ಹೊಸದಿಲ್ಲಿ:ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್ ಮತ್ತು ಕಂಪ್ಯೂಟರ್‌ ಸೇರಿದಂತೆ ಇತರ ಗ್ಯಾಜೆಟ್​​ಗಳ ಆಮದು ನಿರ್ಬಂಧದ ಆದೇಶವನ್ನು ಸರ್ಕಾರವು ಹಿಂಪಡೆದಿದ್ದು, ಕೆಲ ನಿರ್ಬಂಧಗಳನ್ನು ಸಡಿಲಿಸಲಾಗಿದೆ ಎಂದು ಕೇಂದ್ರ ಸರ್ಕಾರವು ಹೇಳಿದೆ.ಇದನ್ನೂ ಓದಿ:40 ಸಿಬಿಐ ಅಧಿಕಾರಿಗಳಿಗೆ ಗೌರವಾನ್ವಿತ ಸೇವೆಗಾಗಿ ಪೊಲೀಸ್ ಪದಕ: ಇಲ್ಲಿದೆ ಪಟ್ಟಿ..ನಿರ್ಬಂಧದ ಆದೇಶವನ್ನು ಸುಮಾರು ಮೂರು ತಿಂಗಳವರೆಗೆ (ಅಕ್ಟೋಬರ್ 31) ಸರ್ಕಾರ ಮುಂದೂಡಿದ್ದು ಈ ಕ್ರಮವು ಎಲೆಕ್ಟ್ರಾನಿಕ್ ಕಂಪನಿಗಳಿಗೆ ಪರವಾನಗಿ ಇಲ್ಲದೆ ಗ್ಯಾಜೆಟ್​​ಗಳನ್ನು ಆಮದು ಮಾಡಿಕೊಳ್ಳಲು ಹೆಚ್ಚಿನ ಸಮಯವನ್ನು ನೀಡುತ್ತದೆ. ಈ ಕಂಪನಿಗಳು ನವೆಂಬರ್ 1ರಿಂದ ಈ ಸಾಧನಗಳನ್ನು ಆಮದು ಮಾಡಿಕೊಳ್ಳಲು ಸರ್ಕಾರದಿಂದ ಪರವಾನಗಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಲಾಗಿದೆ.ಗುರುವಾರದದಂದು ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ಗಳು ಮತ್ತು ಪರ್ಸನಲ್ ಕಂಪ್ಯೂಟರ್‌ಗಳ ಆಮದು ನಿರ್ಬಂಧ ತಕ್ಷಣವೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಸೂಚಿಸಿ ಮಾನ್ಯವಾದ ಪರವಾನಗಿ ಇದ್ದರೆ ಮಾತ್ರ ಇವುಗಳ ಆಮದಿಗೆ ಅನುಮತಿಯನ್ನು ನೀಡಿತ್ತು. HSN 8741 ಅಡಿಯಲ್ಲಿ ಬರುವ ಸರ್ವರ್‌, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಆಲ್-ಇನ್-ಒನ್ ಪರ್ಸನಲ್ ಕಂಪ್ಯೂಟರ್‌ಗಳು ಮತ್ತು ಅಲ್ಟ್ರಾ ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಕಂಪ್ಯೂಟರ್‌ಗಳ ಆಮದನ್ನು ನಿಷೇಧಿಸಲಾಗಿತ್ತು.ಇದನ್ನೂ ಓದಿ:ಬುಡಕಟ್ಟು ವ್ಯಕ್ತಿಯ ಮೇಲೆ ಗುಂಡು ಹಾರಿಸಿದ ಶಾಸಕನ ಪುತ್ರ: ಈಗಾಗಲೇ ಮತ್ತೊಂದು ಪ್ರಕರಣಲ್ಲಿ ಜಾಮೀನಿನ ಮೇಲೆ ಹೊರಗಿದ್ದ..
ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್‌ಗಳ ಆಮದುಗಳಿಗೆ ಸಂಬಂಧಿಸಿದ ಹೊಸ ನಿಯಮಗಳು ಜಾರಿಗೆ ಬರಲು ಕಾಲಾವಕಾಶವಿದೆ. ನಿಖರವಾದ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಉಪ ಐಟಿ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.ವಿವಿಧ ವ್ಯಾಪಾರ-ಸಂಬಂಧಿತ ಕಾಳಜಿಗಳನ್ನು ಪರಿಹರಿಸುವ ಕ್ರಮಗಳ ಭಾಗವಾಗಿ ಪರವಾನಗಿ ಅಗತ್ಯವನ್ನು ಪರಿಚಯಿಸಲಾಗಿದ್ದು, ಸರ್ಕಾರದ ಏಕಾಏಕಿ ಆದೇಶವು ಲ್ಯಾಪ್‌ಟಾಪ್‌ಗಳು ಮತ್ತು ಟ್ಯಾಬ್ಲೆಟ್‌ಗಳ ಆಮದುಗಳು ಗ್ರಾಹಕರ ಬೇಡಿಕೆಗಳನ್ನು ಪೂರೈಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ವ್ಯವಹಾರಗಳ ನಡುವೆ ಕಳವಳವನ್ನು ಉಂಟುಮಾಡಿತ್ತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + fifteen =
Remember me
