ನವದೆಹಲಿ:ಕೋವಿಡ್​ ಕಾಯಿಲೆ ತಡೆಗಟ್ಟುವ ಹಿನ್ನೆಲೆಯಲ್ಲಿ ಕರೊನಾ ಲಸಿಕೆ ಖರೀದಿ ಹಾಗೂ ವಿತರಣೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.
ಕರೊನಾ ಲಸಿಕೆಯನ್ನು ತಾನೇ ಖರೀದಿಸಿ ಎಲ್ಲ ರಾಜ್ಯಗಳಿಗೆ ವಿತರಣೆ ಮಾಡಲಿದೆ. ಕರೊನಾ ಲಸಿಕೆ ವಿಚಾರವಾಗಿ ರಚಿಸಲಾಗಿರುವ ಕಾರ್ಯಪಡೆ ಈ ನಿರ್ಧಾರ ಕೈಗೊಂಡಿದೆ.
ಲಸಿಕೆ ವಿತರಣೆಯಲ್ಲಿ ಗೊಂದಲ ಉಂಟಾಗದಿರಲು ರಾಜ್ಯ ಸರ್ಕಾರಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಲಸಿಕೆ ಸಂಗ್ರಹಕ್ಕೆ ಬೇರಾವ ಮಾರ್ಗಗಳನ್ನು ಕಂಡುಕೊಳ್ಳದಂತೆ ಕೇಂದ್ರ ಆರೋಗ್ಯ ಸಚಿವಾಲಯದ ಮೂಲಕ ಸೂಚಿಸಲಾಗಿದೆ. ರಾಜ್ಯ ನೀತಿ ಆಯೋಗದ ಡಾ. ವಿ.ಕೆ.ಪಾಲ್​ ನೇತೃತ್ವದಲ್ಲಿ ನಡೆದ ಟಾಕ್ಸ್​ಫೋರ್ಸ್​ ಸಭೆಯಲ್ಲಿ ಈ ನಿರ್ದೇಶನಗಳನ್ನು ನೀಡಲಾಗಿದೆ.
ಇದನ್ನೂ ಓದಿ;ಕರೊನಾ ಲಸಿಕೆ ಟೀಕಿಸುವವರಿಗೆ ದಿಟ್ಟ ಉತ್ತರ ನೀಡಿದ ರಷ್ಯಾ; ದಾಖಲೆಗಳನ್ನು ಜಗತ್ತಿನ ಮುಂದಿಡ್ತೀವಿ
ಈ ನಡುವೆ, ಭಾರತದ ಕೊವಾಕ್ಸಿನ್​ ಕ್ಲಿನಿಕಲ್​ ಟ್ರಯಲ್​ನ ಆರಂಭಿತ ಹಂತದ ಫಲಿತಾಂಶಗಳು ಗೊತತ್ಆಗಿದ್ದು, ಮಾನವರ ಬಳಕೆಗೆ ಸುರಕ್ಷಿತ ಎನಿಸಿವೆ. ಮುಂದಿನ ಹಂತದಲ್ಲಿ ಅದರ ಕ್ಷಮತೆ ಬಗ್ಗೆ ಪರೀಕ್ಷೆ ನಡೆಯಬೇಕಿದೆ. ಇದು ಆಶಾದಾಯಕ ಬೆಳವಣಿಗೆ ಎನಿಸಿದೆ.
ಇದಲ್ಲದೇ, ಕ್ಲಿನಿಕಲ್​ ಹಂತದಲ್ಲಿರುವ ಇತರ ಲಸಿಕೆಗಳ ಅಭಿವೃದ್ಧಿ ಹಂತಗಳ ಬಗ್ಗೆಯೂ ಸಮಿತಿ ನಿಗಾ ವಹಿಸಿದೆ. ಲಸಿಕೆಯನ್ನು ಯಾರಿಗೆ ಮೊದಲು ನೀಡಬೇಕು ಎಂಬುದನ್ನು ಈ ಸಮಿತಿಯೇ ನಿರ್ಧರಿಸಲಿದೆ.
ಇದನ್ನೂ ಓದಿ;ವಾರದಲ್ಲಿ ಎರಡು ಸಾವಿರ ಹೆಚ್ಚುವರಿ ವೈದ್ಯರು ಕೊವಿಡ್ ಚಿಕಿತ್ಸೆಗೆ ಲಭ್ಯ; ಸಚಿವ ಸುಧಾಕರ್ ಮಾಹಿತಿ
ಸರ್ಕಾರವೇ ಔಷಧ ಕಂಪನಿಗಳಿಂದ ಲಸಿಕೆಯನ್ನು ಖರೀದಿಸಿ ಸಾರ್ವಜನಿಕರಿಗೆ ನೀಡಲಿದೆ ಎಂದು ಪುಣೆಯ ಸಿಎಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾದ ಮುಖ್ಯಸ್ಥ ಆದಾರ್​ ಪೂನಾವಾಲಾ ಈ ಹಿಂದೆ ಸುಳಿವು ನೀಡಿದ್ದರು.
ಭಾರತೀಯರಿಗೆ ಶುಭಸುದ್ದಿ; ದೇಶೀಯ ಕರೊನಾ ಲಸಿಕೆ ಕೊವಾಕ್ಸಿನ್​ ಮಾನವರ ಬಳಕೆಗೆ ಸುರಕ್ಷಿತ; ಆರಂಭಿಕ ಯಶಸ್ಸು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
