ನವದೆಹಲಿ:ಯಶಸ್ಸು… ಇದು ಕೇಳಲು ಮತ್ತು ಓದಲು ಮೂರು ಅಕ್ಷರದ ಪದ. ಆದರೆ, ಅದನ್ನು ಪಡೆಯಲು ಸಾಕಷ್ಟು ಶ್ರಮಿಸಬೇಕು. ಅಲ್ಲದೆ, ಈ ಯಶಸ್ಸನ್ನು ಸಾಧಿಸಲು ಹಲವಾರು ಅವಮಾನಗಳು, ಅಡೆತಡೆಗಳು ಮತ್ತು ಮಾನಸಿಕ ಸಂಘರ್ಷಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಂಗತಿಗಳನ್ನು ಧೈರ್ಯವಾಗಿ ಎದುರಿಸಿ ಯಶಸ್ಸಿನತ್ತ ಹೆಜ್ಜೆ ಹಾಕುವವರು ಬಹಳ ಕಡಿಮೆ. ಅಂಥವರು ಮಾತ್ರ ಸಮಾಜದಲ್ಲಿ ಜನಮನ್ನಣೆ ಪಡೆಯುತ್ತಾರೆ. ಅಂದುಕೊಂಡಿದ್ದನ್ನು ಸಾಧಿಸಿದಾಗ ಆ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಇತ್ತೀಚೆಗಷ್ಟೇ ಚಹಾ ಮಾರುವವನ ಮಗಳು ಸುಮಾರು 10 ವರ್ಷಗಳ ಬಳಿಕ ಸಿಎ ಪರೀಕ್ಷೆ ಪಾಸ್​ ಮಾಡಿದ್ದಾಳೆ. ಇದೇ ಖುಷಿಯಲ್ಲಿ ತನ್ನ ತಂದೆಯನ್ನು ಬಿಗಿದಪ್ಪಿ ಕಣ್ಣೀರಾಕುತ್ತಾ ಭಾವುಕಳಾದಳು. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೇಶದಲ್ಲಿ ನಡೆಸಲಾಗುವ ಕಠಿಣ ಪರೀಕ್ಷೆಗಳಲ್ಲಿ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪರೀಕ್ಷೆಯು ಒಂದು. ಅನೇಕ ಜನರು ಈ ಪರೀಕ್ಷೆಯನ್ನು ಪಾಸ್​ ಮಾಡಲು ಪ್ರಯತ್ನಿಸುತ್ತಾರೆ. ನಾಲ್ಕೈದು ವರ್ಷ ಪ್ರಯತ್ನಿಸಿ ವಿಫಲರಾದಾಗ ಅದನ್ನು ಅಲ್ಲಿಗೆ ಬಿಟ್ಟುಬಿಡುತ್ತಾರೆ. ಆದರೆ ಇಲ್ಲೊಬ್ಬ ಯುವತಿ ಪಟ್ಟುಬಿಡದೆ, ಎಷ್ಟೋ ಅವಮಾನಗಳನ್ನು ಎದುರಿಸಿ, ಅಪ್ಪನ ನಂಬಿಕೆಯನ್ನು ಉಳಿಸಿಕೊಳ್ಳಲು ಸುಮಾರು 10 ವರ್ಷಗಳ ಕಾಲ ನಿರಂತರವಾಗಿ ಶ್ರಮಿಸಿ ಕೊನೆಗೂ ಯಶಸ್ಸಿನ ತುದಿ ತಲುಪಿದ್ದಾಳೆ. ದೆಹಲಿ ಮೂಲದ ಅಮಿತಾ ಪ್ರಜಾಪತಿ ಹತ್ತು ವರ್ಷಗಳ ನಂತರ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಾಳೆ.
ಸಿಎ ಪರೀಕ್ಷೆಯನ್ನು ಪಾಸ್​ ಮಾಡಿದ ಖುಷಿಯಲ್ಲಿ ಅಮಿತಾ, ತನ್ನ ತಂದೆಯನ್ನು ಬಿಗಿದಪ್ಪಿ ಕಣ್ಣೀರಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ವಿಡಿಯೋಗೆ ಲಕ್ಷಗಟ್ಟಲೆ ಲೈಕ್‌ಗಳು ಹಾಗೂ ಸಾವಿರಾರು ಕಾಮೆಂಟ್‌ಗಳು ಹರಿದು ಬರುತ್ತಿವೆ. ಅಮಿತಾ ಅವರ ತಂದೆ ಟೀ ಅಂಗಡಿ ನಡೆಸುತ್ತಿದ್ದಾರೆ. ಆ ಅಂಗಡಿಯ ಸಂಪಾದನೆಯಿಂದಲೇ ಜೀವನ ನಡೆಸುತ್ತಿದ್ದಾರೆ. ಅಮಿತಾ ಅವರ ಮನೆ ಸಹ ಉತ್ತಮ ಸ್ಥಿತಿಯಲ್ಲಿ ಇಲ್ಲ. ಆರ್ಥಿಕ ಸಮಸ್ಯೆ ಇದ್ದರೂ ಅಮಿತಾಳ ತಂದೆ ಆಕೆ ಸಿಎ ಓದುವುದನ್ನು ತಡೆಯಲಿಲ್ಲ. ಹಲವು ಬಾರಿ ಸಿಎ ಪರೀಕ್ಷೆಯಲ್ಲಿ ಅನುತ್ತೀರ್ಣಳಾದರು ಕೂಡ ಪ್ರೋತ್ಸಾಹಿಸಿ, ಧೈರ್ಯ ತುಂಬುವ ಮೂಲಕ ಮಾದರಿ ತಂದೆ ಎನಿಸಿಕೊಂಡಿದ್ದಾರೆ.
ಅಮಿತಾ ಸಿಎ ಪರೀಕ್ಷೆಯಲ್ಲಿ ಪದೇಪದೆ ಫೇಲ್ ಆಗುವುದನ್ನು ಕಂಡು ಆಕೆಯ ಸಂಬಂಧಿಕರು, ಸಹೋದ್ಯೋಗಿಗಳು ಗೇಲಿ ಮಾಡುತ್ತಿದ್ದರು. ಅಂತಹ ಸಂದರ್ಭದಲ್ಲೂ ಅಮಿತಾಳ ತಂದೆ ಆಕೆಯ ಧೈರ್ಯ ತುಂಬುತ್ತಿದ್ದರು. ತಂದೆಯ ಪ್ರೋತ್ಸಾಹದಿಂದ 10 ವರ್ಷ ಛಲ ಬಿಡದೆ ಓದಿದಳು. ಕೊನೆಗೂ ಸಿಎ ಪಾಸ್​ ಮಾಡುವ ಮೂಲಕ ಬಯಸಿದ್ದನ್ನು ಸಾಧಿಸಿದ್ದಾಳೆ. ಇದೇ ಖುಷಿಯಲ್ಲಿ ತಂದೆಯ ಬಳಿ ಹೋಗಿ ಗಟ್ಟಿಯಾಗಿ ತಬ್ಬಿಕೊಂಡು ಕಣ್ಣೀರು ಹಾಕಿದಳು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಬಹಳ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ಸಣ್ಣ ವಿಷಯಕ್ಕೂ ಖಿನ್ನತೆಗೆ ಒಳಗಾಗುವ ಯುವ ಜನಾಂಗಕ್ಕೆ ನೀನೇ ಸ್ಪೂರ್ತಿ ಎಂದು ಅಮಿತಾಗೆ ಹಲವರು ನೆಟ್ಟಿಗರು ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ.(ಏಜೆನ್ಸೀಸ್​)
ಕಾಲೇಜ್ ಫಂಕ್ಷನ್​ಗೆ ಈ ರೀತಿ ಬರ್ತಾರಾ? ತುಂಡುಡುಗೆ ತೊಟ್ಟು ಬಂದ ಅಮಲಾ ವಿರುದ್ಧ ಆಕ್ರೋಶ

ಹಾರ್ದಿಕ್​ಗೆ ಗಂಭೀರ್​ ಟಾಸ್ಕ್​! ಇದನ್ನು ಸಾಬೀತು ಮಾಡಿದ್ರೆ ಮಾತ್ರ ಪಾಂಡ್ಯಗೆ ಕ್ರಿಕೆಟ್​ನಲ್ಲಿ ಉಳಿವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
