ನವದೆಹಲಿ:ಟಿ20 ವಿಶ್ವಚಾಂಪಿಯನ್​ ಆದ ಐದು ಬಳಿಕ ಟೀಮ್​ ಇಂಡಿಯಾ ಆಟಗಾರರು ಸಿಬ್ಬಂದಿ ತಾಯ್ನಾಡಿಗೆ ಮರಳಿದ್ದು, ಭರ್ಜರಿ ಸ್ವಾಗತ ದೊರೆತಿದೆ. ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಆಟಗಾರರು ಆ ಬಳಿಕ ಮುಂಬೈನಲ್ಲಿ ನಡೆದ ವಿಜಯೋತ್ಸವ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಪ್ರಧಾನಿ ಮೋದಿ ಜೊತೆ ಆಟಗಾರರು ಮಾತುಕತೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ ಆಡಿರುವ ಮಾತು ಎಲ್ಲರ ಗಮನ ಸೆಳೆಯುತ್ತಿದೆ.
ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ ಟ್ರೋಫಿ ಪಡೆಯುವ ವಿಶೇಷವಾಗಿ ಹೆಜ್ಜೆ ಹಾಕಿದ್ದರು. ಈ ವೇಳೆ ಆಟಗಾರರು ಅವರಿಗೆ ಸಾಥ್​ ನೀಡಿದರು. ಈ ಬಗ್ಗೆ ಪ್ರಧಾನಿ ಮೋದಿ ಕೇಳಿದಾಗ ರೋಹಿತ್​ ಶರ್ಮ ನೀಡಿರುವ ಉತ್ತರ ಸಖತ್​ ವೈರಲ್​ ಆಗುತ್ತಿದ್ದು, ಇದಕ್ಕೆ ಕಾರಣಕರ್ತರಾದವರ ಹೆಸರನ್ನು ಹಿಟ್​ಮ್ಯಾನ್​ ತಿಳಿಸಿದ್ದಾರೆ.
Story behind that iconic dance of Rohit Sharma revealed. 😂😂pic.twitter.com/jNNFDUpbhl
ಇದನ್ನೂ ಓದಿ:ತನ್ನನ್ನು ಕಚ್ಚಿದ ಹಾವನ್ನು ತಿರುಗಿ ಕಡಿದ ವ್ಯಕ್ತಿ; ಇಬ್ಬರ ಕಚ್ಚಾಟದಲ್ಲಿ ಗೆದ್ದಿದ್ದು ಯಾರು ಗೊತ್ತಾ?
ಇದು ನಮ್ಮ ಪಾಲಿಗೆ ಮಹತ್ತರ ಕ್ಷಣವಾಗಿತ್ತು. ನಾವು ಇದಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದೆವು. ಸಹಜವಾಗಿಯೇ ವೇದಿಕೆಯತ್ತ ನಡೆದುಕೊಂಡು ಹೋಗಬೇಡ. ಏನನ್ನಾದರೂ ವಿಭಿನ್ನವಾಗಿ ಪ್ರಯತ್ನಿಸು ಎಂದು ಸಹ ಆಟಗಾರರು ಸಲಹೆ ನೀಡಿದರು. ಇದು ಚಾಹಲ್ ಅವರ ಸಲಹೆಯಾಗಿತ್ತೇ ಎಂದು ಪ್ರಧಾನಿ ಕೇಳಿದರು. ಇದಕ್ಕೆ ನಗುಮುಖದಿಂದಲೇ ರೋಹಿತ್, ಹೌದು ಚಾಹಲ್ ಹಾಗೂ ಕುಲದೀಪ್ ಅವರು ಸಲಹೆ ನೀಡಿದ್ದರು ಎಂದು ತಿಳಿಸಿದರು.
ಇದಕ್ಕೆ ಮಾತನಾಡಿದ ಕುಲದೀಪ್​ ನಾನು ಹೇಳಿಕೊಟ್ಟಂತೆ ರೋಹಿತ್​ ಶರ್ಮಾ ಅವರು ಮಾಡಲಿಲ್ಲ ಎಂದು ಹೇಳಿದಾಗ ಪ್ರಧಾನಿ ಸೇರಿದಂತೆ ಆಟಗಾರರು ನಕ್ಕಿದ್ದು, ಈ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. ಕೆಲವರು ಇದನ್ನು ಕಾಪಿ ಎಂದು ಆರೋಪಿಸಿದ್ದು, ಯಾವುದಾದರೇನು ವೈರಲ್​ ಆಗಿದ್ದೀಯಲ್ಲ ಎಂದು ನೆಟ್ಟಿಗರು ಕಮೆಂಟ್​ ಹಾಕಿದ್ದಾರೆ.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:19 − 6 =
Remember me
