ನವದೆಹಲಿ:ಸದ್ಯ ಎಲ್ಲೆಡೆ ಕರೊನಾ ಲಸಿಕೆಯದ್ದೇ ಮಾತುಕತೆ. ಇಷ್ಟನೇ ಟ್ರಯಲ್ ನಡೆಯುತ್ತಿದೆ, ಇನ್ನೇನು ಲಸಿಕೆ ಬಂದು ಬಿಡುತ್ತೆ, ಮೊದಲಿಗೆ ಇಂಥವರಿಗೆ ಕೊಡುತ್ತಾರೆ ಎಂದೆಲ್ಲ ಮಾಹಿತಿಗಳು ಹೊರಬೀಳುತ್ತಲೇ ಇವೆ. ಇದರ ನಡುವೆ ಕೇಂದ್ರ ಆರೋಗ್ಯ ಇಲಾಖೆ ಯಾವುದಕ್ಕೂ ಸಿದ್ಧರಾಗಿರಿ ಎಂಬ ಕಿವಿಮಾತೊಂದನ್ನೂ ಹೇಳಿದೆ.
ನ್ಯಾಷನಲ್​ ಹೆಲ್ತ್ ಮಿಷನ್​ನ ಎಲ್ಲ ನಿರ್ದೇಶಕರಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಇಲಾಖೆ ಇಂಥದ್ದೊಂದು ಸಲಹೆ ನೀಡಿದೆ. ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ಹಿನ್ನೆಲೆಯಲ್ಲಿ ಸಜ್ಜಾಗಿರಬೇಕು ಎಂಬ ಸೂಚನೆಯನ್ನೂ ಇಲಾಖೆ ನೀಡಿದೆ.
ಕೋವಿಡ್-19 ಲಸಿಕೆ ನೀಡುವ ಸಂಬಂಧ ಎಲ್ಲ ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಪ್ರಕ್ರಿಯೆಗಳು ಜಾರಿಯಲ್ಲಿವೆ. ಆರಂಭದಲ್ಲಿ ಕೆಲವೊಂದು ನಿಗದಿತ ಗುಂಪುಗಳಿಗೆ ಲಸಿಕೆ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಲಸಿಕೆಯಿಂದ ಸಂಭವಿಸಬಹುದಾದ ಅಡ್ಡ ಪರಿಣಾಮಗಳನ್ನು ಎದುರಿಸುವ ಸಾಮರ್ಥ್ಯ ವೃದ್ಧಿಸಿಕೊಳ್ಳುವ ಮೂಲಕ ಲಸಿಕೆ ನೀಡುವ ಕುರಿತ ವಿಶ್ವಾಸ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದೆ.
ಲಸಿಕೆ ನೀಡಿದ ನಂತರದ ಅಡ್ಡ ಪರಿಣಾಮ ಎದುರಿಸುವ ಸಮಿತಿಗಳಲ್ಲಿ ನರರೋಗ, ಹೃದ್ರೋಗ ಹಾಗೂ ಮಕ್ಕಳ ರೋಗ ತಜ್ಞರು ಕೂಡ ಇರುವಂತೆ ನೋಡಿಕೊಳ್ಳಬೇಕು. ಏಕೆಂದರೆ ಮಕ್ಕಳು ಹಾಗೂ ವೃದ್ಧರಿಗೂ ಲಸಿಕೆ ನೀಡಬೇಕಾಗುತ್ತದೆ. ಅವರಲ್ಲಿ ಬೇರೆ ಇತರ ರೋಗಗಳೂ ಇರುವುದರಿಂದ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗೆಯೇ ಜಿಲ್ಲಾ ಡ್ರಗ್​ ಇನ್​ಸ್ಪೆಕ್ಟರ್ ಕೂಡ ಸಮಿತಿಯಲ್ಲಿ ಇರಬೇಕು ಎಂದು ಇಲಾಖೆ ತಿಳಿಸಿದೆ.
ಲಸಿಕೆ ನೀಡುವುದು ಶುರುವಾಗುತ್ತಿದ್ದಂತೆ ಲಸಿಕೆ ನಂತರದ ಅಡ್ಡಪರಿಣಾಮಗಳೂ ಹೆಚ್ಚಾಗಿ ಸೂಕ್ಷ್ಮ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುವುದರಿಂದ ಅದನ್ನು ನಿಭಾಯಿಸುವಂಥ ತಜ್ಞರನ್ನು ವ್ಯವಸ್ಥೆ ಮಾಡಿಕೊಂಡಿರಬೇಕು. ಅಲ್ಲದೆ ಲಸಿಕೆ ನೀಡಿದ ಬಳಿಕ ಉಂಟಾಗಬಹುದಾದ ಎಲ್ಲ ಸಮಸ್ಯೆ ಹಾಗೂ ವದಂತಿಗಳನ್ನು ಎದುರಿಸಲೂ ಸಜ್ಜಾಗಿರಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ. (ಏಜೆನ್ಸೀಸ್​)
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ?: ರಾಜ್ಯಾಧ್ಯಕ್ಷ ನಳಿನ್​ ಏನೆಂದರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − six =
Remember me
