ನವದೆಹಲಿ:ಹೊಸ ಸಂಸತ್​ ಭವನದ ಉದ್ಘಾಟನೆ ಸ್ಮರಣಾರ್ಥ 75 ರೂಪಾಯಿಯ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವಾಲಯ ಗುರುವಾರ ತಿಳಿಸಿದೆ.
ಇದೇ ಭಾನುವಾರ ನೂತನ ಸಂಸತ್​ ಭವನ ಉದ್ಘಾಟನೆ ಆಗಲಿದೆ. 75 ರೂ. ವಿಶೇಷ ನಾಣ್ಯವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಭಾರತಕ್ಕೆ ಗೌರವ ಸೂಚಕವಾಗಿರಲಿದೆ.
ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭದ ಸಿಂಹದ ಲಾಂಛನ ಇರಲಿದ್ದು, ಅದರ ಕೆಳಗೆ ಸತ್ಯಮೇವ ಜಯತೆ ಎಂಬ ಪದಗಳಿರಲಿವೆ. ಎಡಭಾಗದಲ್ಲಿ “ಭಾರತ್” ಎಂಬ ಪದವನ್ನು ದೇವನಾಗರಿ ಲಿಪಿಯಲ್ಲಿ ಮತ್ತು ಬಲಭಾಗದಲ್ಲಿ “ಇಂಡಿಯಾ” ಎಂಬ ಪದವನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗುತ್ತದೆ. ರೂಪಾಯಿ ಚಿಹ್ನೆ ಮತ್ತು ಸಿಂಹದ ಲಾಂಛನದ ಕೆಳಗೆ ಅಂತಾರಾಷ್ಟ್ರೀಯ ಅಂಕಿಗಳಲ್ಲಿ 75ರ ಮುಖಬೆಲೆಯ ಮೌಲ್ಯವನ್ನೂ ಹೊಂದಿರಲಿದೆ.
ಇದನ್ನೂ ಓದಿ:ಒಂದೇ ರೋಲ್​ ನಂಬರ್, ಒಂದೇ ರ‍್ಯಾಂಕ್, ಮೊದಲ ಹೆಸರೂ ಕೂಡ ಒಂದೇ! ಏನಿದು ಯುಪಿಎಸ್​ಸಿಯ ನಿಗೂಢತೆ?
ನ್ಯಾಣದ ಮತ್ತೊಂದು ಬದಿಯಲ್ಲಿ ಸಂಸತ್​ ಸಂಕೀರ್ಣದ ಫೋಟೋ ಇರಲಿದೆ. ನಾಣ್ಯದ ಮೇಲಿನ ಪರಿಧಿಯಲ್ಲಿ ದೇವನಾಗರಿ ಲಿಪಿಯಲ್ಲಿ ಸಂಸದ್​ ಸಂಕುಲ್​ ಎಂದು ಹಾಗೂ ಕೆಳಗಿನ ಪರಿಧಿಯಲ್ಲಿ ಪಾರ್ಲಿಮೆಂಟ್​ ಕಾಂಪ್ಲೆಕ್ಸ್​ ಎಂದು ಇಂಗ್ಲಿಷ್​ನಲ್ಲಿ ಬರೆಯಲಾಗಿರುತ್ತದೆ.
ಈ ನಾಣ್ಯವು 44 ಮಿಲಿಮೀಟರ್ ವ್ಯಾಸವನ್ನು ಹೊಂದಿರುವ ವೃತ್ತಾಕಾರದಲ್ಲಿರುತ್ತದೆ ಮತ್ತು ಅದರ ಅಂಚುಗಳ ಉದ್ದಕ್ಕೂ 200 ತೋಡು ಅಂಚನ್ನು ಹೊಂದಿರುತ್ತದೆ ಹೊಂದಿರುತ್ತದೆ. 50% ಬೆಳ್ಳಿ, 40% ತಾಮ್ರ, 5% ನಿಕಲ್ ಮತ್ತು 5% ಸತುವನ್ನು ಒಳಗೊಂಡಿರುವ ನಾಲ್ಕ ಲೋಹಗಳ ಮಿಶ್ರಣದಿಂದ 35 ಗ್ರಾಂ ತೂಕದ ನಾಣ್ಯವನ್ನು ತಯಾರಿಸಲಾಗುತ್ತದೆ.
ಅಂದಹಾಗೆ ಹೊಸ ಸಂಸತ್​ ಭವನ ಮೇ 28 ಅಂದರೆ ಭಾನುವಾರ ಪ್ರಧಾನಿ ಮೋದಿ ಅವರಿಂದ ಉದ್ಘಾಟನೆ ಆಗಲಿದೆ. ಸುಮಾರು 25ಕ್ಕೂ ಪಕ್ಷಗಳು ಈ ಅದ್ಧೂರಿ ಸಮಾರಂಭಕ್ಕೆ ಸಾಕ್ಷಿಯಾಗಲಿವೆ. ಆದರೆ, ಸುಮಾರು 20 ವಿಪಕ್ಷಗಳು ಈ ಕಾರ್ಯಕ್ರಮವನ್ನು ಬಹಿಷ್ಕರಿಸಿವೆ.
ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಎಡಪಕ್ಷಗಳು, ತೃಣಮೂಲ ಮತ್ತು ಸಮಾಜವಾದಿ ಪಕ್ಷಗಳು ಕಾರ್ಯಕ್ರಮವನ್ನು ಬಹಿಷ್ಕರಿಸಿವೆ. ಪ್ರಜಾಪ್ರಭುತ್ವದ ಆತ್ಮವನ್ನೇ ಹೀರಿರುವಾಗ ಹೊಸ ಸಂಸತ್​ ಭವನದಲ್ಲಿ ಯಾವುದೇ ಮೌಲ್ಯಗಳು ಕಾಣುತ್ತಿಲ್ಲ. ಹೀಗಾಗಿ ಸಮಾರಂಭವನ್ನು ಬಹಿಷ್ಕರಿಸುತ್ತಿದ್ದೇವೆ ಎಂದು ವಿಪಕ್ಷಗಳು ಹೇಳಿವೆ. ಅಲ್ಲದೆ, ರಾಷ್ಟ್ರಪತಿ ಬದಲು ಪ್ರಧಾನಿ ಮೋದಿ ಅವರಿಂದ ಸಂಸತ್​ ಭವನ ಉದ್ಘಾಟನೆ ಮಾಡಿಸುತ್ತಿರುವುದು ವಿಪಕ್ಷಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಬೆಳಗಾಗುವಷ್ಟರಲ್ಲಿ ಕೋಟ್ಯಧಿಪತಿಯಾದ ಕೂಲಿ ಕಾರ್ಮಿಕ; 17 ರೂ. ಇದ್ದ ಬ್ಯಾಂಕ್ ಖಾತೆಯಲ್ಲೀಗ 100 ಕೋಟಿ ರೂ.!
ಪ್ರತಿಪಕ್ಷಗಳ ಮೇಲೆ ತೀವ್ರ ಪ್ರತಿದಾಳಿ ನಡೆಸಿರುವ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ), ನೂತನ ಸಂಸತ್​ ಭವನ ಉದ್ಘಾಟನೆಯನ್ನು ಬಹಿಷ್ಕರಿಸುವ ನಿರ್ಧಾರವು “ನಮ್ಮ ಮಹಾನ್ ರಾಷ್ಟ್ರದ ಪ್ರಜಾಸತ್ತಾತ್ಮಕ ನೀತಿ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಮಾಡಿದ ಘೋರ ಅಪಹಾಸ್ಯ ಎಂದು ಕಿಡಿಕಾರಿದೆ.(ಏಜೆನ್ಸೀಸ್​)
ಸಂಪಾದಕೀಯ | ಅರ್ಹರಿಗಷ್ಟೆ ಸಿಗಲಿ; ಬಿಪಿಎಲ್ ಕಾರ್ಡಿಗೆ ಹೆಚ್ಚಿದ ಬೇಡಿಕೆ

ಯೋಗ ಕ್ಷೇಮ | ಜೈನದರ್ಶನದ ಮೂಲಾಧಾರ ಯಮ-ನಿಯಮ

ರಿಯಲ್​ ಎಸ್ಟೇಟ್​ ಉದ್ಯಮಿ ಸೇರಿ ಡಬಲ್​ ಮರ್ಡರ್​: ಬೆಚ್ಚಿಬಿದ್ದ ಧಾರವಾಡದ ಜನತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 2 =
Remember me
