ನವದೆಹಲಿ:ಕರೊನಾ ಲಸಿಕೆ ವಿತರಣೆಗೆ ದೇಶ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾರಂಭಿಸಿವೆ. ಇನ್ನು ಕೆಲ ವಾರದಲ್ಲಿಯೇ ದೇಶದ ಜನರಿಗತೆ ಲಸಿಕೆ ಲಭ್ಯವಾಗುವ ಸಾಧ್ಯತೆಯಿದ್ದು ಅದಕ್ಕೆಂದು ಲಸಿಕೆ ವಿತರಣೆ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಇಂದು ಬಿಡುಗಡೆ ಮಾಡಿದೆ.
ಇದನ್ನೂ ಓದಿ:ಬಸ್ ಸಂಚಾರಕ್ಕೆ ಪೊಲೀಸ್ ಸರ್ಪಗಾವಲು!; ತಿಂಥಣಿಯಿಂದ ಗಬ್ಬೂರುವರೆಗೆ ಎಸ್ಕಾರ್ಟ್
ಮಾರ್ಗಸೂಚಿಯಲ್ಲಿ ಸೂಚಿಸಿರುವ ಪ್ರಕಾರ, ಲಸಿಕೆ ಪಡೆಯುವ ಸಾರ್ವಜನಿಕರು ವೋಟರ್​ ಐಟಿ/ ಆಧಾರ್​ ಕಾರ್ಡ್​/ ಡ್ರೈವಿಂಗ್​ ಲೈಸೆನ್ಸ್​/ ಪಿಂಚಣಿ ದಾಖಲೆ/ ಪಾಸ್​ಪೋರ್ಟ್​ (ಸರ್ಕಾರದಿಂದ ನೀಡಲಾಗುವ 12 ದಾಖಲೆಗಳಲ್ಲಿ ಯಾವುದಾದರೂ ಒಂದು) ದಾಖಲೆ ನೀಡುವುದು ಕಡ್ಡಾಯ. ಮುಂಚಿತವಾಗಿಯೇ ನೋಂದಣಿಯಾಗಿರುವವರಿಗೆ ಮಾತ್ರವೇ ಲಸಿಕೆ ನೀಡಲಾಗುವುದು. ಸ್ಥಳದಲ್ಲಿಯೇ ನೋಂದಣಿಯಾಗುವ ಅವಕಾಶ ಇರುವುದಿಲ್ಲ.
ಇದನ್ನೂ ಓದಿ:ಕರೊನಾ ಸೋಂಕಿತರ ಸಂಖ್ಯೆ ಇಳಿಮುಖ; ಇಂದು 830 ಪ್ರಕರಣ ಪತ್ತೆ
ಉಳಿದಂತೆ ಮಾರ್ಗಸೂಚಿಯಲ್ಲಿರುವ ಕೆಲವು ಮುಖ್ಯ ಅಂಶಗಳು ಈ ಕೆಳಗಿನಂತಿವೆ:* ಪ್ರತಿ ಅವಧಿಯಲ್ಲಿ 200 ಜನರಿಗೆ ಮಾತ್ರವೇ ಲಸಿಕೆ ನೀಡಲು ಅವಕಾಶ* ಲಸಿಕೆ ಪಡೆದವರನ್ನು ಅರ್ಧ ಗಂಟೆ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿಡಬೇಕು* ಲಸಿಕೆ ವಿತರಣಾ ತಂಡವು ಐದು ಸದಸ್ಯರನ್ನು ಒಳಗೊಂಡಿರುತ್ತದೆ* ಲಸಿಗೆ ಪಡೆಯಲು ನೋಂದಣಿಯಾದವರನ್ನು ಗುರುತಿಸಲು ಕರೊನಾ ಲಸಿಕೆ ಇಂಟೆಲಿಜೆನ್ಸ್​ ನೆಟ್​ವರ್ಕ್ (Co-WIN) ಸಿಸ್ಟಮ್​ ಬಳಸಲಾಗುವುದು* ಉತ್ಪಾದನಾ ಕೇಂದ್ರದಿಂದ ಜಿಲ್ಲೆಗಳಿಗೆ ಲಸಿಕೆ ಸ್ಥಳಾಂತರಿಸುವುದು ಆಯಾ ರಾಜ್ಯ ಸರ್ಕಾರಗಳ ಜವಾಬ್ದಾರಿ* ಲಸಿಕೆಯನ್ನು ಸೂಕ್ತ ಮುನ್ನೆಚ್ಚರಿಕೆಗಳೊಂದಿಗೆ ಎಚ್ಚರಿಕೆಯಿಂದ ಸ್ಥಳಾಂತರಿಬೇಕು
ಇದನ್ನೂ ಓದಿ:ಜಿಮೇಲ್​, ಯೂಟ್ಯೂಬ್​ ವರ್ಕ್​ ಆಗ್ತಿಲ್ಲ! ವಿಶ್ವದೆಲ್ಲೆಡೆ ಕೇಳಿಬರ್ತಿದೆ ಒಂದೇ ದೂರು
ದೇಶದಲ್ಲಿ ವೈದ್ಯಕೀಯ ವಲಯ, ಮುಖ್ಯಭೂಮಿಕೆಯಲ್ಲಿ ಕೆಲಸ ಮಾಡುತ್ತಿರುವವರು ಮತ್ತು 50 ವರ್ಷ ಮೇಲ್ಪಟ್ಟ 30 ಕೋಟಿ ಜನರನ್ನು ಗುರುತಿಸಲಾಗಿದ್ದು, ಅವರಿಗೆ ಮೊದಲನೇ ಹಂತದಲ್ಲಿ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಈ ಹಿಂದೆಯೇ ತಿಳಿಸಿದೆ. (ಏಜೆನ್ಸೀಸ್​)
ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

ಇನ್​ಸ್ಟಾಗ್ರಾಂ ಸ್ಟಾರ್​ಗೆ 10 ವರ್ಷ ಜೈಲು! ವಿಚಿತ್ರವಾಗಿ ಕಾಣಲು ಹೋಗಿ ಜೈಲು ಸೇರಿದ ಯುವತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 17 =
Remember me
