ನವದೆಹಲಿ:ಚೀನಾದಲ್ಲಿ ಕರೊನಾ ವೈರಸ್​ ತಾಂಡವ ಆಡುತ್ತಿರುವ ಬೆನ್ನಲ್ಲೇ ಎಚ್ಚೆತ್ತಿರುವ ಕೇಂದ್ರ ಸರ್ಕಾರ ಇಂದು ಮಹತ್ವದ ಸಭೆ ಕರೆದಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್​ ಮಾಂಡವಿಯಾ ಅವರು ಉನ್ನತ ಅಧಿಕಾರಿಗಳು ಮತ್ತು ತಜ್ಞರ ಸಮ್ಮುಖದಲ್ಲಿ ಪರಿಶೀಲನಾ ಸಭೆ ನಡೆಸಲಿದ್ದು, ಕೋವಿಡ್​ -19 ಸಾಂಕ್ರಮಿಕ ಸ್ಥಿತಿಯನ್ನು ನಿಭಾಯಿಸಲು ಚರ್ಚೆ ನಡೆಸಲಿದ್ದಾರೆ.
ಎಲ್ಲಾ ಕೋವಿಡ್ ಪಾಸಿಟಿವ್ ಪ್ರಕರಣಗಳ ಮಾದರಿಗಳನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಗುರುತಿಸಲಾದ INSACOG ಜೀನೋಮ್ ಸೀಕ್ವೆನ್ಸಿಂಗ್ ಲ್ಯಾಬ್‌ಗಳಿಗೆ ಪ್ರತಿದಿನ ಕಳುಹಿಸಬೇಕು ಎಂದು ಸರ್ಕಾರ ಹೇಳಿದೆ. ಭಾರತದಲ್ಲಿ ಕೋವಿಡ್‌ನ ವಿವಿಧ ತಳಿಗಳನ್ನು ಅಧ್ಯಯನ ಮಾಡಲು ಮತ್ತು ಮೇಲ್ವಿಚಾರಣೆ ಮಾಡಲು INSACOG ಆರೋಗ್ಯ ಸಚಿವಾಲಯದ ಅಡಿಯಲ್ಲಿ ಒಂದು ವೇದಿಕೆಯಾಗಿದೆ.
ಜಪಾನ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ರಿಪಬ್ಲಿಕ್ ಆಫ್ ಕೊರಿಯಾ, ಬ್ರೆಜಿಲ್ ಮತ್ತು ಚೀನಾದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಹಠಾತ್ ಉಲ್ಬಣಗೊಂಡಿದ್ದು, ರೂಪಾಂತರಗಳನ್ನು ಪತ್ತೆಹಚ್ಚಲು ಪಾಸಿಟಿವ್ ಪ್ರಕರಣದ ಮಾದರಿಗಳ ಸಂಪೂರ್ಣ ಜೀನೋಮ್ ಅನುಕ್ರಮ ಸಜ್ಜುಗೊಳಿಸುವುದು ಅತ್ಯಗತ್ಯ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಎಲ್ಲಾ ರಾಜ್ಯಗಳಿಗೆ ಪತ್ರದ ಮೂಲಕ ಎಚ್ಚರಿಕೆಯನ್ನು ನೀಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 112 ಹೊಸ ಕರೊನಾ ಪ್ರಕರಣಗಳು ವರದಿಯಾಗಿದೆ. ಸೋಮವಾರ 181 ಪ್ರಕರಣಗಳು ವರದಿಯಾಗಿದ್ದವು. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 3,490 ಇದೆ. ಕಳೆದ 24 ಗಂಟೆಗಳಲ್ಲಿ ಮೂರು ಸಾವುಗಳು ದಾಖಲಾಗಿವೆ. ಕೇರಳದಿಂದ ಇಬ್ಬರು ಮತ್ತು ಮಹಾರಾಷ್ಟ್ರದಿಂದ ಒಬ್ಬರು ಮೃತಪಟ್ಟಿದ್ದಾರೆ.
ಇನ್ನು ಚೀನಾದಲ್ಲಿ ಭಾರೀ ಪ್ರತಿಭಟನೆಯ ಬಳಿಕ ಕರೊನಾ ನಿರ್ಬಂಧವನ್ನು ಸಂಪೂರ್ಣ ಸಡಿಸಲಾಗಿದೆ. ಇದೀಗ ಕರೊನಾ ತಾಂಡವಾಡುತ್ತಿದ್ದ, ಸಾಕಷ್ಟು ಮಂದಿ ಈಗಾಗಲೇ ಮೃತಪಟ್ಟಿದ್ದಾರೆ. ಚಿತಾಗಾರಗಳಲ್ಲಿ ಶವಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕರೊನಾ ನಿರ್ಬಂಧ ಸಡಿಲಿಸಿದ ಬೆನ್ನಲ್ಲೇ ಕರೊನಾ ಆರ್ಭಟ ಹೆಚ್ಚಿರುವುದು ಆತಂಕಕ್ಕೆ ಕಾರಣವಾಗಿದೆ.
ಆಸ್ಪತ್ರೆಗೆ ಬರುತ್ತಿರುವ ಕರೊನಾ ಸೋಂಕಿತರ ಸಂಖ್ಯೆಯು ಹೆಚ್ಚಾಗುತ್ತಿದೆ. ಅದರಲ್ಲೂ ಚೀನಾ ರಾಜಧಾನಿ ಬೀಜಿಂಗ್​ನಲ್ಲಿ ಕರೊನಾ ನಿಯಂತ್ರಣಕ್ಕೆ ಸಿಗದೇ ತುಂಬಾ ವೇಗವಾಗಿ ಹರಡುತ್ತಿದೆ. ಚೀನಾದಲ್ಲಿ ಮತ್ತೊಮ್ಮೆ ಕಠಿಣ ನಿಯಮ ಜಾರಿಯಾಗುವ ಸಾಧ್ಯತೆ ದಟ್ಟವಾಗಿದೆ.(ಏಜೆನ್ಸೀಸ್​)
ಬೆಂಗ್ಳೂರಿನಲ್ಲಿ ಟೆಕ್ಕಿ ವಿಚಿತ್ರ ಸಾವು: ಸಾರ್ವಜನಿಕರ ನೆರವಿನಿಂದ ಕಾರಿಗೆ ಹೊದಿಕೆ ಹೊದಿಸಿದ ಬಳಿಕ ದುರಂತ ಸಾವು

PSI ನೇಮಕಾತಿ ಹಗರಣ ಮೀರಿಸುವಂತಿದೆ ಈ ಬೆಸ್ಕಾಂ ಹಗರಣ: ಅನುಕಂಪದ ಆಧಾರದಲ್ಲಿ 6 ಜನ ನಕಲಿಗಳಿಗೆ ನೌಕರಿ!

ಮೈಮಾಟ ಪ್ರದರ್ಶಿಸಲು ಹೋಗಿ ಎಡವಟ್ಟು: ದುಬೈನಲ್ಲಿ ಬೋಲ್ಡ್​ ಬ್ಯೂಟಿ ಉರ್ಫಿ ಜಾವೇದ್​ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − nine =
Remember me
