ನವದೆಹಲಿ:ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ವಿಜಯ ಚೌಕದಿಂದ ಇಂಡಿಯಾ ಗೇಟ್ ವರೆಗಿನ ಸೆಂಟ್ರಲ್ ವಿಸ್ಟಾ ಮರುಅಭಿವೃದ್ಧಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ (ಸೆಪ್ಟೆಂಬರ್ 8) ಉದ್ಘಾಟಿಸಲಿದ್ದಾರೆ. ಉದ್ಘಾಟನೆಗೆ ಸಿದ್ಧವಾಗಿರುವ ಯೋಜನೆಯ ಹಲವು ಚಿತ್ರಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.
ರಾಜಪಥದುದ್ದಕ್ಕೂ 3.90 ಲಕ್ಷ ಚದರ ಮೀಟರ್ ಪ್ರದೇಶವನ್ನು ಕಣ್ಣು ಹಾಯಿಸಿದಲ್ಲೆಲ್ಲ ಹಸಿರಿನಿಂದ ಕಂಗೊಳಿಸುವಂತೆ ಅಭಿವೃದ್ಧಿಪಡಿಸಲಾಗಿದೆ. 15.5 ಕಿಲೋ ಮೀಟರ್​ನಷ್ಟು ಉದ್ದದ ಕಾಲು ಹಾದಿಗೆ ಹೊಸ ಕೆಂಪು ಗ್ರಾನೈಟ್ ಹಾಸಲಾಗಿದೆ. ಈ ಹಿಂದೆ ಕಾಲು ದಾರಿಯನ್ನು ಬಜ್ರಿ ಮರಳಿನಿಂದ ನಿರ್ವಿುಸಲಾಗಿತ್ತು. ವಿಜಯ ಚೌಕದಿಂದ ಇಂಡಿಯಾ ಗೇಟ್​ವರೆಗಿನ ಇಡೀ ವಿಸ್ತಾರದಲ್ಲಿ 1,125 ವಾಹನಗಳ ರ್ಪಾಂಗ್​ಗೆ ಅವಕಾಶ ಕಲ್ಪಿಸಲಾಗಿದೆ.
ಮರುಸ್ಥಾಪನೆ:74 ಐತಿಹಾಸಿಕ ದೀಪ ಕಂಬಗಳು ಹಾಗೂ ಸರಪಣಿ ಕೊಂಡಿಗಳನ್ನು ಮರುಸ್ಥಾಪಿಸಲಾಗಿದೆ. 900 ಕ್ಕೂ ಹೆಚ್ಚು ಹೊಸ ದೀಪ ಸ್ತಂಭಗಳನ್ನು ಸ್ಥಾಪಿಸಲಾಗಿದೆ. ಪ್ರದೇಶದ ಸೌಂದರ್ಯ ಕಾಪಾಡುವ ಸಲುವಾಗಿ ಹಿಂದಿನ ಕಾಂಕ್ರೀಟ್ ತಡೆಬೇಲಿ ಬದಲಿಗೆ 1,000ಕ್ಕೂ ಹೆಚ್ಚು ಶ್ವೇತ ಮರಳುಗಲ್ಲಿನ ತಡೆಬೇಲಿಗಳನ್ನು ಹಾಕಲಾಗಿದೆ.
13,450 ಕೋಟಿ ರೂಪಾಯಿ:ಸೆಂಟ್ರಲ್ ವಿಸ್ಟಾ ಮರುಅಭಿವೃದ್ಧಿ ಯೋಜನೆಯ ಅಂದಾಜು ವೆಚ್ಚ.
4 ವರ್ಷ:ಯೋಜನೆ ಪೂರ್ಣ ಗೊಳ್ಳಬೇಕಾದ ಅವಧಿ. ಇದುವರೆಗೆ 1,339 ಕೋಟಿ ರೂ.ಗಳ ಗುತ್ತಿಗೆಯನ್ನಷ್ಟೇ ನೀಡಲಾಗಿದೆ. 2020 ಡಿಸೆಂಬರ್ 10ರಂದು ಹೊಸ ಸಂಸತ್ ಭವನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸುವುದರೊಂದಿಗೆ ಯೋಜನೆಗೆ ಚಾಲನೆ.
ರಾಜಪಥ ಇನ್ನು ‘ಕರ್ತವ್ಯ ಪಥ’:ರಾಷ್ಟ್ರ ರಾಜಧಾನಿಯ ಪ್ರಖ್ಯಾತ ‘ರಾಜ ಪಥ’ ಹೆಸರನ್ನು ‘ಕರ್ತವ್ಯ ಪಥ’ ಎಂದು ಬದಲಾಯಿಸಲಾಗಿದೆ. ವಸಾಹತುಶಾಹಿ ಯುಗದ ಸಂಕೇತಗಳ ನೆನಪುಗಳನ್ನು ಅಳಿಸಿಹಾಕುವ ಯೋಜನೆಯ ಭಾಗವಾಗಿ ಹೀಗೆ ಮಾಡಲಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಿಂದ ರಾಷ್ಟ್ರಪತಿ ಭವನ ವರೆಗಿನ ಇಡೀ ಪ್ರದೇಶ ಕರ್ತವ್ಯ ಪಥ ಆಗಲಿದೆ. ಪ್ರಧಾನಿ ನಿವಾಸವಿದ್ದ ರೇಸ್ ಕೋರ್ಸ್ ರಸ್ತೆ ಹೆಸರನ್ನು ಲೋಕ ಕಲ್ಯಾಣ ಮಾರ್ಗ್ ಎಂದು ಬದಲಾಯಿಸಲಾಗಿದೆ.
ಏನೇನು ಅಭಿವೃದ್ಧಿ?:ದೇಶದ ಅಧಿಕಾರ ಕೇಂದ್ರ ಸ್ಥಾನವಾದ ಸೆಂಟ್ರಲ್ ವಿಸ್ಟಾದ ಮರು ಅಭಿವೃದ್ಧಿ ಯೋಜನೆಯಲ್ಲಿ ನೂತನ ತ್ರಿಕೋನ ಸಂಸತ್ ಕಟ್ಟಡ, ಕೇಂದ್ರ ಸರ್ಕಾರಿ ಕಚೇರಿಗಳ ಕಾರ್ಯಾಲಯ, 3 ಕಿ. ಮೀ. ಉದ್ದದ ರಾಜ ಪಥದ ಪುನರುಜ್ಜೀವನ, ಪ್ರಧಾನಿಯವರ ಹೊಸ ನಿವಾಸ ಮತ್ತು ಕಚೇರಿ ಹಾಗೂ ಉಪ ರಾಷ್ಟ್ರಪತಿಯವರ ಹೊಸ ಸಂಕೀರ್ಣದ ನಿರ್ಮಾಣ ಒಳಗೊಂಡಿದೆ.
ನಿದ್ರೆ ಬರುತ್ತಿಲ್ಲ ಎಂದು ಬೇಸತ್ತು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
