ನವದೆಹಲಿ:ಭಾರತ ಮಹಾ ಮರುವಲಸೆಗೆ ಸಜ್ಜಾಗಿದೆ. ಅಂದರೆ, ಕರೊನಾನದಿಂದಾಗಿ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ದೇಶಕ್ಕೆ ಕರೆತರಲು ಸಿದ್ಧತೆ ಮಾಡಿಕೊಂಡಿದ್ದು, ಮೇ 7ರಿಂದ ಈ ಪ್ರಕ್ರಿಯೆ ಆರಂಭಗೊಳ್ಳಲಿದೆ.
ವಿದೇಶಗಳಲ್ಲಿರುವ 2 ಲಕ್ಷಕ್ಕೂ ಅಧಿಕ ಭಾರತೀಯರು ತಾಯ್ನಾಡಿಗೆ ಬರಲು ಉತ್ಸುಕರಾಗಿದ್ದಾರೆ. ಮೇ 7ರಿಂದ ವಿಶೇಷ ವಿಮಾನಗಳ ಮೂಲಕ ಇವರನ್ನು ಕರೆತರಲಾಗುವುದು. ಆರಂಭದ ಒಂದು ವಾರದಲ್ಲಿ 14,800 ಜನರನ್ನು ಕರೆತರಲಾಗುವುದು ಎಂದು ನಾಗರಿಕ ವಿಮಾನ ಯಾನ ಸಚಿವ ಹರದೀಪ್​ ಸಿಂಗ್​ ಪುರಿ ಹೇಳಿದ್ದಾರೆ.
ಇದೊಂದು ವಿಶೇಷ ಕಾರ್ಯಾಚರಣೆಯಾಗಿದ್ದು, ಇದರ ಸೌಲಭ್ಯವನ್ನು ಪಡೆದುಕೊಳ್ಳಲು ಇಚ್ಛಿಸುವವರು ವಿಮಾನ ಪ್ರಯಾಣದ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ;ಕರೊನಾ ನಿರ್ಮೂಲನಕ್ಕೆ ಔಷಧ ಸಿಗದೆಯೂ ಇರಬಹುದು…!
ಲಂಡನ್​ನಿಂದ ದೆಹಲಿ, ಮುಂಬೈ, ಬೆಂಗಳೂರಿಗೆ ಬರಲು ವಿಮಾನದ ಟಿಕೆಟ್​ ದರವನ್ನು 50,000 ರೂ. ಎಂದು ನಿಗದಿ ಪಡಿಸಲಾಗಿದೆ. ಇನ್ನು ಚಿಕಾಗೋ, ನೇವಾರ್ಕ್​, ಸ್ಯಾನ್​ಫ್ರಾನ್ಸಿಸ್ಕೋ ಮೊದಲಾ ಕಡೆಗಳಿಂದ ಬರುವವರು ಒಂದು ಲಕ್ಷ ರೂ. ಪಾವತಿಸುವುದು ಅನಿವಾರ್ಯವಾಗಲಿದೆ. ವಿವಿಧ ದೇಶಗಳಿಂದ ಬರುವವರಿಗೆ ನಿಗದಿಪಡಿಸಿದ ಟಿಕೆಟ್​ ದರವನ್ನು ವಿಮಾನಯಾನ ಸಚಿವಾಲಯದ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿದೆ.
ದುಬೈ-13,000 ರೂ, ಅಬುದಾಭಿ-15,000 ರೂ. ಹಾಗೂ ಸಿಂಗಾಪುರ್​ನಿಂದ ಬೆಂಗಳೂರಿಗೆ ಬರಲು 18,000 ರೂ. ಟಿಕೆಟ್​ ದರವಿದೆ.ಇದಲ್ಲದೇ, ಭಾರತದಲ್ಲಿ ನೆಲೆಸಿರುವ ವಿದೇಶಿಯರನ್ನು ಅವರವರ ದೇಶಗಳಿಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕರೊನಾ ನಿರ್ಮೂಲನಕ್ಕೆ ಔಷಧ ಸಿಗದೆಯೂ ಇರಬಹುದು…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 6 =
Remember me
