ನವದೆಹಲಿ:ಕಳೆದ ವರ್ಷ ಕರ್ನಾಟಕ ಚುನಾವಣೆಯ ಮೊದಲು ಸಂಚಾರಕ್ಕೆ ಮುಕ್ತವಾದ ಆರು ಪಥಗಳ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಸ್ತೆ ಸುರಕ್ಷತಾ ಕ್ರಮಗಳಿಗಾಗಿ 688 ಕೋಟಿ ರೂಪಾಯಿ ವೆಚ್ಚ ಮಾಡಲು ಕೇಂದ್ರ ನಿರ್ಧರಿಸಿದೆ. ಈ ಹೊಸ ಹೆದ್ದಾರಿಯಲ್ಲಿ ರಸ್ತೆ ಅಪಘಾತಗಳ ಸರಣಿಯ ನಂತರ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಇತ್ತೀಚೆಗೆ ಎಕ್ಸ್‌ಪ್ರೆಸ್‌ವೇ ಸಮೀಕ್ಷೆಯನ್ನು ಪೂರ್ಣಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸುರಕ್ಷತಾ ಕ್ರಮಗಳಿಗಾಗಿ ಬಿಡ್‌ಗಳನ್ನು ಆಹ್ವಾನಿಸಿದೆ.
ಸಮೀಕ್ಷೆಯ ಸಮಯದಲ್ಲಿ ಕಂಡುಬಂದಿರುವ ಅಪಾಯಕಾರಿ ತಾಣಗಳು, ಗ್ರೇಡಿಯಂಟ್ ಸಮಸ್ಯೆಗಳು ಮುಂತಾದವುಗಳನ್ನು ಸರಿಪಡಿಸಿಲು ಹೆಚ್ಚಿನ ಬೆಳಕು, ಪಾದಚಾರಿ ಮೇಲ್ಸೇತುವೆಗಳು, ಎಚ್ಚರಿಕೆ ಫಲಕಗಳು, ಹೆಡ್‌ಲೈಟ್ ಪ್ರತಿಫಲಕಗಳು, ರಸ್ತೆ ಗುರುತುಗಳು, ಗಾರ್ಡ್ ರೈಲ್‌ಗಳು, ಕ್ರ್ಯಾಶ್ ಬ್ಯಾರಿಯರ್‌ಗಳು ಹೆದ್ದಾರಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.
ಬೆಂಗಳೂರು-ಮೈಸೂರು ಹೆದ್ದಾರಿಯ ಸುರಕ್ಷತಾ ತಪಾಸಣೆ ನಡೆಸಲು ಎನ್‌ಎಚ್‌ಎಐ ಕಳೆದ ವರ್ಷ ರಸ್ತೆ ಸುರಕ್ಷತಾ ತಜ್ಞರ ಸಮಿತಿಯನ್ನು ರಚಿಸಿತ್ತು. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ದೆಹಲಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದರು.
ಮಾರ್ಚ್ 2023 ರಲ್ಲಿ ಉದ್ಘಾಟನೆಗೊಂಡ 118-ಕಿಮೀ ಉದ್ದದ ಬೆಂಗಳೂರು-ಮೈಸೂರು ಹೆದ್ದಾರಿಯು ಕರ್ನಾಟಕದ ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಅಂದಾಜು ಅರ್ಧದಿಂದ ಕೇವಲ 75 ನಿಮಿಷಗಳವರೆಗೆ ಕಡಿತಗೊಳಿಸಿದೆ. ಆದರೂ, ಇದು ಹಲವಾರು ರಸ್ತೆ ಅಪಘಾತಗಳಿಗೆ ಕಾರಣವಾಗಿದೆ. 100 ಕಿಮೀ/ಗಂಟೆಯ ವೇಗದಲ್ಲಿ ವಾಹನ ಚಲಾಯಿಸುವ ವಾಹನ ಚಾಲಕರಿಗೆ ದಂಡ ವಿಧಿಸಲು ಕೆಲವು ತಿಂಗಳ ನಂತರ ಎಐ ಆಧಾರಿತ ವೇಗ ಪತ್ತೆಕಾರಕಗಳನ್ನು ಸ್ಥಾಪಿಸಲಾಗಿದೆ, ಇದು ಅಪಘಾತಗಳ ಸಂಖ್ಯೆಯನ್ನು ಕಡಿಮೆಗೊಳಿಸಿದೆ. ರಾಜ್ಯದಲ್ಲಿ ಹಿಂದಿನ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರವು ಚುನಾವಣೆಗೆ ಮುನ್ನ ತರಾತುರಿಯಲ್ಲಿ ಈ ಯೋಜನೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದು, ಸಾಕಷ್ಟು ರಸ್ತೆ ಸುರಕ್ಷತಾ ಕ್ರಮಗಳನ್ನು ಜಾರಿಗೆ ತಂದಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು.
ಕಳೆದ ಜುಲೈನಲ್ಲಿ ಲೋಕಸಭೆಯಲ್ಲಿ ಉತ್ತರಿಸಿದ ಕೇಂದ್ರ ಸರ್ಕಾರವು, ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಜನವರಿ 2023 ರಲ್ಲಿ ಸಂಚಾರಕ್ಕೆ ತೆರೆಯಲಾಗಿದ್ದು, ಜುಲೈ ಅಂತ್ಯದ ವೇಳೆಗೆ 121 ಸಾವುಗಳು ಮತ್ತು 400 ಅಪಘಾತಗಳನ್ನು ಕಂಡಿದೆ ಎಂದು ಹೇಳಿತ್ತು.
ಕರ್ನಾಟಕ ಸರ್ಕಾರದ ಪ್ರಕಾರ, ಹೆಚ್ಚಿನ ಅಪಘಾತಗಳು ಅತಿವೇಗದ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಆಗಿವೆ. ಜುಲೈನಿಂದ ಸಾವುಗಳು ಮತ್ತು ಅಪಘಾತಗಳು ಕಡಿಮೆಯಾಗಿವೆ. ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳನ್ನು ಹೆದ್ದಾರಿಯಲ್ಲಿ ಓಡಿಸುವುದನ್ನು ಆಗಸ್ಟ್ 1 ರಿಂದ ಎನ್​ಎಚ್​ಎಐ ನಿಷೇಧಿಸಿದೆ.

ಸುಪ್ರೀಂ ಕೋರ್ಟ್​ನ ತೀರ್ಪು ‘ಅಪರಾಧಿಗಳ ಪೋಷಕ’ ಯಾರೆಂಬುದನ್ನು ತಿಳಿಸಿದೆ: ಬಿಲ್ಕಿಸ್​ ಬಾನೊ ಪ್ರಕರಣದಲ್ಲಿ ರಾಹುಲ್​ ವಾಗ್ದಾಳಿ

ಬಾಂಗ್ಲಾದೇಶ ಚುನಾವಣೆಯಲ್ಲಿ ಆವಾಮಿ ಲೀಗ್​ಗೆ ಜಯ: ನಾಲ್ಕನೇ ಬಾರಿ ಪ್ರಧಾನಿಯಾಗಲಿದ್ದಾರೆ ಶೇಖ್ ಹಸೀನಾ

ಲಾಟರಿಯಲ್ಲಿ ಹಣ ಗಳಿಸಲು ಲಕ್​ ಇರಲೇಬೇಕೆಂದಿಲ್ಲ: ಚಲನಚಿತ್ರ ಕಥೆಗೆ ಸ್ಫೂರ್ತಿಯಾದ ದಂಪತಿ ರೂ. 200 ಕೋಟಿ ಗಳಿಸಿದ್ದು ಹೀಗೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 2 =
Remember me
