ನವದೆಹಲಿ:ವಿಶ್ವಾಸಾರ್ಹತೆ, ಗುಣಮಟ್ಟದ ಬಗ್ಗೆ ಪ್ರಶ್ನೆಗಳೆದ್ದಾಗ ‘ಚೀನಾ ಮಾಲು’ ಎಂಬ ಪದ ಬಳಕೆ ನಮ್ಮಲ್ಲಿ ಸಾಮಾನ್ಯವಾಗಿದೆ. ಅಂದರೆ, ಕಳಪೆ ಎಂಬುದಕ್ಕೆ ಮತ್ತೊಂದು ಪದವಾಗಿಯೇ ಚೀನಾ ಉತ್ಪನ್ನಗಳನ್ನು ಹೆಸರಿಸಲಾಗುತ್ತದೆ. ಇದೀಗ ಕರೊನಾ ಟೆಸ್ಟಿಂಗ್​ ಕಿಟ್​ಗಳ ವಿಷಯದಲ್ಲೂ ಇದು ಸಾಬೀತಾಗಿದೆ.
ಕರೊನಾ ವಿರುದ್ಧ ಮುಂಚೂಣಿ ಪಡೆಯಲ್ಲಿದ್ದು ಹೋರಾಟ ನಡೆಸುವ ಯೋಧರು ಅಂದರೆ ವೈದ್ಯರು ದಾದಿಯರು, ಅರೆವೈದ್ಯಕೀಯ ಸಿಬ್ಬಂದಿಗೆ ನೀಡಲಾಗುವ (ಪರ್ಸನಲ್​ ಪ್ರೊಟೆಕ್ಷನ್ ಇಕ್ವಿಪ್​ಮೆಂಟ್​- ಪಿಪಿಇ) ಕಿಟ್​ಗಳ ವಿಷಯದಲ್ಲೂ ಚೀನಾ ಕಂಪನಿಗಳು ಗುಣಮಟ್ಟ ಕಾಯ್ದುಕೊಂಡಿಲ್ಲ ಎಂಬ ಆರೋಪ ವ್ಯಾಪಕವಾಗಿತ್ತು. ಆದರೆ, ಚೀನಾ ಆರಂಭದಲ್ಲಿ ಸಹಾಯಾರ್ಥವಾಗಿ ನೀಡಿದ ಕಿಟ್​ಗಳು ಇವಾಗಿದ್ದವು. ಗುಣಮಟ್ಟ ಕಾಯ್ದುಕೊಂಡ ಸಾಮಗ್ರಿಗಳನ್ನೇ ರವಾನಿಸಬೇಕೆಂಬ ಷರತ್ತಿನೊಂದಿಗೆ 15 ಕೋಟಿ ಪಿಪಿಇ ಕಿಟ್​ಗಳಿಗಾಗಿ ಚೀನಾದ ವಿವಿಧ ಕಂಪನಿಗಳೊಂದಿಗೆ ಕೇಂದ್ರ ಸರ್ಕಾರ ಹಾಗೂ ಭಾರತದ ವಿವಿಧ ಕಂಪನಿಗಳು ಒಪ್ಪಂದ ಮಾಡಿಕೊಂಡಿದ್ದವು.
ಇದರೊಂದಿಗೆ, 1.5 ಕೋಟಿ ಕರೊನಾ ಟೆಸ್ಟಿಂಗ್​ಗಳನ್ನು ಪೂರೈಸುವಂತೆ ಭಾರತ ಬೇಡಿಕೆ ಸಲ್ಲಿಸಿತ್ತು. ಹಂತಹಂತವಾಗಿ ಇವುಗಳನ್ನು ಚೀನಾ ಕಂಪನಿಗಳು ರವಾನೆ ಮಾಡುತ್ತಿವೆ.
ಇದೀಗ, ಚೀನಾದ ಗಾಂಗ್​ಝೋ ವಾಂಡ್ಫೋ ಬಯೋಟೆಕ್​ ಹಾಗೂ ಝುಹೈ ಲಿವ್ಝಾನ್​ ಡಯೋಗ್ನೊಸ್ಟಿಕ್​ ಕಂಪನಿಗಳು ಪೂರೈಸಿದ ಟೆಸ್ಟಿಂಗ್​ ಕಿಟ್​ಗಳು ಕಳಪೆಯಾಗಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್​) ಹೇಳಿದೆ. ಜತೆಗೆ, ಇವೆರಡು ಕಂಪನಿಗಳು ತಯಾರಿಸಿದ ಟೆಸ್ಟಿಂಗ್​ ಕಿಟ್​ಗಳನ್ನು ಉಪಯೋಗಿಸದಂತೆ ರಾಜ್ಯಗಳು ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿದೆ.
ಸರ್ಕಾರಕ್ಕೆ ನಷ್ಟವಿಲ್ಲ:ಕಳಪೆ ಟೆಸ್ಟಿಂಗ್​ ಕಿಟ್​ಗಳಿಂದಾಗಿ ಸರ್ಕಾರಕ್ಕೆ ಯಾವುದೇ ನಷ್ಟವಿಲ್ಲ. ಏಕೆಂದರೆ, ಇವುಗಳಿಗಾಗಿ ಯಾವುದೇ ಮೊತ್ತವನ್ನು ಮುಂಗಡವಾಗಿ ಪಾವತಿಸಿಲ್ಲ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಕೇರಳದಲ್ಲಿ ಅರಮನೆಯನ್ನೇ ಕಟ್ಟಿದ ಅನಿವಾಸಿ ಭಾರತೀಯ ತೈಲೋದ್ಯಮಿ ಮೃತದೇಹ ತರಲು ಕುಟುಂಬಕ್ಕೆ ಇದೆಂಥ ಸಂಕಷ್ಟ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
