ನವದೆಹಲಿ:ಪ್ರತಿ ಸರ್ಕಾರಿ ಶಾಲೆಯಲ್ಲೂ ಇಬ್ಬರು ಶಿಕ್ಷಕರು ಗುರುತಿಸಿ ಆರೋಗ್ಯ ಮತ್ತು ಕ್ಷೇಮ ರಾಯಭಾರಿಗಳನ್ನಾಗಿ ಮಾಡುವ ಹೊಸ ಯೋಜನೆಗೆ ಕೇಂದ್ರ ಸರ್ಕಾರ ಬುಧವಾರ ಚಾಲನೆ ನೀಡಿದೆ.
ಆರೋಗ್ಯಕ್ಕೆ ಸಂಬಂಧಿಸಿ ಮುನ್ನೆಚ್ಚರಿಕಾ ಅಂಶಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಈ ಯೋಜನೆಯದ್ದು. ಆಯುಷ್ಮಾನ್ ಭಾರತ್ ಯೋಜನೆ ಅಧೀನ ಶಾಲಾ ಆರೋಗ್ಯ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ರಾಯಭಾರಿಯನ್ನಾಗಿ ಗುರುತಿಸುವ ಕೆಲಸ ನಡೆಯಲಿದೆ. ಈ ಯೋಜನೆಯನ್ನು ಕೇಂದ್ರ ಆರೋಗ್ಯ ಸಚಿವಾಲಯ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯಗಳು ಒಟ್ಟಾಗಿ ನಿರ್ವಹಿಸುತ್ತಿವೆ.
ಈ ಯೋಜನೆಯನ್ನು ಫಿಟ್​ ಇಂಡಿಯಾ ಮೂವ್​ಮೆಂಟ್​, ಈಟ್ ರೈಟ್ ಕ್ಯಾಂಪೇನ್​, ಪೋಷಣ್ ಅಭಿಯಾನ್ ಸೇರಿ ಹಲವು ಅಭಿಯಾನಗಳ ಜತೆಗೆ ಜೋಡಿಸಲಾಗಿದೆ. ಇದು ಶಾಲೆಯಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ, ಅರೋಗ್ಯದ ಬಗ್ಗೆ ಕಾಳಜಿ ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ ಎಂದು ಕೇಂದ್ರ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ.
ಎನ್​ಸಿಇಆರ್​ಟಿ ಇದಕ್ಕಾಗಿ 24 ಗಂಟೆಗಳ ಕರಿಕುಲಂ ಸಿದ್ಧಪಡಿಸುತ್ತಿದ್ದು, ರಾಯಭಾರಿಯಾಗುವ ಶಿಕ್ಷಕರಿಗೆ ತರಬೇತಿಯೂ ಸಿಗಲಿದೆ. ಹರೆಯದ ಆರೋಗ್ಯ ಮತ್ತು ಇತರೆ ವಿಷಯಗಳ ಬಗ್ಗೆ ತರಬೇತಿ ನೀಡುವುದಕ್ಕಾಗಿ ಈಗಾಗಲೇ 40 ಪರಿಣತರನ್ನು ಗುರುತಿಸಿ ನ್ಯಾಷನಲ್ ರಿಸೋರ್ಸ್ ಗ್ರೂಪ್​ ರಚಿಸಲಾಗಿದೆ ಎಂದು ಡಾ. ಹರ್ಷವರ್ಧನ್ ತಿಳಿಸಿದ್ದಾರೆ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
