ನವದೆಹಲಿ:ಕರೊನಾ ಆತಂಕ ಇನ್ನೂ ಮರೆಯಾಗದಿರುವ​ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಮುಂಬರುವ ದಸರಾ ಹಬ್ಬದ ಸಂದರ್ಭದಲ್ಲಿ ಮುನ್ನೆಚ್ಚರಿಕೆಗಳೊಂದಿಗೆ ಹಬ್ಬ ಆಚರಿಸಿ ಎಂದು ಆಗ್ರಹಿಸಿದೆ. “ತ್ಯೋಹಾರ್​ ಭೀ, ಕೋವಿಡ್​-ಸೇಫ್​ ವ್ಯವಹಾರ್​ ಭೀ” ಎಂಬ ಘೋಷವಾಕ್ಯವನ್ನು ಪ್ರಕಟಿಸಿದೆ.
ಮುಂಬರುವ ಹಬ್ಬಗಳ ವೇಳೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರಗಳಿಗೆ ಅದಾಗಲೇ ಸವಿವರ ಎಸ್​ಒಪಿ ಜಾರಿಗೊಳಿಸಿರುವ ಕೇಂದ್ರ ಆರೋಗ್ಯ ಸಚಿವಾಲಯವು, “ಅನಗತ್ಯವಾಗಿ ಪ್ರಯಾಣ ಮಾಡಬೇಡಿ. ನಿಮ್ಮ ಬಂಧುಮಿತ್ರರೊಂದಿಗೆ ಹಬ್ಬದ ಆನ್​ಲೈನ್​ ಆಚರಣೆ ಮಾಡಿ” ಎಂದು ಸಾರ್ವಜನಿಕರಿಗೆ ಸಲಹೆ ನೀಡಿದೆ.
#IndiaFightsCorona:
📍COVID-Safe Festivities: त्यौहार भी, कोविड सेफ व्यवहार भी
– Secretary,@MoHFW_INDIA#Unite2FightCorona#StaySafeStayHealthypic.twitter.com/zBYxlB8VWD
— #IndiaFightsCorona (@COVIDNewsByMIB)September 30, 2021

ದೇಶದ ವಿವಿಧೆಡೆ ಜಿಲ್ಲೆವಾರು ಶೇ.5 ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವೆಡೆ ಮಾತ್ರ ನಿಯಮಿತ ಸಂಖ್ಯೆಯಲ್ಲಿ ಪೂರ್ವಾನುಮತಿಯೊಂದಿಗೆ ಜನ ಸೇರಲು ಅವಕಾಶ ನೀಡಬಹುದು. ಶೇ.5 ಕ್ಕಿಂತ ಹೆಚ್ಚು ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ ಮತ್ತು ಕಂಟೈನ್​ಮೆಂಟ್​ ಜೋನ್​ಗಳಲ್ಲಿ ಜನ ಸೇರುವುದನ್ನು ತಡೆಯಬೇಕು ಎಂದೂ ಹೇಳಿರುವ ಸಚಿವಾಲಯ, ನಿರ್ಬಂಧಗಳು ಮತ್ತು ವಿನಾಯಿತಿಗಳನ್ನು ಸಾಪ್ತಾಹಿಕ ಕರೊನಾ ಪಾಸಿಟಿವಿಟಿ ದರಗಳನ್ನು ಆಧರಿಸಿ ನಿರ್ಧರಿಸಬೇಕು ಎಂದು ಹೇಳಿದೆ.(ಏಜೆನ್ಸೀಸ್)
ಫ್ರಾನ್ಸ್​ ಮಾಜಿ ರಾಷ್ಟ್ರಪತಿ ನಿಕೋಲಸ್​ ಸರ್ಕೋಜಿಗೆ 1 ವರ್ಷ ಜೈಲು ಶಿಕ್ಷೆ

VIDEO| ಚಿರತೆಯೊಂದಿಗೆ ಮಹಿಳೆಯ ಸೆಣಸಾಟ! ಮೈನವಿರೇಳಿಸುತ್ತೆ ಈ ದೃಶ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
