ನವದೆಹಲಿ:ಎನ್​ಜಿಒ ಹೆಸ್ರಲ್ಲಿ ದುಡ್ಡು ಮಾಡೋರಿಗೆ ಕಷ್ಟಕಾಲ ಶುರುವಾಗಿದೆ. ಇನ್ನು ಮೇಲೆ ಆ ರೀತಿ ದುಡ್ಡು ಮಾಡೋದು ಕಷ್ಟ ಆಗಲಿದೆ. ಸರ್ಕಾರದ ಅನುದಾನ, ನಿಧಿ ಪಡೆದುಕೊಂಡಿದ್ದರೆ ಅಥವಾ ಪಡೆಯುವುದಿದ್ದರೆ ಅದನ್ನು ಸರಿಯಾದ ಕಾರ್ಯಕ್ಕೆ ವಿನಿಯೋಗಿಸಿರುವುದಕ್ಕೆ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಅದನ್ನು ನೀಡದೇ ಹೋದರೆ, ಅಂತಹ ಎನ್​ಜಿಒಗಳು ಅಸ್ತಿತ್ವ ಕಳೆದುಕೊಳ್ಳಲಿವೆ.
ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್​ ಟೆಕ್ನಾಲಜಿ, ದೆಹಲಿ ಯೂನಿವರ್ಸಿಟಿ, ಟಾಟಾ ಇನ್​ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ ಸರ್ಕಾರಿ ಅನುದಾನಿತ ಸಂಸ್ಥೆಗಳಾಗಿದ್ದು, ಸಾರ್ವಜನಿಕ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವುದಾಗಿ ಘೋಷಿಸಿಕೊಂಡಿವೆ. ಆದರೆ, ವ್ಯಾಪಕ ಮತ್ತು ವ್ಯವಸ್ಥಿತವಾಗಿ ಅನುದಾನ ದುರುಪಯೋಗ ಮಾಡಿರುವುದು ದಿಢೀರ್ ಪರಿಶೀಲನೆಯ ಮೂಲಕ ಬಹಿರಂಗವಾಗಿದೆ. ಇಂತಹ 100ಕ್ಕೂ ಹೆಚ್ಚು ಸಂಸ್ಥೆಗಳ ಲೆಕ್ಕಪತ್ರ, ದಾಖಲೆಗಳ ಪರಿಶೀಲನೆಯನ್ನು ಅನಿರೀಕ್ಷಿತವಾಗಿ ನಡೆಸುವುದಕ್ಕೆ ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಇದನ್ನೂ ಓದಿ:ಇಮ್ರಾನ್ ಖಾನ್​ ಅವರನ್ನು ಜೈಲಿಗೆ ಕಳುಹಿಸಿಯೇ ಸಿದ್ಧ- ಮರಿಯಂ ನವಾಜ್ ಪ್ರತಿಜ್ಞೆ
ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಸೋಷಿಯಲ್ ಡಿಫೆನ್ಸ್ ಅಧಿಕಾರಿಗಳು ಈ ರೀತಿ ಅನಿರೀಕ್ಷಿತ ಪರಿಶೀಲನೆ ನಡೆಸಿ, ಕೇಂದ್ರ ಸರ್ಕಾರಕ್ಕೆ ಅನೇಕ ಶಿಫಾರಸುಗಳನ್ನು ನೀಡಿದೆ. ಒಟ್ಟು 700 ಸಂಸ್ಥೆಗಳ ಪರಿಶೀಲನೆ ನಡೆಸಿದ್ದರ ಪೈಕಿ 130 ಸಂಸ್ಥೆ (19%)ಗಳಲ್ಲಿ ಇಂತಹ ದುರುಪಯೋಗಗಳಾಗಿವೆ ಇಲ್ಲವೇ ನಿಷ್ಕ್ರಿಯವಾಗಿವೆ. ಎನ್​ಜಿಒ ನಿಯಮಗಳನ್ನು ಇವು ಉಲ್ಲಂಘಿಸಿದ್ದು, ದಾಖಲೆಗಳನ್ನು ಜೋಡಿಸಿಲ್ಲ. ಸರ್ಕಾರದಿಂದ ಪಡೆದ ಅನುದಾನ ಅಥವಾ ಕೇಳಿದ ಅನುದಾನದ ವಿನಿಯೋಗಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು, ಯೋಜನೆಗಳನ್ನು ಹೊಂದಿಲ್ಲ ಎಂಬುದು ಸ್ಪಷ್ಟವಾಗಿವೆ ಎಂಬ ಅಂಶವನ್ನು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ:ಇಎಂಐ ಪಾವತಿಸಿದ್ದೀರಾ?: ಮಾರಟೋರಿಯಂ ಅವಧಿಯ ರಿವಾರ್ಡ್ ನಿಮ್ಮದಾಗಬಹುದು!
ಪರಿಶೀಲಿಸಲ್ಪಟ್ಟ ಸಂಸ್ಥೆಗಳ ಪೈಕಿ 336 ಮಾದಕ ವ್ಯಸನಿಗಳ ಪುನರ್ವಸತಿ ಕಾರ್ಯದಲ್ಲಿ ಭಾಗಿಯಾಗಿರುವಂಥವು, 253 ಹಿರಿಯ ನಾಗರಿಕರ ಕಲ್ಯಾಣ ಕಾರ್ಯದಲ್ಲಿ ಭಾಗಿ ಆಗಿರುವಂಥವು, 100ಕ್ಕೂ ಹೆಚ್ಚು ಸಂಘಟನೆಗಳು ಹಿಂದುಳಿದ ಪರಿಶೀಷ್ಟ ಜಾತಿ ಸಮುದಾಯದವರ ಕಲ್ಯಾಣ ಕಾರ್ಯದವು. ರಾಜ್ಯವಾರು ಗಮನಿಸಿದರೆ, ಮಹಾರಾಷ್ಟ್ರದ 20, ಕರ್ನಾಟಕದ 13, ರಾಜಸ್ಥಾನದ 11, ಉತ್ತರ ಪ್ರದೇಶದ 8 ಸಂಸ್ಥೆಗಳು ಕೇಂದ್ರ ಸರ್ಕಾರದ ನಿಗಾದಲ್ಲಿವೆ. (ಏಜೆನ್ಸೀಸ್)
ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಭುಗಿಲೆದ್ದ ಹಿಂಸಾಚಾರ; ಕೇಂದ್ರದ ನೆರವಿಗೆ ಮೊರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
