ನವದೆಹಲಿ:ಕರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ, ಲಾಕ್​ಡೌನ್ ಮಾಡಿ ಎಂಬ ಕೂಗುಗಳು ಹೆಚ್ಚುತ್ತಿರುವ ಮಧ್ಯದಲ್ಲಿಯೇ, ಮತ್ತೊಂದು ಸುತ್ತಿನ ಅನ್​ಲಾಕ್​ಡೌನ್​ಗೆ ಸಿದ್ಧವಾಗುತ್ತಿದೆ ಕೇಂದ್ರ ಸರ್ಕಾರ.
ಮುಖ್ಯವಾಗಿ ಅಂತಾರಾಷ್ಟ್ರೀಯ ವಿಮಾನ ಸಂಚಾರ, ಶಾಲಾ- ಕಾಲೇಜು ಆರಂಭ ಹಾಗೂ ಮೆಟ್ರೋ ಸಂಚಾರಕ್ಕೆ ಅನುಮತಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಮುಮದಿನ ವಾರದ ವೇಳೆಗೆ ಇದನ್ನು ಘೋಷಿಸುವ ಸಾಧ್ಯತೆಯಿದೆ.ಎರಡನೇ ಸುತ್ತಿನ ಅನ್​ ಲಾಕ್​ಡೌನ್​ ಹೇಗಿರಬೇಕು ಎಂಬುದಕ್ಕೆ ತಜ್ಞರ ಸಲಹೆ ಹಾಗೂ ಮಾರ್ಗದರ್ಶನವನ್ನು ಪಡೆದುಕೊಳ್ಳಲಾಗುತ್ತಿದೆ, ಇವನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಲ ಆಯ್ದ ಅಂತಾರಾಷ್ಟ್ರೀಯ ಮಾರ್ಗದಲ್ಲಿ ಖಾಸಗಿ ವಿಮಾನ ಯಾನಕ್ಕೆ ಅವಕಾಶ ನಿಡುವ ಸಾಧ್ಯತೆ ಇದ್ದು, ಮೆಟ್ರೋ ಸಂಚಾರಕ್ಕೆ ಇನ್ನಷ್ಟು ಕಾಲಾವಕಾಶ ಬೇಕಾಗಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ;ಜುಲೈ 31ರ ವರೆಗೆ ಲಾಕ್​ಡೌನ್​; ಶಾಲಾ-ಕಾಲೇಜುಗಳು ಬಂದ್​; ಕರೊನಾ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೆಲ್ಲಿ?
ಮೆಟ್ರೋ:ಮಹಾನಗರಗಳಲ್ಲಿ ಕರೊನಾ ಹೆಚ್ಚುತ್ತಿರುವ ಕಾರಣ ಮೆಟ್ರೋ ಸಂಚಾರ ವಿಳಂಬವಾಗಬಹುದು ಎಂದು ನಿರೀಕ್ಷಿಸಲಾಗಿದೆ. ರಾಜ್ಯ ಸರ್ಕಾರಗಳು ಕೂಡ ಈ ಬಗ್ಗೆ ಅಷ್ಟೊಂದು ಉತ್ಸಾಹ ತೋರುತ್ತಿಲ್ಲ. ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರಿನಲ್ಲಿ ಪ್ರಕರನಗಳು ಹೆಚ್ಚುತ್ತಿರುವುದರಿಂದ ಮೆಟ್ರೋ ಆರಂಭ ವಿಳಂಬವಾಗಬಹುದು.
ಶಿಕ್ಷಣ ಸಂಸ್ಥೆಗಳು:ಶಿಕ್ಷಣ ಸಂಸ್ಥೆಗಳ ಆರಂಭಕ್ಕೂ ಅತ್ಯುತ್ಸಾಹವೇನಿಲ್ಲ. ಕರ್ನಾಟಕ ಹೊರತುಪಡಿಸಿದರೆ, ಬಹುತೇಕ ರಾಜ್ಯಗಳು ಎಸ್​ಎಸ್​ಎಲ್​ಸಿ ಹಾಗೂ ಇತರ ಪರೀಕ್ಷೆಗಳನ್ನು ರದ್ದುಪಡಿಸಿವೆ. ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಿಯೇ ಕೇಂದ್ರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿರುವುದರಿಂದ ಕರ್ನಾಟಕದಲ್ಲಿ ಶಾಲಾ- ಕಾಲೇಜುಗಳ ಆರಂಭಕ್ಕೆ ಗ್ರೀನ್​ ಸಿಗ್ನಲ್​ ದೊರೆಯುವ ಸಾಧ್ಯತೆಗಳಿವೆ.
ಇದನ್ನೂ ಓದಿ;ಕರೊನಾದಷ್ಟೇ ಮಾರಕವಾಗಿದ್ದ ಈ ಕಾಯಿಲೆ ಕೊನೆಗೂ ತೊಲಗಿದೆ…!
ಅಂತಾರಾಷ್ಟ್ರೀಯ ವಿಮಾನ ಯಾನ:ದುಬೈ ಹಾಗೂ ಇತರ ಕೊಲ್ಲಿ ರಾಷ್ಟ್ರಗಳಿಗೆ ವಿಮಾನ ಸಂಚಾರ ಆರಂಭಿಸುವಂತೆ ಕೇರಳ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ. ಅಂತೆಯೇ ಭಾರತಕ್ಕೆ ವಿಮಾನ ಸಂಚಾರ ಆರಂಭಿಸಲು ಅಮೆರಿಕದ ಸಂಸ್ಥೆಗಳು ಸಜ್ಜಾಗಿವೆ. ಇದಲ್ಲದೇ, ನೆರೆಯ ರಾಷ್ಟ್ರಗಳಿಗೆ ವಿಮಾನ ಸಂಚಾರ ಆರಂಭಕ್ಕೆ ಅನುಮತಿ ದೊರೆಯಬಹುದು.
ಕಾರ್ಮಿಕ ವಲಯ: ಉದ್ಯೋಗಾವಕಾಶ ಹೆಚ್ಚಿಸಲು ಹೆಚ್ಚಿನ ಕ್ರಮಗಳನ್ನು ನಿರೀಕ್ಷಿಸಬಹುದು. ಇದರ ಜತೆಗೆ, ವಲಸೆ ಕಾರ್ಮಿಕರಿಗೆ ಕೌಶಲ್ಯಾಧಾರಿತ ಕೆಲಸಗಳನ್ನು ಒದಗಿಸಲಾಗುತ್ತದೆ. ಜತೆಗೆ, ಗುಡಿ ಕೈಗಾರಿಕೆಗೆ ಉತ್ತೇಜನ ದೊರೆಯಲಿದೆ. ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಪ್ರೋತ್ಸಾಹಿಸಲಾಗುವುದು.
ಯಾವ ದೇಶ ಮೊದಲಿಗೆ ಪಡೆಯುತ್ತೆ ಕರೊನಾ ಲಸಿಕೆ? ಭಾರತಕ್ಕೂ ಖುಲಾಯಿಸುತ್ತೆ ಅದೃಷ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 6 =
Remember me
