ನವದೆಹಲಿ:ಮೇ 3ರ ನಂತರ ಲಾಕ್​ಡೌನ್​ ತೆರವು ಬಳಿಕ ಹಲವು ನಿರ್ಬಂಧಗಳನ್ನು ಕೇಂದ್ರ ಸರ್ಕಾರ ಹಂತಹಂತವಾಗಿ ಸಡಿಲಿಸಲಿದೆ. ಅದಕ್ಕೆ ಪೂರಕವಾಗಿ ಹಲವು ಅಗತ್ಯ ಸೇವೆಗಳಿಗೆ ಅನುಮತಿ ನೀಡುತ್ತಿದೆ.
ಮಂಗಳವಾರವಷ್ಟೇ ಕೃಷಿ ಉತ್ಪನ್ನ ಹಾಗೂ ಶೈಕ್ಷಣಿಕ ಪಠ್ಯಪುಸ್ತಕಗಳ ಮಾರಾಟ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಿತ್ತು. ಜತೆಗೆ ಬೇಸಿಗೆ ಕಾರಣಕ್ಕೆ ಎಲೆಕ್ಟ್ರಿಕ್​ ಫ್ಯಾನ್​ಗಳ ದುರಸ್ತಿ ಅಂಗಡಿಗಳಿಗೂ ಅವಕಾಶ ನೀಡಿದೆ.
ಇದೀಗ ಮತ್ತಷ್ಟು ನಿರ್ಬಂಧಗಳನ್ನು ತೆರವುಗೊಳಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ಅದರಂತೆ, ಪ್ರಿಪೇಡ್​ ಮೊಬೈಲ್​ಗಳಿಗೆ ಕರೆನ್ಸಿ ರೀಚಾರ್ಜ್​ ಮಾಡುವ ಅಂಗಡಿಗಳನ್ನು ತೆರೆಯಬಹುದಾಗಿದೆ. ಸಾರ್ವಜನಿಕ ಅಗತ್ಯ ಸೇವೆಗಳಲ್ಲಿ ಇದೂ ಒಂದಾಗಿದೆ ಎಂದು ಹೇಳಿದೆ.
ಇದಲ್ಲದೇ, ಮನೆಯಲ್ಲಿಯೇ ಇರುವ ಹಿರಿಯರನ್ನು ನೋಡಿಕೊಳ್ಳಲು ಸಹಾಯಕರು ಹಾಗೂ ಆರೈಕೆ ನೀಡುವವರ ಕೆಲಸಕ್ಕೆ ಅನುಮತಿಸಿದೆ.ಅತ್ಯಾವಶ್ಯಕ ವಸ್ತುಗಳ ಸರಬರಾಜು ಅನ್ವಯ ಬ್ರೆಡ್​ ತಯಾರಿಸುವ ಫ್ಯಾಕ್ಟರಿಗಳು ಕಾರ್ಯಾರಂಭಿಸಬಹುದು. ಹಾಲು ಸಂಸ್ಕರಣಾ ಘಟಕಗಳು, ಹಿಟ್ಟಿನ ಗಿರಣಿಗಳು ಹಾಗೂ ದಾಲ್​ ಮಿಲ್​ಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಬಗ್ಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್​ ಭಲ್ಲಾ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ರವಾನಿಸಿದ್ದಾರೆ.
ತುತ್ತು ಅನ್ನಕ್ಕೂ ಹಾಹಾಕಾರ, ಹಸಿವಿನಿಂದ ಕಂಗೆಡಲಿದ್ದಾರೆ 26 ಕೋಟಿ ಜನ, ವಿಶ್ವಸಂಸ್ಥೆ ನೀಡಿದೆ ಆಘಾತಕಾರಿ ವರದಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × 5 =
Remember me
