲಸದಿಂದ ವಜಾಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ,(ಏಜೆನ್ಸೀಸ್).
ಅವರಿಂದ ಮನನೊಂದು ಅರ್ಧಕ್ಕೆ ‘ಮಜಾ ಟಾಕೀಸ್’​ ಕೈಬಿಡಲು ನಿರ್ಧರಿಸಿದ್ದರು ನಟಿ ಅಪರ್ಣಾ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine + 17 =
Remember me
