ನವದೆಹಲಿ: ಆಡಂಬರದಿಂದ ಹಬ್ಬ ಮಾಡಿ ಎಂದು ಯಾವ ಧರ್ಮ-ದೇವರೂ ಹೇಳಲ್ಲ ಎಂಬುದಾಗಿ ಕೇಂದ್ರ ಸಚಿವ ಡಾ.ಹರ್ಷವರ್ಧನ್​ ಸಾರ್ವಜನಿಕರಿಗೆ ಕಿವಿಮಾತು ಹೇಳಿದ್ದಾರೆ. ದಸರಾ-ದೀಪಾವಳಿ ಹತ್ತಿರ ಬಂದರೂ ಕರೊನಾ ಹಾವಳಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಅವರು ಈ ಸಲಹೆ ನೀಡಿದ್ದಾರೆ.
‘ಸಂಡೇ ಸಂವಾದ್’​ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಹಬ್ಬದ ಆಚರಣೆ ಹತ್ತಿರ ಬಂದಿದೆ. ಹೀಗಾಗಿ ಸಾರ್ವಜನಿಕರು ಜನಜಂಗುಳಿಯಿಂದ ದೂರವಿರುವ ಜತೆಗೆ ಕೋವಿಡ್​ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಸಾರ್ವಜನಿಕರು ಹೊರಗಿನ ಪೆಂಡಾಲ್​-ಉತ್ಸವಗಳ ಬದಲು ತಂತಮ್ಮ ಮನೆಯಲ್ಲಿ, ಮನೆಯವರು ಹಾಗೂ ಪ್ರೀತಿ-ಪಾತ್ರರೊಂದಿಗಷ್ಟೇ ಹಬ್ಬ ಆಚರಿಸಿ. ಮಂದಿರ-ಮಸೀದಿಗೇ ಹೋಗಿ ಪ್ರಾರ್ಥಿಸಬೇಕು, ಆಡಂಬರದಿಂದಲೇ ಹಬ್ಬ ಆಚರಿಸಬೇಕು ಎಂದು ಯಾವ ಧರ್ಮ-ದೇವರೂ ಹೇಳಲ್ಲ ಎಂಬುದಾಗಿ ಅವರು ಹೇಳಿದ್ದಾರೆ.
‘ನಿಮ್ಮ ಗುರಿ ಮೇಲೆ ಗಮನವಿಡಿ’ ಎಂದು ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ್ದಾನೆ. ಈಗ ನನ್ನ ಗುರಿ, ನಿಮ್ಮ ಗುರಿ ಎರಡೂ ಒಂದೇ. ಕೋವಿಡ್​ ಸೋಂಕನ್ನು ಇಲ್ಲವಾಗಿಸುವುದು ಈಗ ನಮ್ಮ ಗುರಿ, ಇದೇ ನಮ್ಮ ಧರ್ಮ ಎಂಬುದಾಗಿ ಸಚಿವರು ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
