ದೆಹಲಿ:ಒಡಿಶಾದ ಬಾಲಸೋರ್​​ನಲ್ಲಿ ನಡೆದ ರೈಲು ಅಪಘಾತದಲ್ಲಿ 288 ಜನರು ಮೃತಪಟ್ಟು, ಸಾವಿರಾರು ಜನರು ಗಾಯಗೊಂಡಿದ್ದರು. ಈ ಬೆನ್ನಲ್ಲೇ ಕೇಂದ್ರ ರೈಲ್ವೆ ಬೋರ್ಡ್ ಎಚ್ಚೆತ್ತುಕೊಂಡಿದೆ. ದೆಹಲಿಯ ರೈಲ್ವೆ ಛೇರ್ಮನ್ ದೇಶದ ಹದಿನಾರು ರೈಲ್ವೆ ವಿಭಾಗೀಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಪ್ರಮುಖ ಮಾರ್ಗಸೂಚಿಗಳನ್ನು ನೀಡಿದ್ದಾರೆ.
ಇದನ್ನೂ ಓದಿ:ವರ್ಗೀಕೃತ ದಾಖಲೆಗಳ ಪ್ರಕರಣ: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಬಿಗ್​ ಶಾಕ್​
ವರ್ಚುವಲ್ ಸಭೆ ನಡೆಸಿದ್ದ ರೈಲ್ವೆ ಬೋರ್ಡ್ ಚೇರ್ಮನ್, ರೈಲ್ವೆ ಇಲಾಖೆಯಲ್ಲಿನ ಕೆಲ ಲೋಪಗಳ ಬಗ್ಗೆ ಅಧಿಕಾರಿಗಳ ಜೊತೆ ಆತ್ಮಾವಲೋಕನ ಮಾಡಿ ಹಲವಾರು ಮಾರ್ಗಸೂಚಿಗಳನ್ನು ನೀಡಿದ್ದಾರೆ. ಒಂದು ವಿಭಾಗಕ್ಕೆ ಒಬ್ಬ ಜನರಲ್‌ ಮ್ಯಾನೇಜರ್ ಇರಲಿದ್ದು, ಈತನ ಜೊತೆ ಡಿವಿಷನ್ ಮ್ಯಾನೇಜರ್ ಕಾರ್ಯ ನಿರ್ವಹಿಸಬೇಕು ಎಂದಿದ್ದಾರೆ. ಕರ್ನಾಟದಲ್ಲಿ ಮೂರು ಡಿವಿಷನ್​ಗಳಿದ್ದು, ಮೈಸೂರು, ಬೆಂಗಳೂರು ಮತ್ತು ಹುಬ್ಬಳ್ಳಿಯ ಡಿವಿಷನ್​ನ ರೈಲ್ವೆ ಜನರಲ್ ಮ್ಯಾನೇಜರ್​ಗಳು ಸಹ ಸಭೆಯಲ್ಲಿ ಭಾಗಿಯಾಗಿದ್ದರು. ಮೂರು ವಿಭಾಗದ ಜನರಲ್ ಮ್ಯಾನೇಜರ್​ಗಳಿಗೆ ಟಾಸ್ಕ್ ನೀಡಲಾಗಿದೆ.
ಮತ್ತೊಂದೆಡೆ ರೈಲ್ವೆ ಪೊಲೀಸ್ ಹಾಗೂ ಆರ್​ಪಿಎಫ್ ಸಹ ಅಲರ್ಟ್ ಆಗಿದ್ದು, ರೈಲ್ವೆ ಎಡಿಜಿಪಿ ಅಲೋಕ್ ಕುಮಾರ್​​​ರಿಂದಲೂ ಇಲಾಖೆಯ ಸಿಬ್ಬಂದಿ ಕಾರ್ಯ ನಿರ್ವಹಣೆ ಬಗ್ಗೆ ಟಾಸ್ಕ್ ನೀಡಲಾಗಿದೆ. ಇಡೀ ರಾಜ್ಯದಲ್ಲಿನ ರೈಲ್ವೆ ಹಳಿಗಳ ವ್ಯವಸ್ಥೆ, ಸಿಗ್ನಲ್ ಡಿಪಾರ್ಟ್ಮೆಂಟ್ ಕಾರ್ಯದ ಬಗ್ಗೆ ಎಚ್ಚರವಿರಲು ಸಂದೇಶವನ್ನು ನೀಡಲಾಗಿದೆ.ರಾಜ್ಯ ರೈಲ್ವೆ ಅಧಿಕಾರಿಗಳಿಗೆ ಕೊಟ್ಟ ಸಂದೇಶಗಳು:ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ಸದಾ ಫೀಲ್ಡ್​​ನಲ್ಲಿರಬೇಕು. ಯಾವುದೇ ಸಣ್ಣ ಪುಟ್ಟ ಘಟನೆ ನಡೆದರೂ ಗ್ರೌಂಡ್ ಮಟ್ಟದ ತನಿಖೆಯಾಗಬೇಕು. ವಾರಕ್ಕೊಮ್ಮೆ ಎರಡು ಬಾರಿ ರೈಲ್ವೆ ಜೋನ್​ನಲ್ಲಿ ಅನಿರೀಕ್ಷಿತವಾಗಿ ಭೇಟಿ ನೀಡಿ ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು. ಅಧಿಕಾರಿಗಳು ರಾತ್ರಿ ವೇಳೆಯಲ್ಲಿ ಧಿಡೀರ್ ಪರಿಶೀಲನೆ ಮಾಡುವುದರ ಜತೆಗೆ ಟ್ರೈನ್​ನಲ್ಲೇ ಸಂಚರಿಸಿ ರೈಲ್ವೆ ಮಾಸ್ಟರ್, ಗೇಟ್​​ಗಳ ಸಿಬ್ಬಂದಿ ಕೆಲಸದ ಬಗ್ಗೆ ನಿಗಾವಹಿಸಲು ಸೂಚನೆ ನೀಡಲಾಗಿದೆ.
ಎರಡು ಸಿಗ್ನಲ್​ಗಳಲ್ಲಿ ರೈಲು ಚಲಿಸುವಾಗ ಹಸಿರು ಲೈಟ್​ನ್ನು ಕಡ್ಡಾಯವಾಗಿ ಚಾಲೂ ಮಾಡಿರಬೇಕು. ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಕೂಡಲೇ ಬಗೆಹರಿಸಬೇಕು. ಸಿಗ್ನಲಿಂಗ್ ಡಿಪಾರ್ಟ್ಮೆಂಟ್ ಪೂರ್ತಿ ಎಚ್ಚರದಿಂದ ಇದ್ದು ಕೆಲಸ ಮಾಡಬೇಕು. ಇಂಜಿನಿಯರಿಂಗ್ ಮತ್ತು ಟ್ರೈನ್​ಲೈಟ್ ಅಧಿಕಾರಿಯು ಸಿಬ್ಬಂದಿಗೆ ಅವರ ಕಾರ್ಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಬೇಕು ಎಂದು ಸೂಚಿಸಲಾಗಿದೆ.(ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 7 =
Remember me
