ನವದೆಹಲಿ:ಮುಂದಿನ ಎರಡು ವಾರಗಳಲ್ಲಿ ನಗರ ಮೆಟ್ರೋ ಸಾರಿಗೆ ವ್ಯವಸ್ಥೆಯನ್ನು ಪುನರಾರಂಭಿಸುವ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.ಇದರೊಂದಿಗೆ, ಆರಂಭದಲ್ಲಿ ಹೆಚ್ಚಿನ ಜನರು ಒಟ್ಟುಗೂಡಿಸುವುದನ್ನು ತಪ್ಪಿಸಲು ಸೇವೆಗಳನ್ನು ಸುವ್ಯವಸ್ಥಿತ ರೀತಿಯಲ್ಲಿ ಪುನಾರಂಭಿಸಲು ಕೇಂದ್ರವು ಚಿಂತಿಸುತ್ತಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ರಾಮಮಂದಿರ ಭೂಮಿಪೂಜೆಗಾಗಿ ಬಿಎಸ್‌ವೈ ಮಾಡಿಕೊಂಡರೊಂದು ಮನವಿ…
“ಮುಂದಿನ ಎರಡು ವಾರಗಳಲ್ಲಿ ಮೆಟ್ರೋ (ಸಾರಿಗೆ) ವ್ಯವಸ್ಥೆಗಳನ್ನು ತೆರೆಯಲು ನಾವು ಸಭೆ ನಡೆಸುತ್ತೇವೆ. ನಿರ್ದಿಷ್ಟ ಸುರಕ್ಷತಾ ನಿಯಮಗಳು (ಎಸ್‌ಒಪಿಗಳು) ಜಾರಿಯಲ್ಲಿರುತ್ತವೆ. ನಾವು ವ್ಯವಸ್ಥೆಯನ್ನು ಪುನಾರಂಭಿಸಲು ಸಿದ್ಧರಿದ್ದೇವೆ ಆದರೆ ಸರ್ಕಾರಿ ನೌಕರರು, ಆರೋಗ್ಯ ಕಾರ್ಯಕರ್ತರು ಮತ್ತು ಅಗತ್ಯ ಸೇವೆಗಳ ಕೆಲಸಗಾರರ ವಿಭಾಗದಲ್ಲಿ ಶೇ. 50 ಸಿಬ್ಬಂದಿ ಮಾತ್ರ ಇರುವ ವ್ಯವಸ್ಥೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.ಅಪಾರ ನಷ್ಟ, ರಸ್ತೆಗಳಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಜಾಮ್​ ನಂತಹ ಋಣಾತ್ಮಕ ಪರಿಣಾಮ ತಪ್ಪಿಸಲು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಮೆಟ್ರೊ ವ್ಯವಸ್ಥೆಗಳನ್ನು ಪುನಃ ತೆರೆಯಲು ಚಿಂತನೆ ನಡೆಸುತ್ತಿದೆ.
ಇದನ್ನೂ ಓದಿ:ಬಲಿಪೀಠದಿಂದ ತಪ್ಪಿಸಿಕೊಂಡ ಬೆಕ್ಕು, ಆ ತಪ್ಪಿಗೆ ಮಗುವನ್ನೇ ಬಲಿ ಕೊಡಿ ಎಂದ ಭೂಪ
ಸರ್ಕಾರವು ದೇಶದ ಎಲ್ಲ ಮೆಟ್ರೋ ವ್ಯವಸ್ಥೆಗಳನ್ನು ಏಕಕಾಲದಲ್ಲಿ ತೆರೆಯುವ ನಿರೀಕ್ಷೆಯಿದೆ. ಈ ತಿಂಗಳ ಅಂತ್ಯದಲ್ಲಿ, ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲು ಹೊಸ ಮಾರ್ಗಸೂಚಿಗಳನ್ನು ಅನಾವರಣಗೊಳಿಸುವ ಸಂದರ್ಭದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರ ದೆಹಲಿ ಮೆಟ್ರೋ ಪುನಾರಂಭಿಸಲು ಸಿದ್ಧವಿದ್ದು, ಕೇಂದ್ರವು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ವರದಿಯಾಗಿದೆ.
ಕಾಂಗ್ರೆಸ್​ನವರು ಈಗಲಾದರೂ ನಾಟಕ ನಿಲ್ಲಿಸಿದರಲ್ಲ ಎಂಬುದೇ ಖುಷಿ: ಅಸಾದುದ್ದೀನ್​ ಓವೈಸಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 12 =
Remember me
