ಚೆನ್ನೈ:ತಾವು ನಟಿಸಿರುವ ಮಾರ್ಕ್​ ಆಂಟೋನಿ ಚಿತ್ರದ ಹಿಂದಿ ಅವತರಣಿಕೆಯ ಪ್ರಮಾಣಪತ್ರ ಪಡೆಯಲು ಸೆಂಟರ್​ ಬೋರ್ಟ್​ ಆಫ್​ ಫಿಲ್ಮ್​ ಸರ್ಟಿಫಿಕೇಷನ್​ಗೆ 6.5 ಲಕ್ಷ ರೂಪಾಯಿ ಹಣ ಲಂಚ ನೀಡಿರುವುದಾಗಿ ನಟ ವಿಶಾಲ್​ ಆರೋಪಿಸಿರುವ ಬೆನ್ನಲ್ಲೇ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ತನಿಖೆಗೆ ಆದೇಶಿಸಿದೆ.
ಇತ್ತ ನಟ ವಿಶಾಲ್​ ಆರೋಪ ಚಿತ್ರರಂಗದಲ್ಲಿ ಹೊಸ ಸಂಚಲನ ಒಂದನ್ನು ಸೃಷ್ಟಿಸಿದ್ದು, CBFCಯ ಮಾತೃ ಸಂಸ್ಥೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪ್ರತಿಕ್ರಿಯಿಸಿದೆ. ನಟ ವಿಶಾಲ್​ ಅವರು ಮಾಡಿರುವ ಆರೋಪ ದುರದೃಷ್ಟಕರವಾದದ್ದು, ಈ ಸಂಬಂಧ ತನಿಖೆಗೆ ಆದೇಶಿಸಲಾಗುವುದು ಎಂದು ತಿಳಿಸಿದೆ.
#Corruptionbeing shown on silver screen is fine. But not in real life. Cant digest. Especially in govt offices. And even worse happening in#CBFCMumbai office. Had to pay 6.5 lacs for my film#MarkAntonyHindiversion. 2 transactions. 3 Lakhs for screening and 3.5 Lakhs for…pic.twitter.com/3pc2RzKF6l
ಇದನ್ನೂ ಓದಿ:ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್; ವಿವಾದ ಸೃಷ್ಟಿಸಿದ ಮಗಳ ಹೆಸರು
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪ್ರತಿಕ್ರಿಯಿಸಿರುವ MIB ಸರ್ಕಾರ ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ಒಂದು ವೇಳೆ ಅಂತಹದ್ದು ಏನಾದರೂ ಕಂಡು ಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ. ವಿಶಾಲ್​ ಅವರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಲಾಗಿದ್ದು, ಹಿರಿಯ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ. ಒಂದು ವೇಳೆ CBFC ಅಥವಾ ಅದರ ಹೆಸರಿನಲ್ಲಿ ಯಾರಾದರೂ ಕಿರುಕುಳ ನೀಡಿದರೆ[email protected]ಗೆ ದೂರು ಸಲ್ಲಿಸಬಹುದು ಎಂದು ತಿಳಿಸಿದೆ.
ಈ ಕುರಿತು ವಿಡಿಯೋ ಹೇಳಿಕೆ ಒಂದನ್ನು ಬಿಡುಗಡೆ ಮಾಡಿರುವ ಅವರು, ತಾವು ಮಾಡುತ್ತಿರುವ ಆರೋಪಗಳಿಗೆ ತಮ್ಮ ಬಳಿ ಪುರಾವೆಗಳಿರುವುದಾಗಿ ನಟ ವಿಶಾಲ್​ ತಿಳಿಸಿದ್ದಾರೆ. ಸೆಪ್ಟೆಂಬರ್​ 15ರಂದು ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಮಾರ್ಕ್​ ಆಂಟೋನಿ ಬಿಡುಗಡೆಯಾಗಿತ್ತು. ಸೆಪ್ಟೆಂಬರ್​ 28ರಂದು ಹಿಂದಿ ಅವತರಣಿಕೆ ಬಿಡುಗಡೆಯಾಗಿತ್ತು.
The issue of corruption in CBFC brought forth by actor@VishalKOfficialis extremely unfortunate.The Government has zero tolerance for corruption and strictest action will be taken against anyone found involved. A senior officer from the Ministry of Information & Broadcasting…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
