ನವದೆಹಲಿ:ಕರೊನಾ ಪಿಡುಗು ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲಿ ಇರುವ ಕೇಂದ್ರ ಮತ್ತು ರಾಜ್ಯ ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯ ಸರ್ಕಾರಗಳಿಗೆ ಮುಂದಿನ 5 ವರ್ಷಗಳವರೆಗೆ 15 ಸಾವಿರ ಕೋಟಿ ರೂ. ನೆರವು ನೀಡಲು ನಿರ್ಧರಿಸಿದೆ.
ಕೇಂದ್ರ ಸರ್ಕಾರ ಬುಧವಾರ ಈ ನಿರ್ಧಾರ ಕೈಗೊಂಡಿದ್ದು, 15 ಸಾವಿರ ಕೋಟಿ ರೂ.ಗಳನ್ನು ಎಲ್ಲ ರಾಜ್ಯಗಳಿಗೂ ಸಮನಾಗಿ ಹಂಚಿ ಮೂರು ಹಂತಗಳಲ್ಲಿ ಬಿಡುಗಡೆ ಮಾಡಲಿದೆ. ಕೋವಿಡ್​ 19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆ ಸನ್ನದ್ಧತೆ ಪ್ಯಾಕೇಜ್​ (ಕೋವಿಡ್​-19 ಎಮರ್ಜೆನ್ಸಿ ರೆಸ್ಪಾನ್ಸ್​ ಆ್ಯಂಡ್​ ಹೆಲ್ತ್​ ಸಿಸ್ಟಂ ಪ್ರಿಪೇರ್ಡ್​ನೆಸ್​ ಪ್ಯಾಕೇಜ್​) ಎಂಬ ಹೆಸರಿನ ಈ ಪ್ಯಾಕೇಜ್​ ಅನ್ನು 2020 ಜನವರಿಯಿಂದ 2020 ಜೂನ್​, 2020ರ ಜುಲೈನಿಂದ 2021ರ ಮಾರ್ಚ್​ ಮತ್ತು 2021ರ ಏಪ್ರಿಲ್​ನಿಂದ 2024ರ ಮಾರ್ಚ್​ವರೆಗೆ ಅನುಷ್ಠಾನಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೋವಿಡ್​ 19 ಆಸ್ಪತ್ರೆಗಳ ಅಭಿವೃದ್ಧಿ, ಐಸಿಯುಗಳ ಅಭಿವೃದ್ಧಿ ಮತ್ತು ಆಕ್ಸಿಜನ್​ ಸಿಲಿಂಡರ್​ಗಳ ವ್ಯವಸ್ಥೆಗೆ ಈ ನಿಧಿಯ ಹಣವನ್ನು ಬಳಸಬಹುದಾಗಿದೆ.
ರಾಷ್ಟ್ರೀಯ ಆರೋಗ್ಯ ಮಿಷನ್​ನ ನಿರ್ದೇಶಕರು ಹೊರಡಿಸಿರುವ ಈ ಆದೇಶದ ಪ್ರಕಾರ ಈ ನಿಧಿಯ ಅನುದಾನವನ್ನು ಆಸ್ಪತ್ರೆಗಳು ಮತ್ತು ಆಂಬುಲೆನ್ಸ್​ಗಳನ್ನು ಸೋಂಕುನಿವಾರಕ ದ್ರಾವಣ ಸಿಂಪಡಿಸುವಿಕೆ, ಆಸ್ಪತ್ರೆಗಳಿಗೆ ಅಗತ್ಯವಾದ ವಸ್ತುಗಳ ಖರೀದಿ, ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇ) ಮತ್ತು ಎನ್​95 ಮಾಸ್ಕ್​ಗಳ ಖರೀದಿ, ಔಷಧಗಳ ಖರೀದಿ ಮತ್ತು ಜೈವಿಕ ಭದ್ರತೆಯ ಸಿದ್ಧತೆಗೆ ಬಳಸಬಹುದಾಗಿದೆ.
ಸಿದ್ಧ ಉಡುಪು, ಕರಕುಶಲ ವಸ್ತುಗಳು, ಚರ್ಮೋತ್ಪನ್ನಗಳ ರಫ್ತು ಆರ್ಡರ್​ ಶೇ.75 ರದ್ದು, 30 ಸಾವಿರ ಕೋಟಿ ರೂ. ಪರಿಹಾರಕ್ಕೆ ಕೇಂದ್ರಕ್ಕೆ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 12 =
Remember me
