ನವದೆಹಲಿ:ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಕರೊನಾದ ಹೊಸ ಪ್ರಭೇದ ನಿಯೋಕೋವ್ ಮಾರಣಾಂತಕವಾಗುವ ಅಪಾಯ ಇದ್ದು, ಈ ವೈರಸ್ ತಗುಲಿದ ಮೂವರಲ್ಲಿ ಒಬ್ಬರು ಸಾವನ್ನಪು್ಪವ ಸಾಧ್ಯತೆ ಎಂದು ಚೀನಾದ ವುಹಾನ್ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ನಿಯೋಕೋವ್ ಸೋಂಕು ಬಾವಲಿಗಳಲ್ಲಿ ಪಸರಿಸುವಂತಹ ಸಾಂಕ್ರಾಮಿಕವಾಗಿದ್ದು, ದಕ್ಷಿಣ ಆಫ್ರಿಕಾದಲ್ಲಿ ಬಾವಲಿಗಳ ಸಂತತಿ ಹೆಚ್ಚಿರುವ ಪ್ರದೇಶದಲ್ಲೇ ಕಾಣಿಸಿಕೊಂಡಿದೆ ಎಂದು ಬಯೋಆರ್ಕ್ಸಿವ್ ವೆಬ್​ಸೈಟ್​ನಲ್ಲಿ ಪ್ರಕಟವಾದ ಅಧ್ಯಯನದ ಅಂಶ ತಿಳಿಸಿದೆ. ನಿಯೋಕೋವ್ ಹೊಸ ತಳಿ ಅಲ್ಲ, ಇದು 2012 ಮತ್ತು 2015ರಲ್ಲಿ ಮಧ್ಯಪ್ರಾಚ್ಯದಲ್ಲಿ ಕಾಣಿಸಿಕೊಂಡ ಮೆರ್ಸ್-ಕೋವ್ ವೈರಸ್​ನ ಮುಂದುವರಿದ ಭಾಗ. ಈ ಸೋಂಕು ಕೂಡ ಸಾಸ್-ಕೋವ್-2 ರೀತಿಯದ್ದಾಗಿದ್ದು, ಪಿಡಿಎಫ್-2810-ಕೋವ್ ಸೋಂಕಿಗೆ ತೀರ ಹತ್ತಿರದ್ದಾಗಿದೆ. ಈ ವೈರಾಣು ಮಾನವರ ಜೀವಕೋಶದ ಮೇಲೆ ದಾಳಿ ಮಾಡುವಂತಹ ಕರೊನಾಕ್ಕೆ ಕಾರಣವಾಗುತ್ತದೆ ಎಂದು ವುಹಾನ್ ವಿಶ್ವವಿದ್ಯಾಲಯ ಮತ್ತು ಚೀನಾದ ಸೈನ್ಸ್ ಅಕಾಡೆಮಿಯ ಬಯೋಫಿಸಿಕ್ಸ್ ಸಂಸ್ಥೆ ಸಂಶೋಧಕರು ಹೇಳಿದ್ದಾರೆ.
3ನೇ ಅಲೆಯಲ್ಲಿ ಮಕ್ಕಳಲ್ಲಿ ಸೋಂಕು ಅಧಿಕ:ಕೋಲ್ಕತದಲ್ಲಿ ಕಳೆದ ಎರಡು ವಾರದಲ್ಲಿ ಮಕ್ಕಳಲ್ಲಿ ಕರೊನಾ ಸೋಂಕು ಹೆಚ್ಚಾಗಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಿದೆ. ತೀವ್ರ ತರಹದ ಎನ್ಸೆಫಾಲಿಟಿಸ್ ಸಿಂಡ್ರೋಮ್ (ಎಇಎಸ್)ನಿಂದ ನ್ಯುಮೋನಿಯಾ ಉಂಟಾದ ಮಕ್ಕಳ ಸಂಖ್ಯೆ ಅಧಿಕವಾಗಿರುವುದರಿಂದ ಮಕ್ಕಳು ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮೊದಲೆರಡು ಅಲೆಯಲ್ಲಿ ಮಕ್ಕಳಲ್ಲಿ ಕರೊನಾ ಸೋಂಕು ಕಡಿಮೆ ಲಕ್ಷಣ ತೋರಿತ್ತು. ಆದರೆ, ಮೂರನೇ ಅಲೆಯಲ್ಲಿ ವೈರಸ್ ಲಕ್ಷಣ ತೀವ್ರವಾಗಿದೆ. ಹೀಗಾಗಿ ಪಾಲಕರು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ನೀಡಬೇಕು ಐಸಿಎಚ್ ವೈದ್ಯರು ಸಲಹೆ ನೀಡಿದ್ದಾರೆ.
ಪಾಲಕರು ಲಸಿಕೆ ಪಡೆದರೆ ಮಕ್ಕಳಿಗೂ ರಕ್ಷಣೆ:ಪಾಲಕರು ಕೋವಿಡ್ ಲಸಿಕೆ ಪಡೆದಿದ್ದರೆ, ಅಂಥ ಮನೆಗಳಲ್ಲಿ ಮಕ್ಕಳಿಗೆ ಸೋಂಕಿನಿಂದ ರಕ್ಷಣೆ ದೊರೆಯಲಿದೆ ಎಂದು ಹೊಸ ಅಧ್ಯಯನ ವೊಂದು ಹೇಳಿದೆ. ಅಮೆರಿಕದ ಹಾರ್ವಾರ್ಡ್ ವಿಶ್ವವಿದ್ಯಾಲಯದ ಕ್ಲಾಲಿಟ್ ಸಂಶೋಧನಾ ಕೇಂದ್ರ ಮತ್ತು ಇಸ್ರೇಲ್​ನ ಟೆಲ್​ಅವಿವ್ ವಿಶ್ವವಿದ್ಯಾಲಯದ ತಜ್ಞರು ಜಂಟಿಯಾಗಿ ಈ ಅಧ್ಯಯನ ನಡೆಸಿದ್ದು, ವಿಶ್ವದ ಅತ್ಯಂತ ದೊಡ್ಡ ಗಾತ್ರದ ಸಮಗ್ರ ಆರೋಗ್ಯ ಡೇಟಾವನ್ನು ವಿಶ್ಲೇಷಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಧ್ಯಯನ ವರದಿಯು ಜರ್ನಲ್ ಸೈನ್ಸ್​ನಲ್ಲಿ ಪ್ರಕಟವಾಗಿದೆ. ಪಾಲಕರು ಲಸಿಕೆ ಪಡೆದಿದ್ದರೆ ಸೋಂಕಿಗೆ ತುತ್ತಾಗುವ ಸಂಭವ ಕಡಿಮೆ ಮತ್ತು ಅವರಿಂದ ಮನೆಯಲ್ಲಿರುವ ಮಕ್ಕಳಿಗೆ ಸೋಂಕು ಹರಡುವುದು ಇನ್ನೂ ಕಡಿಮೆ. ಹೀಗಾಗಿ ಮಕ್ಕಳಿಗೆ ಕರೊನಾ ವೈರಸ್​ನಿಂದ ಒಂದು ಹಂತಕ್ಕೆ ರಕ್ಷಣೆ ದೊರಕಲಿದೆ ಎಂದು ಈ ಅಧ್ಯಯನ ಹೇಳಿದೆ.
ನಾಸಿಕ ಲಸಿಕೆಯ ಬೂಸ್ಟರ್ ಟ್ರಯಲ್:ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿದ ಮೂಗಿನ ಮೂಲಕ ಪಡೆಯುವ ಲಸಿಕೆಯ ಮೂರನೇ ಡೋಸ್​ಗೆ ಪರೀಕ್ಷೆಗೆ ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ (ಡಿಸಿಜಿಐ) ಒಪ್ಪಿಗೆ ನೀಡಿದೆ. ಈ ಟ್ರಯಲ್ ದೇಶದ ಒಂಬತ್ತು ನಗರಗಳಲ್ಲಿ ನಡೆಯಲಿದೆ. ನಾಸಿಕದ ಮೂಲಕ ಪಡೆಯುವ ಈ ಲಸಿಕೆಯನ್ನು ಭಾರತ್ ಬಯೋಟೆಕ್ 5 ಸಾವಿರ ಆರೋಗ್ಯವಂತರ ಮೇಲೆ ಪೂರ್ವಭಾವಿಯಾಗಿ ಪರೀಕ್ಷಿಸಿತ್ತು. ಇವರಲ್ಲಿ 2,500 ಮಂದಿ ಈಗಾಗಲೇ ಕೊವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್ ಪಡೆದರಾಗಿದ್ದರು.
ದೇಶದಲ್ಲಿ ತಗ್ಗಿದ ದೈನಿಕ ಕೇಸ್:ಭಾರತದಲ್ಲಿ ಶುಕ್ರವಾರ 2,51,209 ಹೊಸಕೇಸ್​ಗಳು ವ್ಯಕ್ತವಾಗಿದ್ದು, ಶೇ. 12ರಷ್ಟು ತಗ್ಗಿದೆ. ಒಟ್ಟಾರೆ ಸೋಂಕಿನ ಸಂಖ್ಯೆ 4.06 ಕೋಟಿಗೆ ಏರಿಕೆ ಕಂಡಿದೆ. ನಿತ್ಯದ ಪಾಸಿಟಿವಿಟಿ ದರ ಶೇ. 19.59ರಿಂದ ಶೇ. 15.88ಕ್ಕೆ ಇಳಿಕೆ ಆಗಿದೆ. 24 ತಾಸಿನಲ್ಲಿ 627 ಮಂದಿ ಸಾವನ್ನಪ್ಪಿದ್ದು, ಒಟ್ಟು ಮರಣ ಸಂಖ್ಯೆ 4,92,327ಕ್ಕೆ ಮುಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 96,861 ಇದ್ದು, ಒಟ್ಟು ಪ್ರಕರಣಗಳಲ್ಲಿ ಇದರ ಪ್ರಮಾಣ ಶೇ. 5.18. ಚೇತರಿಸಿಕೊಂಡವರ ಪ್ರಮಾಣ ಶೇ. 93.60 ಇದೆ.
ಕರೊನಾ ಅಲೆ: ಕರ್ನಾಟಕದಲ್ಲಿ ಯಾವ ರೂಪಾಂತರಿಯ ಪ್ರಭಾವ ಜಾಸ್ತಿ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + four =
Remember me
