ನವದೆಹಲಿ:ಜನವರಿ 26ರ ಗಣರಾಜ್ಯೋತ್ಸವದಂದು ರೈತರು ನಿಗದಿ ಮಾಡಿರುವ ಟ್ರ್ಯಾಕ್ಟರ್​ ರ‍್ಯಾಲಿಯನ್ನು ತಡೆಯುವಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ಗೆ ಮನವಿ ಸಲ್ಲಿಸಿದೆ.
ಕೃಷಿ ಕಾಯ್ದೆಗಳನ್ನು ರದ್ದು ಮಾಡದೇ ಮುಂದುವರಿಸಿದರೆ, ಜನವರಿ 26ರಂದು ಬೃಹತ್​ ಪ್ರತಿಭಟನೆ ನಡೆಸಲು ರೈತರು ನಿರ್ಧರಿಸಿದ್ದಾರೆ. ಹರಿಯಾಣ ರೈತರು ರ‍್ಯಾಲಿ ನಡೆಸಲು ಯೋಜನೆ ರೂಪಿಸಿದ್ದು, ಪ್ರತಿ ಗ್ರಾಮದಿಂದ ಒಂದು ಟ್ರ್ಯಾಕ್ಟರ್​ ಪ್ರತಿಭಟನಾ ರ‍್ಯಾಲಿಯಲ್ಲಿ ಸೇರಲಿದೆ. ಸುಮಾರು 20,000 ಟ್ರ್ಯಾಕ್ಟರ್​ ಗಣರಾಜ್ಯೋತ್ಸವದಂದು ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇದನ್ನೂ ಓದಿರಿ:ನಾಲ್ಕೇ ದಿನದಲ್ಲಿ 10 ಸಾವಿರ ಆ್ಯಪ್​ ಡೌನ್​ಲೋಡ್; ವಿಜಯವಾಣಿ ವಿದ್ಯಾಭಿಯಾನಕ್ಕೆ ಅಭೂತ ಪೂರ್ವ ಸ್ಪಂದನೆ
ಸುಪ್ರೀ ಕೋರ್ಟ್​ನಲ್ಲಿ ಕೇಂದ್ರ ಸರ್ಕಾರ ಅಫಿಡೆವಿಟ್​ ಸಲ್ಲಿಸಿದ್ದು, ಗಣರಾಜ್ಯೋತ್ಸವ ಸಾಂವಿಧಾನಿಕ ಮತ್ತು ಐತಿಹಾಸಿಕ ಮಹತ್ವದ ದಿನವಾಗಿದ್ದು, ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಜ. 23ರಂದು ಅದ್ಧೂರಿ ಪೂರ್ವಾಭ್ಯಾಸ, ಜ.28ರಂದು ರಾಷ್ಟ್ರೀಯ ಕೆಡೆಟ್​ ಕಾರ್ಪ್ಸ್​ ರ‍್ಯಾಲಿ, ಜ. 29ರಂದು ಬೀಟಿಂಗ್ ರಿಟ್ರೀಟ್ ಮಿಲಿಟರಿ ಸಮಾರಂಭ ಮತ್ತು ಜ.30ರಂದು ಹುತಾತ್ಮರ ದಿನ ಆಚರಿಸಲಾಗುತ್ತದೆ. ಈ ವೇಳೆ ಯಾವುದೇ ಅಡಚಣೆಗಳು ಕೇವಲ ಕಾನೂನು ಸುವ್ಯವಸ್ಥೆ, ಸಾರ್ವಜನಿಕ ಹಿತಾಸಕ್ತಿ, ಸಾರ್ವಜನಿಕ ಆದೇಶಕ್ಕೆ ವಿರುದ್ಧವಾಗಿರದೆ, ಇಡೀ ರಾಷ್ಟ್ರವನ್ನೇ ದೊಡ್ಡ ಮುಜುಗರಕ್ಕೆ ದೂಡುತ್ತದೆ ಎಂದು ಕೇಂದ್ರ ಸರ್ಕಾರ ಅಫಿಡೆವಿಟ್​ನಲ್ಲಿ ಮನವಿ ಮಾಡಿಕೊಂಡಿದೆ.
ಕೃಷಿ ಕಾಯ್ದೆಯ ಬಗ್ಗೆ ಕೋರ್ಟ್​ಗೆ ಮಾಹಿತಿ ನೀಡಿರುವ ಸರ್ಕಾರ, ಕಾಯ್ದೆಗಳನ್ನು ಆತುರವಾಗಿ ಮಾಡಿಲ್ಲ. ಇದು ಎರಡು ದಶಕಗಳ ಚರ್ಚೆಗಳ ಫಲಿತಾಂಶವಾಗಿದೆ. ಕಾಯ್ದೆಯಲ್ಲಿ ಅಸ್ತಿತ್ವದಲ್ಲಿರುವ ಮತ್ತು ಅದಕ್ಕಿಂತ ಹೆಚ್ಚುವರಿ ಆಯ್ಕೆಯನ್ನು ನೀಡಲಾಗಿರುವುದರಿಂದ ದೇಶದ ರೈತರು ಸಂತೋಷವಾಗಿದ್ದಾರೆ. ಕಾಯ್ದೆಯಲ್ಲಿ ಯಾವುದೇ ಪಟ್ಟಭದ್ರ ಹಕ್ಕನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ಹೇಳಿದೆ.
ಇದನ್ನೂ ಓದಿರಿ:ಗುಂಡು ಹಾರಿಸೋದು ಹೇಗೆಂದು ತೋರಿಸ್ತೀನಿ ಅಂತ ಪತ್ನಿ ತಲೆಗೆ ಗುಂಡಿಟ್ಟು ಹತ್ಯೆ ಮಾಡಿದ ಪತಿ!
ರೈತರ ಮನಸ್ಸಿನಲ್ಲಿರುವ ತಪ್ಪು ಗ್ರಹಿಕೆಗಳು ಮತ್ತು ಅನುಮಾನಗಳನ್ನು ತೆಗೆದುಹಾಕಲು ರೈತರೊಂದಿಗೆ ತೊಡಗಿಸಿಕೊಳ್ಳಲು ಸರ್ಕಾರ ಈವರೆಗೆ ಅತ್ಯುತ್ತಮ ಪ್ರಯತ್ನವನ್ನು ಮಾಡಿದೆ. ಕೇಂದ್ರದ ಯಾವುದೇ ಪ್ರಯತ್ನಗಳಲ್ಲಿ ಕೊರತೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಅಫಿಡೆವಿಟ್​ನಲ್ಲಿ ಹೇಳಿದೆ.
ನಿನ್ನೆ ಬೆಳಗ್ಗೆ ನಡೆದ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ ಅವರು ಟ್ರ್ಯಾಕ್ಟರ್​ ರ‍್ಯಾಲಿ ಸಮಸ್ಯೆಯನ್ನು ಕೋರ್ಟ್​ ಮುಂದೆ ಧ್ವನಿಯೆತ್ತಿದ್ದರು ಮತ್ತು ರ‍್ಯಾಲಿಯನ್ನು ತಡೆಯಬೇಕಾಗಿದೆ ಎಂದು ಮನವಿ ಮಾಡಿದರು. ಇದಾದ ಬಳಿಕ ಮುಖ್ಯ ನ್ಯಾಯಮೂರ್ತಿ ಎಸ್​.ಎ. ಬೊಬ್ಡೆ ಅಫಿಡೆವಿಟ್​ ಸಲ್ಲಿಸಲು ಕೇಂದ್ರ ಸರ್ಕಾರವನ್ನು ಕೋರಿದರು.
ದೇಶಾದ್ಯಂತ ರೈತರ ಹೋರಾಟಕ್ಕೆ ಕಾರಣವಾಗಿರುವ ಕೃಷಿ ಸುಧಾರಣಾ ಕಾಯ್ದೆಗಳನ್ನು ಸದ್ಯದ ಮಟ್ಟಿಗೆ ತಡೆ ನೀಡಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್​ ಸೋಮವಾರ ಸೂಚನೆ ನೀಡಿದೆ. ಕೇಂದ್ರ ಸರ್ಕಾರದ ಸಮಿತಿ ರೈತರ ನಡುವೆ ಒಂದು ಒಪ್ಪಂದ ಬರುವವರೆಗೂ ತಡೆ ನೀಡಬೇಕೆಂದು ತಿಳಿಸಲಾಗಿದೆ.(ಏಜೆನ್ಸೀಸ್​)
ಇದನ್ನೂ ಓದಿರಿ:ಯುವ ಹವಾ: ಗ್ರಾಮ ಪಂಚಾಯಿತಿಗಳಲ್ಲಿ ಯುವಕಲರವ
ಕೃಷಿ ಕಾಯ್ದೆ ತಡೆಗೆ ಸುಪ್ರೀಂ ಸೂಚನೆ; ನೀವು ತಡೆಯದಿದ್ದರೆ ನಾವೇ ತಡೆಯುತ್ತೇವೆ ಎಂದ ಸುಪ್ರೀಂ

ಲಸಿಕೆಗೆ ಭಾರತ ಸನ್ನದ್ಧ; ಆದ್ಯತೆಗೆ ಸೇರದ ಜನಪ್ರತಿನಿಧಿಗಳು | ಮೊದಲ ಹಂತಕ್ಕೆ ಕೇಂದ್ರದ್ದೇ ವೆಚ್ಚ

ಟೀಮ್ ಇಂಡಿಯಾಗೆ ಹೆಚ್ಚಿದ ಗಾಯದ ಸಮಸ್ಯೆ, ಅಂತಿಮ ಟೆಸ್ಟ್‌ನಿಂದ ಜಡೇಜಾ, ವಿಹಾರಿ ಔಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + seven =
Remember me
