ಸೋಶಿಯಲ್ ಮೀಡಿಯಾದಲ್ಲಿ ಒಗಟುಗಳು ಮತ್ತು ಮೆದುಳಿಗೆ ಕಸರತ್ತು ನೀಡುವ ಆಟಗಳು ಯಾವಾಗಲೂ ವೈರಲ್ ಆಗಲು ಒಂದು ದೊಡ್ಡ ಕಾರಣವಿದೆ. ನಾವೆಲ್ಲರೂ ನಮ್ಮ ಬೌದ್ಧಿಕ ಸಾಮರ್ಥ್ಯವನ್ನು ಮತ್ತು ನಮ್ಮ ಅವಲೋಕನ ಶಕ್ತಿಯನ್ನು ಪರೀಕ್ಷಿಸುವಂತಹ ಸವಾಲುಗಳನ್ನು ಇಷ್ಟಪಡುತ್ತೇವೆ.ಕರೊನಾವೈರಸ್ ಲಾಕ್‌ಡೌನ್ ನಿಂದಾಗಿ ಮನೆಯಲ್ಲೇ ಕಾಲ ಕಳೆಯುವಂತಾದಾಗ ನೆಟ್ಟಿಗರು ಇಂಥದ್ದೇ ಸವಾಲುಗಳನ್ನು ಎದುರುನೋಡುತ್ತಿದ್ದರು.
ಇದನ್ನೂ ಓದಿ:ಸ್ನೇಹಿತರ ಜತೆ ಹೆಂಡತಿ ಮೇಲೆ ಅತ್ಯಾಚಾರ ಮಾಡಿ ಬೀಸಾಕಿದ ಪತಿ!
ಜೂನ್‌ನಲ್ಲಿ, ಟ್ವಿಟರ್‌ನಲ್ಲಿ ಹಂಚಿಕೊಂಡ ಪ್ರಾಣಿಯ ಚಿತ್ರಕ್ಕೆ ಕುತೂಹಲಕಾರಿ, ಆಸಕ್ತಿದಾಯಕ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬಂತು. ಐಎಎಸ್ ಅಧಿಕಾರಿ ಡಾ.ಜೆ.ಕೆ ಸೋನಿ ಟ್ವಿಟ್ಟರ್ ನಲ್ಲಿ ಚಿತ್ರದೊಂದಿಗೆ ಸವಾಲನ್ನು ಪೋಸ್ಟ್ ಮಾಡಿದ್ದಾರೆ. ಮೊದಲ ಪ್ರಯತ್ನದಲ್ಲಿ ಅನೇಕ ಬಳಕೆದಾರರು ಅದನ್ನು ಸರಿಯಾಗಿ ಪತ್ತೆಹಚ್ಚಿದರೆ, ಕೆಲವರು ಗೂಬೆ, ಮತ್ತಿನ್ನೇನೇನೋ ಊಹಿಸಿದ್ದರು.ಚಿತ್ರದಲ್ಲಿ ಒಂದು ಮಲಗುವ ಕೋಣೆ ಇದೆ. ಅದರೊಂದಿಗೆ ಮತ್ತಷ್ಟು ಅಂಶಗಳಿವೆ. ಅವು ಚಿತ್ರದಲ್ಲಿ ಸುಲಭವಾಗಿ ಗೋಚರಿಸುವುದಿಲ್ಲ.ಚಿತ್ರದಲ್ಲಿ ಮಲಗುವ ಕೋಣೆ, ಕಂಬಳಿ ಮತ್ತು ಹಾಸಿಗೆಯ ಮೇಲೆ ಎರಡು ದಿಂಬುಗಳಿವೆ. ಮೂಲೆಯಲ್ಲಿ ಟೇಬಲ್ ಲ್ಯಾಂಪ್, ನೆಲದ ಮೇಲೆ ಇಯರ್‌ಫೋನ್ ಮತ್ತು ಕೆಲವು ಬಟ್ಟೆಗಳಿವೆ.
ಇದನ್ನೂ ಓದಿ:ಕರೊನಾ ಎಫೆಕ್ಟ್; ‘ಕೆಜಿಎಫ್​ ಚಾಪ್ಟರ್ 2’ ಬಿಡುಗಡೆ ದಿನಾಂಕ ಬದಲು?
ಆದರೆ ಈ ಚಿತ್ರಕ್ಕೆ “ನಾನು 10 ನಿಮಿಷಗಳ ಕಾಲ ನನ್ನ ನಾಯಿಯನ್ನು ಕಾತುರದಿಂದ ಹುಡುಕುತ್ತಿದ್ದೆ” ಎಂದು ಶೀರ್ಷಿಕೆ ನೀಡಲಾಗಿದೆ.ಆದ್ದರಿಂದ, ಈ ಚಿತ್ರದಲ್ಲಿ ನಾಯಿ ಇದೆ ಎಂಬುದು ಗೊತ್ತಾಗುತ್ತದೆ. ಕೆಲವರು ಬೇಗನೆ ಅದನ್ನು ಗುರುತಿಸಲು ಸಾಧ್ಯವಾದರೆ, ಚಿತ್ರದ ಎಲ್ಲ ಮೂಲೆಗಳನ್ನು ಎಚ್ಚರಿಕೆಯಿಂದ ಹುಡುಕಾಡಿದರೂ ಅನೇಕರು ಅದನ್ನು ಗುರುತಿಸಲು ಹೆಣಗಾಡಿದ್ದಾರೆ. ನೀವೂ ಗುರುತಿಸುತ್ತೀರಾ? ಟ್ರೈ ಮಾಡಿ…

ಸಚಿವೆಯೊಬ್ಬರ ಪ್ರಾಣ ತೆಗೆಯಿತು ಕರೊನಾ: ಉತ್ತರ ಪ್ರದೇಶದ ಸಚಿವೆ ಕಮಲಾ ರಾಣಿ ವಿಧಿವಶ

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:one × 4 =
Remember me
