ನವದೆಹಲಿ:ಕರೊನಾ ತಡೆಗಟ್ಟಲು ಕಳೆದ ಒಂದು ತಿಂಗಳಿಂದ ಹೇರಲಾಗಿರುವ ಲಾಕ್​ಡೌನ್​ನಿಂದ ಜನ-ಜೀವನ ಸ್ತಬ್ಧವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತೆ ಕೆಲ ವಿನಾಯಿತಿಗಳನ್ನು ನೀಡುವ ಮೂಲಕ ರಿಲೀಫ್​ ನೀಡಿದೆ. ಮಾಲ್​ ಹಾಗೂ ಥಿಯೇಟರ್​ಗಳನ್ನು ಹೊರತುಪಡಿಸಿ ಅಂಗಡಿ-ಮುಂಗಟ್ಟುಗಳನ್ನು ಕೆಲ ನಿರ್ಬಂಧಗಳೊಂದಿಗೆ ತೆರೆಯಲು ಸರ್ಕಾರದ ಅನುಮತಿಯನ್ನು ನೀಡಿದೆ.
ಶುಕ್ರವಾರ ರಾತ್ರಿ ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಆದೇಶದ ಪ್ರಕಾರ ಮಾಸ್ಕ್​, ಗ್ಲೋವ್ಸ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದ್ದು, ಇದನ್ನು ಅನುಸರಿಸುವುದರೊಂದಿಗೆ ಅಂಗಡಿಗಳನ್ನು ತೆರೆಯಬಹುದಾಗಿದೆ. ಈ ಮೂಲಕ ಕೇಂದ್ರ ಸರ್ಕಾರ ಅಂಗಡಿಯವರಿಗೂ ಹಾಗೂ ಖರೀದಿದಾರರಿಗೂ ಬಿಗ್​ ರಿಲೀಫ್​ ನೀಡಿದೆ.
ಆದೇಶದ ಪ್ರತಿಯೊಂದಿಗೆ ಟ್ವೀಟ್​ ಮಾಡಿರುವ ಗೃಹ ಸಚಿವಾಲಯದ ವಕ್ತಾರ, ಆಯಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಅಂಗಡಿಗಳು ಮತ್ತು ಸ್ಥಾಪನೆ ಕಾಯ್ದೆಯಡಿ ನೋಂದಾಯಿತ ಅಂಗಡಿಗಳಿಗೆ ಲಾಕ್​ಡೌನ್​ ರಿಯಾಯಿತಿ ಅನ್ವಯವಾಗಲಿದೆ. ವಸತಿ ಸಂಕೀರ್ಣದಲ್ಲಿರುವ ಅಂಗಡಿಗಳು, ನೆರೆಹೊರೆ ಮತ್ತು ಸ್ವತಂತ್ರ ಅಂಗಡಿಗಳು ಇಂದಿನಿಂದ ಬಾಗಿಲು ತೆರೆಯಬಹುದಾಗಿದೆ. ಆದರೆ, ನಿರ್ಬಂಧಗಳು ಅನ್ವಯವಾಗಲಿದೆ ಎಂದು ಕಟ್ಟುನಿಟ್ಟಾಗಿ ತಿಳಿಸಿದೆ.
ಮುನ್ಸಿಪಾಲ್​ ಕಾರ್ಪೊರೇಶನ್​ ಮತ್ತು ಮುನ್ಸಿಪಾಲಿಟಿ ಸಮೀಪ ಇರುವ ಮಾರುಕಟ್ಟೆ ಸಂಕೀರ್ಣಗಳು ಕೂಡ ಕಾರ್ಯ ನಿರ್ವಹಿಸಬಹುದಾಗಿದೆ. ಆದರೆ, ಶೇ 50 ರಷ್ಟು ಕಾರ್ಮಿಕರು ಮಾತ್ರ ಕೆಲಸ ಮಾಡಬೇಕು. ಅದರಲ್ಲೂ ಮಾಸ್​​ ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದಿದ್ದಾರೆ. ಇನ್ನು ಲಾಕ್​ಡೌನ್​ ಹಾಟ್​ಸ್ಪಾಟ್​ ಮತ್ತು ಕಂಟೈನ್​ಮೆಂಟ್​ ಝೋನ್​ಗಳಲ್ಲಿ ಅನ್ವಯವಾಗುವುದಿಲ್ಲ ಎಂದು ಗೃಹ ಸಚಿವಾಲಯ ತಿಳಿಸಿದೆ.
ದೇಶಾದ್ಯಂತ 23 ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಕರೊನಾ ವೈರಸ್​ ಸೋಂಕು ಕಾಣಿಸಿಕೊಂಡಿದ್ದು, 700ಕ್ಕೂ ಹೆಚ್ಚು ಮಂದಿ ಈವರೆಗೂ ಪ್ರಾಣವನ್ನು ಕಳೆದುಕೊಂಡಿದ್ದಾರೆ.(ಏಜೆನ್ಸೀಸ್​)
#COVID19updateAll registered shops regd under Shops & Establishment Act of respective States/ UTs, including shops in residential complexes, neighborhood & standalone shops exempted from#lockdownrestrictions.
Prohibited: Shops in single & multi brand mallspic.twitter.com/NNz9abgWdA
— Spokesperson, Ministry of Home Affairs (@PIBHomeAffairs)April 24, 2020

ಹೆಚ್ಚುತ್ತಲೇ ಇದೆ ಸಾವು, ವಿಶ್ವಾದ್ಯಂತ 2 ಲಕ್ಷದ ಸನಿಹ ಬಲಿ; ಭಾರತವೇ ಸ್ವಲ್ಪ ಸೇಫ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 8 =
Remember me
