ನವದೆಹಲಿ :ಹೆಚ್ಚು ಸಂಖ್ಯೆಯಲ್ಲಿ ಕರೊನಾ ಪ್ರಕರಣಗಳನ್ನು ದಾಖಲಿಸುತ್ತಿರುವ ಆರು ರಾಜ್ಯಗಳಿಗೆ, ಕರೊನಾ ನಿಯಂತ್ರಣ ಕ್ರಮಗಳಲ್ಲಿ ಸಹಾಯ ಮಾಡುವುದಕ್ಕಾಗಿ, ಕೇಂದ್ರ ಸರ್ಕಾರವು ಉನ್ನತ ಮಟ್ಟದ ತಂಡಗಳನ್ನು ಕಳುಹಿಸಿದೆ. ಕೇರಳ, ಅರುಣಾಚಲ ಪ್ರದೇಶ, ತ್ರಿಪುರ, ಒಡಿಶಾ, ಛತ್ತೀಸಗಡ ಮತ್ತು ಮಣಿಪುರ ರಾಜ್ಯಗಳಿಗೆ ಈ ತಂಡಗಳನ್ನು ಕಳುಹಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ತಿಳಿಸಿದೆ.
ಈ ತಂಡಗಳು ತಲಾ ಒಬ್ಬ ವೈದ್ಯ ಮತ್ತು ಒಬ್ಬ ಸಾರ್ವಜನಿಕ ಆರೋಗ್ಯ ತಜ್ಞರನ್ನು ಒಳಗೊಂಡಿರುತ್ತವೆ. ಆಯಾ ರಾಜ್ಯಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳ ಬಗ್ಗೆ ಹತ್ತಿರದಿಂದ ಅಧ್ಯಯನ ಮಾಡಿ, ಅಡಚಣೆಗಳನ್ನು ನಿವಾರಿಸುವಲ್ಲಿ ರಾಜ್ಯ ಸರ್ಕಾರಗಳ ಪ್ರಯತ್ನವನ್ನು ಬಲಪಡಿಸಲಿವೆ ಎನ್ನಲಾಗಿದೆ.
ಇದನ್ನೂ ಓದಿ:ರಸ್ತೆಯಲ್ಲೇ ಮಹಿಳೆಯ ಮೇಲೆರಗಿದ ಯುವಕ: ಸಿಸಿಟಿವಿಯಲ್ಲಿ ಕಾಮಾಂಧನ ಅಸಹ್ಯ ವರ್ತನೆ ಸೆರೆ!
“ಈ ತಂಡಗಳು ಕೂಡಲೇ ರಾಜ್ಯಗಳಿಗೆ ಭೇಟಿ ನೀಡಿ, ಕೋವಿಡ್​ ನಿರ್ವಹಣೆಯ ಒಟ್ಟಾರೆ ಅನುಷ್ಠಾನವನ್ನು ಪರಿವೀಕ್ಷಣೆ ಮಾಡಲಿವೆ. ವಿಶೇಷವಾಗಿ ಟೆಸ್ಟಿಂಗ್​, ಸರ್ವೇಲೆನ್ಸ್ ಮತ್ತು ಕಂಟೈನ್​ಮೆಂಟ್​ ಆಪ್​ರೇಷನ್​ಗಳು, ಕೋವಿಡ್ ಮುನ್ನೆಚ್ಚರಿಕಾ ನಡವಳಿಕೆ ಮತ್ತು ಅದರ ಜಾರಿ ಬಗ್ಗೆ ಗಮನ ಹರಿಸಲಿವೆ. ಜೊತೆಗೆ, ಆಸ್ಪತ್ರೆ ಬೆಡ್​ಗಳು, ಆಂಬುಲೆನ್ಸ್​, ವೆಂಟಿಲೇಟರ್ಸ್, ಮೆಡಿಕಲ್ ಆಕ್ಸಿಜನ್ ಮುಂತಾದ ಸೌಕರ್ಯಗಳ ಲಭ್ಯತೆ ಹಾಗೂ ಕರೊನಾ ಲಸಿಕಾ ಅಭಿಯಾನದ ಪ್ರಗತಿಯನ್ನು ಮೇಲ್ವಿಚಾರಣೆ ನಡೆಸಿ, ಸೂಕ್ತ ಸಲಹೆಗಳನ್ನು ನೀಡುತ್ತವೆ” ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.(ಏಜೆನ್ಸೀಸ್)
ಜೈಕೋವಿ-ಡಿ : ಮತ್ತೊಂದು ಕರೊನಾ ಲಸಿಕೆಯ ತುರ್ತು ಬಳಕೆಗೆ ಅರ್ಜಿ

ಬೆಂಗಳೂರಲ್ಲಿ ಕೇಳಿಬಂತು ಜೋರು ಶಬ್ದ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:3 × four =
Remember me
