ನವದೆಹಲಿ:ವಕ್ಫ್ ಮಂಡಳಿಯ ಅಧಿಕಾರ ಮತ್ತು ಅದರ ಕಾರ್ಯಚಟುವಟಿಕೆಗೆ ತಿದ್ದುಪಡಿ ಮಾಡುವ ಸಂಬಂಧ ಈ ವಾರ ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಮಸೂದೆಯನ್ನು ತರುವ ಸಾಧ್ಯತೆ ಇದೆ.
ಇದನ್ನೂ ಓದಿ:‘ಹರ್ ಘರ್ ತಿರಂಗ’ ಅಭಿಯಾನ: ರಾಷ್ಟ್ರಧ್ವಜದ ಜೊತೆ ಸೆಲ್ಫೀ ಕ್ಲಿಕ್ಕಿಸಿ ಅಪ್​ಲೋಡ್ ಮಾಡಲು ಅಮಿತ್ ಷಾ ಮನವಿ
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಮಾಡುವ ವಕ್ಫ್ ಮಂಡಳಿಯ ಅಧಿಕಾರಕ್ಕೆ ಕಡಿವಾಣ ಹಾಕಲು ಮುಂದಾಗಿದೆ ಎನ್ನಲಾಗಿದ್ದು, ಇದರಿಂದ ಶುಕ್ರವಾರ ಸಂಜೆ ಸಚಿವ ಸಂಪುಟವು ವಕ್ಫ್​ ಕಾಯಿದೆಯಲ್ಲಿ ಸುಮಾರು ಒಟ್ಟು 40 ತಿದ್ದುಪಡಿಗಳನ್ನು ಅಂಗೀಕರಿಸಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಪ್ರಸ್ತಾವಿತ ತಿದ್ದುಪಡಿಗಳ ಪ್ರಕಾರ, ವಕ್ಫ್ ಬೋರ್ಡ್ ಮಾಡಿದ ಆಸ್ತಿಗಳ ಮೇಲಿನ ಹಕ್ಕುಗಳ ಕಡ್ಡಾಯ ಪರಿಶೀಲನೆಯನ್ನು ಪ್ರಸ್ತಾಪಿಸಲಾಗುವುದು. ಅದೇ ರೀತಿ, ವಕ್ಫ್ ಮಂಡಳಿಯ ವಿವಾದಿತ ಆಸ್ತಿಗಳಿಗೆ ಕಡ್ಡಾಯ ಪರಿಶೀಲನೆಯನ್ನು ಪ್ರಸ್ತಾಪಿಸಲಾಗಿದೆ. ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ವಕ್ಫ್ ಬೋರ್ಡ್ ಹೆಚ್ಚು ಕ್ರಿಯಾಶೀಲವಾಗಿರುವ ಮತ್ತು ಸಾಕಷ್ಟು ಭೂಮಿ ಹೊಂದಿರುವ ಉತ್ತರ ಪ್ರದೇಶದಂತಹ ಪ್ರದೇಶಗಳಲ್ಲಿ ಈ ತಿದ್ದುಪಡಿ ನೇರ ಪರಿಣಾಮ ಬೀರುತ್ತದೆ ಎಂದು ತಜ್ಞರು ನಂಬಿದ್ದಾರೆ. 2013ರಲ್ಲಿ ಯುಪಿಎ ಸರ್ಕಾರ ಮೂಲ ವಕ್ಫ್​ ಕಾಯಿದೆಗೆ 1995 ತಿದ್ದುಪಡಿ ತಂದು ವಕ್ಫ್ ಮಂಡಳಿಗೆ ಹೆಚ್ಚಿನ ಅಧಿಕಾರ ನೀಡಿತ್ತು.
ವಕ್ಫ್ ಮಂಡಳಿಗಳು ಸುಮಾರು 940,000 ಎಕರೆಗಳಷ್ಟು ವ್ಯಾಪಿಸಿರುವ ಸುಮಾರುವಕ್ಫ್ ಮಂಡಳಿಯು ಸುಮಾರು 8.7 ಲಕ್ಷ ಆಸ್ತಿಗಳನ್ನು ಹೊಂದಿದೆ. ವಕ್ಫ್ ಕಾಯಿದೆ, 1995 ‘ಔಕಾಫ್’ (ಆಸ್ತಿಯನ್ನು ದೇಣಿಗೆ ನೀಡಿ ವಕ್ಫ್ ಎಂದು ಸೂಚಿಸಲಾಗುತ್ತದೆ) ನಿಯಂತ್ರಿಸಲು ಜಾರಿಗೊಳಿಸಲಾಗಿದ್ದು, ಮುಸ್ಲಿಂ ಕಾನೂನಿನಿಂದ ಪವಿತ್ರ, ಧಾರ್ಮಿಕ ಅಥವಾ ದತ್ತಿ ಎಂದು ಗುರುತಿಸಲ್ಪಟ್ಟ ಯಾವುದೇ ಉದ್ದೇಶಕ್ಕಾಗಿ ಆಸ್ತಿಯನ್ನು ಅರ್ಪಿಸಬಹುದು.
ಈ ಹಿಂದೆ, ಯಾವುದೇ ಆಸ್ತಿಗೆ ಹಕ್ಕು ಸಲ್ಲಿಸಲು ರಾಜ್ಯ ವಕ್ಫ್ ಮಂಡಳಿಗಳಿಗೆ ನೀಡಲಾದ ವ್ಯಾಪಕ ಅಧಿಕಾರವನ್ನು ಮತ್ತು ಹೆಚ್ಚಿನ ರಾಜ್ಯಗಳಲ್ಲಿ ಅಂತಹ ಆಸ್ತಿಯನ್ನು ಸಮೀಕ್ಷೆ ಮಾಡುವಲ್ಲಿ ವಿಳಂಬವನ್ನು ಸರ್ಕಾರವು ಗಮನಕ್ಕೆ ತೆಗೆದುಕೊಂಡಿತು. ಆಸ್ತಿಗಳ ದುರುಪಯೋಗವನ್ನು ತಡೆಗಟ್ಟಲು, ವಕ್ಫ್ ಆಸ್ತಿಗಳ ಮೇಲ್ವಿಚಾರಣೆಯಲ್ಲಿ ಜಿಲ್ಲಾಧಿಕಾರಿಗಳನ್ನು ಒಳಗೊಳ್ಳಲು ಸರ್ಕಾರವು ಪರಿಗಣಿಸಿದೆ. ಮೇಲ್ಮನವಿ ಪ್ರಕ್ರಿಯೆಯಲ್ಲಿನ ದೋಷಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕ್ಲಾಸ್ ತಪ್ಪಿಸಲು ಇಮೇಲ್ ಮೂಲಕ ಶಾಲೆಗೆ ಬಾಂಬ್ ಬೆದರಿಕೆ: 14 ವರ್ಷದ ಬಾಲಕನ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + twenty =
Remember me
