ನವದೆಹಲಿ:ದೇಶದಲ್ಲಿ ಕರೊನಾ ನಿಗ್ರಹ ಲಸಿಕೆ ಸಂಶೋಧನೆ ಕಾರ್ಯ ಭರದಿಂದ ಸಾಗಿದೆ. ಮೊದಲ ದೇಶೀಯ ಲಸಿಕೆ ಕೊವಾಕ್ಸಿನ್​ ಕ್ಲಿನಿಕಲ್​ ಟ್ರಯಲ್​ ದೇಶದ 12 ಸ್ಥಳಗಳಲ್ಲಿ ನಡೆಯುತ್ತಿದೆ. ಇದರ ನಡುವೆಯೇ ಲಸಿಕೆಗಳ ಅಭಿವೃದ್ಧಿ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಹಾಗೂ ಲಸಿಕೆಯ ವಿತರಣಾ ಕಾರ್ಯದ ಉಸ್ತುವಾರಿಗೆ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದೆ.
ಕೇಂದ್ರ ಸರ್ಕಾರದ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಟಾಸ್ಕ್​ಪೋರ್ಸ್​ ರಚನೆಯಾಗಿದೆ. ದೆಹಲಿ ಏಮ್ಸ್​ ನಿರ್ದೇಶಕ ಡಾ. ರಣದೀಪ್​ ಗುಲೇರಿಯಾ, ಐಟಿ-ಬಿಟಿ, ವಿದೇಶಾಂಗ ಇಲಾಖೆ ಹಿರಿಯ ಅಧಿಕಾರಿಗಳು, ಆರೋಗ್ಯ ಸೇವೆಗಳ ಮಹಾನಿರ್ದೇಶಕರು, ಐಸಿಎಂಆರ್​ ಹಾಗೂ ವಿವಿಧ ರಾಜ್ಯಗಳ ಪ್ರತಿನಿಧಿಗಳು ಇದ್ದಾರೆ.
ಇದನ್ನೂ ಓದಿ;ನೂರಾರು ಕೋಟಿ ಜನರಿಗೆ ಕೈ ತೊಳೆಯೋಕೆ ನೀರಿಲ್ಲ; ಕೋವಿಡ್​ ತಡೆಯೋದು ಹೇಗೆ?
ನೀತಿ ಆಯೋಗದ ಡಾ. ವಿ.ಕೆ. ಪಾಲ್​, ಕೇಂದ್ರ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಶ್​ ಭೂಷಣ್​ ಇದರ ಉಸ್ತುವಾರಿ ನೊಡಿಕೊಳ್ಳಲಿದ್ದಾರೆ.
ಹೈದರಾಬಾದ್​ನ ಭಾರತ್ ಬಯೋಟೆಕ್​ ಇಂಟರ್​ನ್ಯಾಷನಲ್​ ಸಂಸ್ಥೆಯ ಕೊವಾಕ್ಸಿನ್​ ಲಸಿಕೆಯನ್ನು ಮೊದಲ ಹಂತದಲ್ಲಿ ಮಾವರ ಮೇಲೆ ಪ್ರಯೋಗಿಸಲಾಗುತ್ತಿದೆ. ಇದಕ್ಕಾಗಿ 375 ಜನರಿಗೆ ಲಸಿಕೆ ನೀಡಲಾಗಿದೆ. ಇದಲ್ಲದೇ, ಝೈಡಸ್​ ಕ್ಯಾಡಿಲ್ಲಾ ಕಂಪನಿಯ ಲಸಿಕೆ ಕೂಡ ಕರೊನಾ ಲಸಿಕೆಯ ಕ್ಲಿನಿಕಲ್​ ಟ್ರಯಲ್​ಗೆ ಅನುಮತಿ ಪಡೆದಿದೆ. ಇದಲ್ಲದೇ, ಇನ್ನೂ 6-7 ಲಸಿಕೆಗಳು ಈ ಹಂತಕ್ಕೆ ಬಂದಿವೆ.
ಇದನ್ನೂ ಓದಿ;ತರಕಾರಿ, ದಿನಸಿ ವ್ಯಾಪಾರಿಗಳು, ಅಂಗಡಿ ಕೆಲಸಗಾರರನ್ನು ಕರೊನಾ ಪರೀಕ್ಷೆಗೊಳಪಡಿಸಿ; ಕೇಂದ್ರದಿಂದಲೇ ಬಂತು ಸೂಚನೆ
ಈ ಲಸಿಕೆಗಳ ಕ್ಷಮತೆ, ಸಾರ್ವಜನಿಕರಿಗೆ ಶೀಘ್ರ ಲಭ್ಯತೆ, ಅವುಗಳ ಖರೀದಿ, ವಿತರಣೆ ಮೊದಲಾದ ವಿಷಯಗಳ ಬಗ್ಗೆ ಈ ಟಾಸ್ಕ್​ಫೋರ್ಸ್​ ಕಾರ್ಯನಿರ್ವಹಿಸಲಿದೆ. ಜತೆಗೆ, ಭರವಸೆ ಮೂಡಿಸಿರುವ ಲಸಿಕೆಗಳ ಅಭಿವೃದ್ಧಿ ಹಾಗೂ ಕ್ಲಿನಿಕಲ್​ ಟ್ರಯಲ್​ ಹಂತದಲ್ಲೂ ಅಗತ್ಯ ನೆರವನ್ನೂ ಇದು ಕಂಪನಿಗೆ ನೀಡಲಿದೆ.
ಸೆ.1ರಿಂದ ಶಾಲಾ- ಕಾಲೇಜು ಆರಂಭ ಪ್ರಕ್ರಿಯೆ; ಅರ್ಧದಷ್ಟು ಮಕ್ಕಳು, ಶಿಕ್ಷಕರಿಗಷ್ಟೇ ಅವಕಾಶ; ಹೀಗಿರಲಿದೆ ಮಾರ್ಗಸೂಚಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − seven =
Remember me
