ನವದೆಹಲಿ:ಕರೊನಾ ಸಂಕಷ್ಟ ತಡೆಗಟ್ಟಲು ವಿಧಿಸಲಾಗಿದ್ದ ನಿರ್ಬಂಧಗಳನ್ನು ಕೇಂದ್ರ ಸರ್ಕಾರ ಹಂತಹಂತವಾಗಿ ತೆರವು ಗೊಳಿಸುತ್ತಿದೆ. ಅದರಂತೆ ಆಗಸ್ಟ್​ 31ರವರೆಗೆ ಹಲವು ನಿರ್ಬಂಧಗಳನ್ನು ತೆರವುಗೊಳಿಸಿ ಆದೇಶಿಸಿತ್ತು. ಈಗ ಅನ್​ಲಾಕ್​ 4 ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಪ್ರಮುಖವಾಗಿ ಸೆ.7ರಿಂದ ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಹಂತಹಂತವಾಗಿ ಮೆಟ್ರೋ ಪ್ರಯಾಣ ಆರಂಭವಾಗಲಿದೆ.
ಇದನ್ನೂ ಓದಿ;ಪುನರಾರಂಭದವರೆಗೆ ಶಾಲೆಗಳು ವಾರ್ಷಿಕ, ಅಭಿವೃದ್ಧಿ ಶುಲ್ಕ ಪಡೆಯುವಂತಿಲ್ಲ; ದೆಹಲಿ ಹೈಕೋರ್ಟ್​ ಮಹತ್ವದ ಆದೇಶ
ಇನ್ನೊಂದು ಮುಖ್ಯ ಸಂಗತಿ ಎಂದರೆ, ಧಾರ್ಮಿಕ, ರಾಜಕೀಯ ಹಾಗೂ ಇತರ ಸಭೆ- ಸಮಾರಂಭಗಳನ್ನು ಸೆ.21ರಿಂದ ನಡೆಸಬಹುದು. ಆದರೆ, ಇದರಲ್ಲಿ 100 ಜನರಷ್ಟೇ ಭಾಗವಹಿಸಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಆದರೆ, ಶಾಲಾ- ಕಾಲೇಜು ಹಾಗೂ ಸ್ವಿಮ್ಮಿಂಗ್​ ಪೂಲ್​, ಒಳಾಂಗಣ ಥಿಯೇಟರ್​ಗಳು ಬಂದ್​ ಇರಲಿವೆ. ಈ ನಿರ್ಬಂಧಗಳು ಸೆಪ್ಟಂಬರ್​ 30ರವರೆಗೆ ಅನ್ವಯಿಸಲಿವೆ.ಜತೆಗೆ, ಸಾರ್ವಜನಿಕ ಉದ್ಯಾನಗಳು, ಮನೋರಂಜನಾ ಕೇಂದ್ರಗಳು ಹಾಗೂ ಬೃಹತ್​ ಪ್ರಮಾಣದಲ್ಲಿ ಜನರು ಸೇರುವ ಕಾರ್ಯಕ್ರಮಗಳಿಗೆ ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಹಂದಿ ಮಿದುಳಿನಲ್ಲಿ ಕಂಪ್ಯೂಟರ್​ ಚಿಪ್​; ಶೀಘ್ರದಲ್ಲಿ ಮಾನವರಿಗೂ ಅಳವಡಿಕೆ; ಆಸಕ್ತರಿಗಾಗಿ ನಡೆದಿದೆ ಹುಡುಕಾಟ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + nineteen =
Remember me
