ನವದೆಹಲಿ :ಕರೊನಾ ಸಾಂಕ್ರಾಮಿಕದ ನಡುವೆ ದೆಹಲಿಯ ಸೆಂಟ್ರಲ್​ ವಿಸ್ತಾ ಯೋಜನೆಗಾಗಿ 20 ಸಾವಿರ ಕೋಟಿ ರೂಪಾಯಿ ವ್ಯಯ ಮಾಡುವುದು ಎಷ್ಟು ಸಮಂಜಸ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ. ಅದೇ ಹಣದಲ್ಲಿ 62 ಕೋಟಿ ಕರೊನಾ ಲಸಿಕೆಯ ಡೋಸ್​ಗಳನ್ನು ಸರ್ಕಾರ ಖರೀದಿಸಬಹುದು ಅಥವಾ ವೈದ್ಯಕೀಯ ಮೂಲಸೌಕರ್ಯಗಳನ್ನು ಉತ್ತಮಗೊಳಿಸಬಹುದು ಎಂದಿದ್ದಾರೆ.
ಕಾಂಗ್ರೆಸ್​ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆದ ಅವರು, ಈ ಬಗ್ಗೆ ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು. ಕರೊನಾ ಸಾಂಕ್ರಾಮಿಕವನ್ನು ಕೇಂದ್ರ ಸರ್ಕಾರ ನಿಭಾಯಿಸುತ್ತಿರುವ ರೀತಿಯ ಬಗ್ಗೆ ಕೂಡ ಟೀಕೆ ಮಾಡಿದ ಪ್ರಿಯಾಂಕಾ ಗಾಂಧಿ, ಅಷ್ಟೊಂದು ಹಣವನ್ನು ಆಸ್ಪತ್ರೆಯ ಬೆಡ್​ಗಳು ಮತ್ತು ವೈದ್ಯಕೀಯ ಉಪಕರಣಗಳಿಗಾಗಿ ಬಳಸಬಹುದಾಗಿರುವಾಗ ಸೆಂಟ್ರಲ್ ವಿಸ್ತಾ ಯೋಜನೆಯನ್ನು ಕೇಂದ್ರ ಸರ್ಕಾರ ಮುಂದುವರಿಸುತ್ತಿರುವುದು ಖಂಡನೀಯ ಎಂದರು.
PM’s new residence & Central vista cost= Rs 20,000 cr= 62 crore vaccine doses= 22 crore Remdesvir vials= 3 crore 10 litre oxygen cylinders= 13 AIIMS with a total of 12,000 beds
WHY?
— Priyanka Gandhi Vadra (@priyankagandhi)May 10, 2021

ಸಭೆಯ ನಂತರದಲ್ಲಿ ಗಾಂಧಿ ಅವರು, “ಪ್ರಧಾನಿಯ ಹೊಸ ನಿವಾಸ ಮತ್ತು ಸೆಂಟ್ರಲ್ ವಿಸ್ತಾ ವೆಚ್ಚ = 20,000 ಕೋಟಿ ರೂ. = 62 ಕೋಟಿ ಲಸಿಕೆ ಡೋಸ್​ಗಳು = 22 ಕೋಟಿ ರೆಮ್​ಡೆಸಿವಿರ್​ ವಯಲ್​​ಗಳು = 3 ಕೋಟಿ 10 ಲೀಟರ್​ ಆಕ್ಸಿಜನ್ ಸಿಲಿಂಡರ್​​ಗಳು = 12,000 ಬೆಡ್​​ಗಳುಳ್ಳ 13 ಏಮ್ಸ್​ ಆಸ್ಪತ್ರೆಗಳು. ಯಾಕೆ ?” ಎಂದು ಟ್ವೀಟ್​ ಮಾಡಿದ್ದಾರೆ.(ಏಜೆನ್ಸೀಸ್)
ನೋಂದಣಿ ಕಾರ್ಯ ಸ್ಥಗಿತ : ಮೇ 23 ರವರೆಗೆ ಸಬ್ ರಿಜಿಸ್ಟ್ರಾರ್ ಕಚೇರಿ ಬಂದ್​

ಕರೊನಾಘಾತ : ಗಂಗಾನದಿಯಲ್ಲಿ ಹರಿದುಬಂದವು 40ಕ್ಕೂ ಹೆಚ್ಚು ಹೆಣಗಳು !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + eighteen =
Remember me
