ನವದೆಹಲಿ:ಮಾಜಿ ಪ್ರಧಾನಿ ರಾಜೀವ್​ ಗಾಂಧಿ (Rajiv Gandhi) ಹತ್ಯೆ ಪ್ರಕರಣದ ಎಲ್ಲ ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿರುವ ಆದೇಶವನ್ನು ಮರು ಪರಿಶೀಲನೆ ಮಾಡುವಂತೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಗುರುವಾರ (ನ.17) ಮೇಲ್ಮನವಿ ಸಲ್ಲಿಸಿದೆ.
ಅಪರಾಧಿಗಳಾದ ನಳಿನಿ, ಸಂತನ್, ಮುರುಗನ್, ಶ್ರೀಹರನ್, ರಾಬರ್ಟ್ ಪಯಸ್ ಮತ್ತು ರವಿಚಂದ್ರನ್​ರನ್ನು ಕಳೆದ ಶುಕ್ರವಾರ (ನ.11) ಬಿಡುಗಡೆ ಮಾಡಿ ಸುಪ್ರೀಂಕೋರ್ಟ್​ ಆದೇಶ ಹೊರಡಿಸಿತ್ತು. ಜೈಲಿನಿಂದ ಬಿಡುಗಡೆಯಾದ ಕೆಲವೇ ದಿನಗಳ ಬೆನ್ನಲ್ಲೇ ಆದೇಶವನ್ನು ಮರು ಪರಿಶೀಲನೆ ಮಾಡುವಂತೆ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.
ಸಮರ್ಪಕವಾಗಿ ವಿಚಾರಣೆಗೆ ಒಳಪಡಿಸದೆ ಅಪರಾಧಿಗಳ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರವು ವಾದಿಸಿದೆ. ಅಪರಾಧಿಗಳ ಬಿಡುಗಡೆಯು ನ್ಯಾಯದ ಸ್ಪಷ್ಟವಾದ ಉಲ್ಲಂಘನೆಗೆ ಕಾರಣವಾಗಿದೆ ಮತ್ತು ವಾಸ್ತವವಾಗಿ, ನ್ಯಾಯದ ತಪ್ಪಿಗೆ ಕಾರಣವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಲ್ಲದೆ, ಇಂತಹ ಸೂಕ್ಷ್ಮ ವಿಷಯವು ದೇಶದ ಸಾರ್ವಜನಿಕ ಶಾಂತಿ ಸುವ್ಯವಸ್ಥೆ, ಕ್ರಿಮಿನಲ್ ಹಾಗೂ ನ್ಯಾಯ ವ್ಯವಸ್ಥೆಯ ಮೇಲೆ ಭಾರಿ ಪರಿಣಾಮಗಳನ್ನು ಬೀರುವುದರಿಂದ ಭಾರತದ ಒಕ್ಕೂಟದ ಸಹಾಯವು ಅತ್ಯಂತ ಮಹತ್ವದ್ದಾಗಿದೆ ಎಂದು ಸರ್ಕಾರ ಹೇಳಿದೆ.
ಅಂದಹಾಗೆ ಪ್ರಕರಣದ ಎಲ್ಲ ಏಳು ಹಂತಕರನ್ನು ಬಿಡಗಡೆ ಮಾಡಬೇಕೆಂದು ತಮಿಳುನಾಡು (Tamil Nadu) ಸರ್ಕಾರ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ರಾಜ್ಯಪಾಲರು ಸಹ ಇದಕ್ಕೆ ಒಪ್ಪಿಗೆ ನೀಡಿದ್ದರು. ಇದರ ಆಧಾರದ ಮೇಲೆ ಹಂತಕರನ್ನು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್​ ಕಳೆದ ಶುಕ್ರವಾರ ಆದೇಶಿಸಿದೆ. ಹಂತಕಿ ನಳಿನಿ ಶ್ರೀಹರನ್​ ಸೇರಿದಂತೆ ಆರು ಹಂತಕರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಇದೀಗ ಸುಪ್ರೀಂಕೋರ್ಟ್​ ತೀರ್ಪಿನಿಂದ ನಿರಾಳರಾಗಿದ್ದಾರೆ.
1991, ಮೇ 21ರಂದು ತಮಿಳುನಾಡಿನ ಶ್ರೀಪೆರಂಬುದುರ್​ನಲ್ಲಿ ಮಹಿಳೆಯೊಬ್ಬಳು ನಡೆಸಿದ ಆತ್ಮಾಹುತಿ ಬಾಂಬ್​ ದಾಳಿಯಲ್ಲಿ ರಾಜೀವ್​ ಗಾಂಧಿ ಹತರಾದರು. ಅಲ್ಲದೆ, ಇತರೆ 21 ಮಂದಿಯು ಕೂಡ ಪ್ರಾಣ ಕಳೆದುಕೊಂಡರು. ಈ ದಾಳಿಯ ಹಿಂದೆ ಎಲ್​ಟಿಟಿಇ ಸಂಘಟನೆ ಕೈವಾಡ ಇತ್ತು. ಈ ಪ್ರಕರಣದಲ್ಲಿ 7 ಮಂದಿಯನ್ನು ಬಂಧಿಸಿ, ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.(ಏಜೆನ್ಸೀಸ್​)
ರಾಜೀವ್​ ಗಾಂಧಿ ಹತ್ಯೆ ಪ್ರಕರಣದ ಎಲ್ಲ ಹಂತಕರನ್ನು ಜೈಲಿನಿಂದ ಬಿಡುಗಡೆ ಮಾಡಲು ಸುಪ್ರೀಂಕೋರ್ಟ್ ಆದೇಶ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 1 =
Remember me
